ಕರ್ನಾಟಕ

karnataka

ETV Bharat / sports

ಲಂಕಾ ಸ್ಪಿನ್​ ಮೋಡಿಗೆ ಭಾರತ ಕಂಗಾಲು: ಅಯ್ಯರ್​ ಏಕಾಂಗಿ ಹೋರಾಟದ ಹೊರತಾಗಿಯೂ 252ಕ್ಕೆ ಆಲೌಟ್​ - ಶ್ರೀಲಂಕಾ ಸ್ಪಿನ್ ಬೌಲಿಂಗ್

ಶ್ರೀಲಂಕಾ ಸ್ಪಿನ್ನರ್​ದಾಳಿಗೆ ಸಿಲುಕಿದ ಭಾರತ ತಂಡ ಶ್ರೇಯಸ್​ ಅಯ್ಯರ್​ (92 ರನ್​) ಅವರ ಏಕಾಂಗಿ ಹೋರಾಟದ ಹೊರತಾಗಿಯೂ ಮೊದಲ ಇನ್ನಿಂಗ್ಸ್​ನಲ್ಲಿ 252ಕ್ಕೆ ಆಲೌಟ್​ ಆಗಿದೆ.

India 252 all out against Sri Lanka in first innings
India 252 all out against Sri Lanka in first innings

By

Published : Mar 12, 2022, 7:55 PM IST

ಬೆಂಗಳೂರು:ಶ್ರೀಲಂಕಾ ವಿರುದ್ಧ ನಡೆದ 2ನೇ ಹಾಗೂ ಅಹರ್ನಿಸಿ ಟೆಸ್ಟ್​ ಪಂದ್ಯದಲ್ಲಿ ಪ್ರವಾಸಿ ತಂಡದ ಸ್ಪಿನ್​ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 252 ರನ್​ಗಳಿಗೆ ಸರ್ವಪತನ ಕಂಡಿದೆ.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರದಿಂದ ಆರಂಭವಾಗಿರುವ ಪಂದ್ಯದಲ್ಲಿ ಟಾಸ್​ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆದರೆ ಭಾರತ ತಂಡ ಯೋಜನೆಗೆ ತಕ್ಕಂತೆ ಬ್ಯಾಟಿಂಗ್ ಮಾಡುವುದಕ್ಕೆ ವಿಫಲವಾಯಿತು.

ಮಯಾಂಕ್ ಅಗರ್ವಾಲ್(4) ಆರಂಭದಲ್ಲೇ ಆತುರ ಪಟ್ಟು ರನ್​ಔಟ್​ ಆದರೆ, ರೋಹಿತ್ ಶರ್ಮಾ(15) ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಇನ್ನು ವಿಹಾರಿ(31) ಮತ್ತು ಕೊಹ್ಲಿ(23) ಉತ್ತಮ ಆರಂಭ ಪಡೆದರಾದರೂ ದೊಡ್ಡ ಮೊತ್ತಕ್ಕೆ ಪರಿವರ್ತಿಸುವಲ್ಲಿ ವಿಫಲರಾದರು.

ಆದರೆ ಎಂದಿನಂತೆ ಸ್ಫೋಟಕ ಬ್ಯಾಟಿಂಗ್​ಗೆ ಮೊರೆ ಹೋದ ಪಂತ್ 26 ಎಸೆತಗಳಲ್ಲಿ 7 ಬೌಂಡರಿ ಸಹಿತ 39 ರನ್​ಗಳಿಸಿ ಎಂಬುಲ್ದೇನಿಯಾ ಬೌಲಿಂಗ್​ನಲ್ಲಿ ಬೌಲ್ಡ್​ ಆದರು. ಕಳೆದ ಪಂದ್ಯದ ಹೀರೋಗಳಾದ ರವೀಂದ್ರ ಜಡೇಜಾ(4) ಮತ್ತು ಅಶ್ವಿನ್​(13) ಮತ್ತು ಇಂದು ಅವಕಾಶ ಪಡೆದಿದ್ದ ಅಕ್ಷರ್ ಪಟೇಲ್(9) ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಾರದೆ ಹೋದರು.

ಒಂದು ಕಡೆ ವಿಕೆಟ್ ಬೀಳುತ್ತಿದ್ದರು, ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದ ಶ್ರೇಯಸ್ ಅಯ್ಯರ್ 98 ಎಸೆತಗಳಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್​ಗಳ ಸಹಿತ 92 ರನ್​ಗಳಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದದರು. ರನ್​ಗಳಿಸಲೇಬೇಕಾದ ಒತ್ತಡಕ್ಕೆ ಸಿಲುಕಿ ದೊಡ್ಡ ಹೊಡೆತಕ್ಕೆ ಪ್ರಯತ್ನಿಸುವ ಯತ್ನದಲ್ಲಿ ಕೇವಲ 8ನ್​ಗಳಿಂದ ತಮ್ಮ 2ನೇ ಶತಕವನ್ನು ತಪ್ಪಿಸಿಕೊಂಡರು.

ಕಳೆದ ಪಂದ್ಯದಲ್ಲಿ ಸ್ಪಿನ್​ ಬೌಲಿಂಗ್​ಗೆ ಉತ್ತರಿಸಲಾಗದೇ ಇನ್ನಿಂಗ್ಸ್​ ಸೋಲು ಕಂಡಿದ್ದ ಶ್ರೀಲಂಕಾ ಈ ಪಂದ್ಯದಲ್ಲಿ ಮೂವರು ಸ್ಪಿನ್ನರ್​ಗಳೊಂದಿಗೆ ಕಣಕ್ಕಿಳಿದು ಭಾರತ ತಂಡಕ್ಕೆ ತಿರುಗೇಟು ನೀಡಿತು. ಪ್ರವೀಣ ಜಯವಿಕ್ರಮ 81ಕ್ಕೆ3, ಲಸಿತ್ ಎಂಬುಲ್ದೇನಿಯಾ 94ಕ್ಕೆ3, ಧನಂಜಯ ಡಿ ಸಿಲ್ವಾ 32ಕ್ಕೆ2 ಮತ್ತು ಲಕ್ಮಲ್ 12ಕ್ಕೆ 1 ವಿಕೆಟ್ ಪಡೆದರು.

ಇದನ್ನೂ ಓದಿ:ಆರ್​ಸಿಬಿಗೆ ನೂತನ ಸಾರಥಿ.. ಫಾಫ್​ ಡು ಪ್ಲೆಸಿಸ್​ರನ್ನು ನಾಯಕನಾಗಿ ಘೋಷಿಸಿದ ರಾಯಲ್​ ಚಾಲೆಂಜರ್ಸ್​

ABOUT THE AUTHOR

...view details