ಕರ್ನಾಟಕ

karnataka

ETV Bharat / sports

ಬ್ಯಾಟಿಂಗ್ ವೈಫಲ್ಯದಿಂದ ಭಾರತ 174ಕ್ಕೆ ಆಲೌಟ್​: ದಕ್ಷಿಣ ಆಫ್ರಿಕಾಗೆ 305 ರನ್​​ಗಳ ಗುರಿ ನೀಡಿದ ಕೊಹ್ಲಿ ಪಡೆ - ರಿಷಭ್ ಪಂತ್

130 ರನ್​ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿದ್ದ ಭಾರತ 4ನೇ ದಿನ 174 ರನ್​ಗಳಿಗೆ ಆಲೌಟ್ ಆಯಿತು. ರಿಷಭ್ ಪಂತ್ 34 ರನ್​ಗಳಿಸಿದ್ದೇ ತಂಡದ ಗರಿಷ್ಠ ರನ್ ಆಯಿತು.

India all out for 174 in 2nd innings, sets 305 for SA to win 1st Test
ದಕ್ಷಿಣ ಆಫ್ರಿಕಾಗೆ 305ರನ್​ಗಳ ಟಾರ್ಗೆಟ್ ನೀಡಿದ ದಕ್ಷಿಣ ಅಫ್ರಿಕಾ

By

Published : Dec 29, 2021, 6:11 PM IST

ಸೆಂಚುರಿಯನ್​: ದಕ್ಷಿಣ ಆಫ್ರಿಕಾ ಮಾರಕ ಬೌಲಿಂಗ್ ದಾಳಿಗೆ ಉತ್ತರಿಸಿಲಾಗದ ಭಾರತ ತಂಡ ತನ್ನ 2ನೇ ಇನ್ನಿಂಗ್ಸ್​ನಲ್ಲಿ ಕೇವಲ 174 ರನ್​ಗಳಿಗೆ ಆಲೌಟ್ ಆಗಿದೆ. ಆದರೂ 305 ರನ್​ಗಳ ಕಠಿಣ ಗುರಿ ನೀಡುವಲ್ಲಿ ಸಫಲವಾಗಿದೆ.

130 ರನ್​ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿದ್ದ ಭಾರತ 4ನೇ ದಿನ 174 ರನ್​ಗಳಿಗೆ ಆಲೌಟ್ ಆಯಿತು. ರಿಷಭ್ ಪಂತ್ 34 ರನ್​ಗಳಿಸಿದ್ದೇ ತಂಡದ ಗರಿಷ್ಠ ರನ್ ಆಯಿತು.

ನಿನ್ನೆ ಅಜೇಯರಾಗುಳಿದಿದ್ದ ಕೆಎಲ್ ರಾಹುಲ್​ 23 ಮತ್ತು ಠಾಕೂರ್​ 10ರನ್​ಗಳಿಸಿನ ವಿಕೆಟ್​ ಒಪ್ಪಿಸಿದರು. ಚೇತೇಶ್ವರ್​ ಪೂಜಾರ 16 , ವಿರಾಟ್ ಕೊಹ್ಲಿ 18, ಅಜಿಂಕ್ಯ ರಹಾನೆ 20, ರಿಷಭ್ ಪಂತ್ 34, ರವಿಚಂದ್ರನ್​ ಅಶ್ವಿನ್​ 14, ರನ್​ಗಳಿಸಿದರು. ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ 42ಕ್ಕೆ 4, ಮ್ಯಾಕ್ರೋ ಜಾನ್ಸನ್​ 55ಕ್ಕೆ 4, ಲುಂಗಿ ಎಂಗಿಡಿ 31ಕ್ಕೆ 2 ವಿಕೆಟ್ ಪಡೆದರು.

ಇದನ್ನೂ ಓದಿ:ನಿವೃತ್ತಿಗೂ ಮುನ್ನ ಭಾರತದಲ್ಲಿ ಟೆಸ್ಟ್​ ಸರಣಿ ಗೆದ್ದರೆ, ದೊಡ್ಡ ಸಾಧನೆ ಎಂದು ಭಾವಿಸುವೆ: ಡೇವಿಡ್​ ವಾರ್ನರ್​

ABOUT THE AUTHOR

...view details