ಕರ್ನಾಟಕ

karnataka

ETV Bharat / sports

ಹುಬ್ಬಳ್ಳಿಯಲ್ಲಿ IND vs NZ A Test: 2 ವಿಕೆಟ್ ಕಳೆದುಕೊಂಡ ಭಾರತಕ್ಕೆ ಆರಂಭಿಕ ಆಘಾತ

ರಾಜನಗರದ ಕೆಎಸ್​​ಸಿಎ ಮೈದಾನದಲ್ಲಿ ಭಾರತ ಹಾಗೂ ನ್ಯೂಜಿಲ್ಯಾಂಡ್​ ಎ ತಂಡಗಳ ನಡುವೆ ನಾಲ್ಕು ದಿನಗಳ ಟೆಸ್ಟ್ ಪಂದ್ಯ ಆರಂಭಗೊಂಡಿದೆ.

India A vs New Zealand A Test Match
India A vs New Zealand A Test Match

By

Published : Sep 9, 2022, 1:56 PM IST

ಹುಬ್ಬಳ್ಳಿ:ತೇವಾಂಶದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕೆಎಸ್​​ಸಿಎ ಕ್ರೀಡಾಂಗಣದಲ್ಲಿ ಭಾರತ ಹಾಗೂ ನ್ಯೂಜಿಲ್ಯಾಂಡ್​ ಎ ತಂಡಗಳ ನಡುವೆ ಒಂದು ದಿನ ತಡವಾಗಿ ಪಂದ್ಯ ಆರಂಭಗೊಂಡಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಲು ಮುಂದಾಗಿರುವ ಟೀಂ ಇಂಡಿಯಾ ಆರಂಭಿಕ ಆಘಾತಕ್ಕೊಳಗಾಗಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇಂಡಿಯಾ ನ್ಯೂಜಿಲ್ಯಾಂಡ್​ ಎ ತಂಡಗಳ ಕ್ರಿಕೆಟ್ ಪಂದ್ಯ

ಊಟದ ವಿರಾಮದ ವೇಳೆಗೆ 19 ಓವರ್​​​​ಗಳಲ್ಲಿ ಪ್ರಮುಖ ಎರಡು ವಿಕೆಟ್​ ಕಳೆದುಕೊಂಡು 57ರನ್​​​ಗಳಿಸಿದೆ. ನಾಲ್ಕು ದಿನಗಳ ಕಾಲ ಟೆಸ್ಟ್​ ಪಂದ್ಯ ನಡೆಯಲಿದೆ. ಇಂಡಿಯಾ ಎ ತಂಡ 19 ಓವರ್​​​​ಗಳಲ್ಲಿ​ 2 ವಿಕೆಟ್​ ನಷ್ಟಕ್ಕೆ 57 ರನ್​​ಗಳಿಸಿದ್ದು, ಸದ್ಯ ಕ್ಯಾಪ್ಟನ್​ ಪ್ರಿಯಾಂಕ್​ ಪಾಂಚಾಲ್​ 25ರನ್​​​ಗಳಿಸಿ, ರಕ್ಷಣಾತ್ಮಕ ಆಟದ ಮೊರೆ ಹೋಗಿದ್ದಾರೆ. ಇವರಿಗೆ ಸಾಥ್​ ನೀಡಿರುವ ರಜತ್​ ಪಾಟೀದಾರ್​​ 4ರನ್​​​​ಗಳಿಸಿ ಕ್ರೀಸ್​​ನಲ್ಲಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿ: ತೇವಾಂಶ ಹಿನ್ನೆಲೆ ಭಾರತ - ನ್ಯೂಜಿಲ್ಯಾಂಡ್​​ ಎ ತಂಡಗಳ ಟೆಸ್ಟ್ ನಾಳೆಗೆ ಮುಂದೂಡಿಕೆ

ಟಾಸ್​ ಗೆದ್ದ ನ್ಯೂಜಿಲ್ಯಾಂಡ್ ತಂಡ ಟಾಮ್​​ ಬ್ರೂಸ್​ ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡಿದ್ದು, ಮೈದಾನದ ತೇವಾಂಶದ ಲಾಭ ಪಡೆದುಕೊಳ್ಳಲು ಮುಂದಾಗಿದೆ. ಭಾರತದ ಅಭಿಮನ್ಯು ಈಶ್ವರನ್​​ 22ರನ್​​​ಗಳಿಸಿ ವಿಕೆಟ್​ ಒಪ್ಪಿಸಿದ್ದು, ಋತುರಾಜ್​ ಗಾಯಕ್ವಾಡ್​ ಕೇವಲ 5ರನ್​​​ಗಳಿಸಿ ಪೆವಿಲಿಯನ್​ ಸೇರಿಕೊಂಡರು.

ನ್ಯೂಜಿಲ್ಯಾಂಡ್ ತಂಡದ ಪರ ಬೆಲ್​​ ಎರಡು ವಿಕೆಟ್​ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ABOUT THE AUTHOR

...view details