ನವದೆಹಲಿ: ಹಾಂಗ್ಕಾಂಗ್ನಲ್ಲಿ ನಡೆಯುತ್ತಿರುವ ಮಹಿಳಾ ಉದಯೋನ್ಮುಖ ಏಷ್ಯಾ ಕಪ್ 2023ರಲ್ಲಿ ಭಾರತ ತಂಡ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ. ಸೆಮಿಫೈನಲ್ ಆಡದೇ ಭಾರತ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿರುವುದು ವಿಶೇಷವಾಗಿದೆ. ಇಂದು ಶ್ರೀಲಂಕಾ ಮಹಿಳಾ ಎ ತಂಡದ ವಿರುದ್ಧ ಭಾರತದ ಮಹಿಳಾ ಎ ತಂಡ ಕಣಕ್ಕಿಳಿಯಬೇಕಿತ್ತು. ಆದರೆ ಮಳೆಯಿಂದಾಗಿ ಪಂದ್ಯ ರದ್ದಾಯಿತು. ಇದರಿಂದಾಗಿ ಅಂಕ ಪಟ್ಟಿಯಲ್ಲಿ ಹೆಚ್ಚು ರನ್ರೇಟ್ ಹೊಂದಿರುವ ಭಾರತ ಫೈನಲ್ ನೇರ ಆಯ್ಕೆ ಅವಕಾಶ ಸಿಕ್ಕಿತು.
ಎರಡನೇ ಸೆಮಿಫೈನಲ್ನಲ್ಲಿ ಪಾಕಿಸ್ತಾನ ತಂಡ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಿದ್ದು, ಬಾಂಗ್ಲಾ ಗೆಲುವು ದಾಖಲಿಸಿದೆ. ಎರಡನೇ ಸೆಮಿಫೈನಲ್ ಕೂಡಾ ಮಳೆಯ ಸಮಸ್ಯೆ ಎದುರಿಸಿದ್ದು ಪಂದ್ಯವನ್ನು 9 ಓವರ್ಗಳಿಗೆ ಇಳಿಸಲಾಗಿತ್ತು. ಇದರಲ್ಲಿ ಬಾಂಗ್ಲಾ 9 ಓವರ್ಗೆ 7 ವಿಕೆಟ್ ಕಳೆದುಕೊಂಡು 59 ರನ್ ಗಳಿಸಿದರೆ, ಪಾಕಿಸ್ತಾನ 9 ಓವರ್ನಲ್ಲಿ 4 ಕಳೆದುಕೊಂಡು ಕೇವಲ 53 ರನ್ ಮಾತ್ರ ಗಳಿಸಿತ್ತು. ಬಾಂಗ್ಲಾದೇಶ 6 ರನ್ನ ಗೆಲುವು ದಾಖಲಿಸಿತು. ನಾಳೆ ನಡೆಯಲಿರುವ ಫೈನಲ್ನಲ್ಲಿ ಯಾರಿಗೆ ಗೆಲುವು ಅನ್ನೋದು ಕುತೂಹಲ ಕೆರಳಿಸಿದೆ. ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ 11 ಗಂಟೆಯಿಂದ ಪಂದ್ಯ ಶುರುವಾಗಲಿದೆ.
ಇದನ್ನೂ ಓದಿ:On This Day: ದ್ರಾವಿಡ್ - ಗಂಗೂಲಿ - ಕೊಹ್ಲಿ ಟೆಸ್ಟ್ ವೃತ್ತಿಜೀವನ ಪ್ರಾರಂಭಿಸಿದ ದಿನ