ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್ ಮಾರಕ ದಾಳಿ : 3ನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ 78ಕ್ಕೆ ಆಲೌಟ್

ಇಂಗ್ಲೆಂಡ್ ಪರ ಜೇಮ್ಸ್​ ಆ್ಯಂಡರ್ಸನ್ 6ಕ್ಕೆ3, ಆಲ್ಲಿ ರಾಬಿನ್​ಸನ್​ 16ಕ್ಕೆ2, ಸ್ಯಾಮ್ ಕರ್ರನ್ 23ಕ್ಕೆ2, ಕ್ರೇಗ್ ಓವರ್​ಟರ್ನ್​ 14ಕ್ಕೆ 3 ವಿಕೆಟ್​ ಪಡೆದು ಭಾರತವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದರು..

India all out
ಭಾರತ 78ಕ್ಕೆ ಆಲೌಟ್

By

Published : Aug 25, 2021, 7:47 PM IST

ಲೀಡ್ಸ್: ಇಂಗ್ಲೆಂಡ್ ವೇಗಿಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತೀಯ ಬ್ಯಾಟ್ಸ್​ಮನ್​ಗಳು 3ನೇ ಟೆಸ್ಟ್​​ನ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 78 ರನ್​ಗಳಿಗೆ ಸರ್ವ ಪತನಗೊಂಡಿದೆ.

ಲೀಡ್ಸ್​ನ ಹೆಡಿಂಗ್ಲೆ ಮೈದಾನದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ​ ಇಂಡಿಯಾ ಅನಿರೀಕ್ಷಿತ ಪತನ ಕಂಡಿತು. ಕೇವಲ 21 ರನ್​ಗಳಾಗುವಷ್ಟರಲ್ಲಿ ಕಳೆದ ಪಂದ್ಯದ ಶತಕ ವೀರ ಕೆ ಎಲ್​ ರಾಹುಲ್​(0), ಚೇತೇಶ್ವರ್​ ಪೂಜಾರ(1) ಮತ್ತು ನಾಯಕ ವಿರಾಟ್​ ಕೊಹ್ಲಿ(7)ಯನ್ನು ಅನುಭವಿ ವೇಗಿ ಜೇಮ್ಸ್​ ಆ್ಯಂಡರ್ಸನ್​ ಪೆವಿಲಿಯನ್​ಗಟ್ಟಿದರು.

ನಂತರ ಬಂದ ಅಜಿಂಕ್ಯ ರಹಾನೆ(18) ರೋಹಿತ್​ ಜೊತೆಗೂಡಿ 35 ರನ್​ ಜೊತೆಯಾಟ ನೀಡಿ ಔಟಾದರು. ಇದು ಭಾರತದ ಇನ್ನಿಂಗ್ಸ್​ ಗರಿಷ್ಠ ಜೊತೆಯಾಟವಾಗಿತ್ತು. ರಹಾನೆ ವಿಕೆಟ್​ ನಂತರ ಭಾರತ ತಂಡ ದಿಢೀರ್ ಪತನಗೊಂಡಿತು.

ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ರಿಷಭ್ ಪಂತ್(2), ರವೀಂದ್ರ ಜಡೇಜಾ(4), ರೋಹಿತ್ ಶರ್ಮಾ(19) ಮೊಹಮ್ಮದ್ ಶಮಿ(0) ಮತ್ತು ಜಸ್ಪ್ರೀತ್ ಬುಮ್ರಾ(0) ಬಂದ ಬಿರುಸಿನಲ್ಲೇ ಪೆವಿಲಿಯನ್​ಗೆ ಮರಳಿದರು. ಸಿರಾಜ್​ 3 ರನ್​ಗಳಿಸಿ ಕೊನೆಯ ಬ್ಯಾಟ್ಸ್​ಮನ್​ ಆಗಿ ವಿಕೆಟ್ ಒಪ್ಪಿಸಿದರೆ, ಇಶಾಂತ್ 8 ರನ್​ಗಳಿಸಿ ಅಜೇಯರಾಗುಳಿದರು.

ಭಾರತದ ಪರ ರೋಹಿತ್ ಶರ್ಮಾ (19) ಮತ್ತು ಅಜಿಂಕ್ಯ ರಹಾನೆ ಮಾತ್ರ ಎರಡಂಕಿ ಮೊತ್ತ ದಾಖಲಿಸಿದರು. ಉಳಿದವರೆಲ್ಲಾ ಒಂದಂಕಿ ಮೊತ್ತಕ್ಕೆ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದರು.

ಇಂಗ್ಲೆಂಡ್ ಪರ ಜೇಮ್ಸ್​ ಆ್ಯಂಡರ್ಸನ್ 6ಕ್ಕೆ3, ಆಲ್ಲಿ ರಾಬಿನ್​ಸನ್​ 16ಕ್ಕೆ2, ಸ್ಯಾಮ್ ಕರ್ರನ್ 23ಕ್ಕೆ2, ಕ್ರೇಗ್ ಓವರ್​ಟರ್ನ್​ 14ಕ್ಕೆ 3 ವಿಕೆಟ್​ ಪಡೆದು ಭಾರತವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದರು.

ಇದನ್ನು ಓದಿ : ಹೆಚ್ಚು ಬಾರಿ ಕೊಹ್ಲಿ ವಿಕೆಟ್​ ಪಡೆದ ದಾಖಲೆ, ಲಿಯಾನ್​ ಜೊತೆ ಹಂಚಿಕೊಂಡ ಆ್ಯಂಡರ್ಸನ್​

ABOUT THE AUTHOR

...view details