ಕೇಪ್ ಟೌನ್ (ದಕ್ಷಿಣ ಆಫ್ರಿಕಾ):ಮಹಿಳಾ ವಿಶ್ವ ಕಪ್ನ 8ನೇ ಆವೃತ್ತಿ ಸೆಮೀಸ್ ನಿರ್ಣಯದ ಕಣಕ್ಕೆ ತಲುಪಿದೆ. ಭಾರತ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 11 ರನ್ನಿಂದ ಸೋಲನುಭವಿಸಿ ಸೆಮೀಸ್ ಪ್ರವೇಶದಿಂದ ವಂಚಿತವಾಗಿತ್ತು. ಇಂದು ಐರ್ಲೆಂಡ್ ವಿರುದ್ಧ ಭಾರತೀಯ ವನಿತೆಯರು ಕಣಕ್ಕಿಳಿಯುತ್ತಿದ್ದು, ಉತ್ತಮ ರನ್ ರೇಟ್ನಿಂದ ಗೆಲ್ಲುವ ಅಗತ್ಯ ಇದೆ.
ಭಾರತ ಮತ್ತು ಐರ್ಲೆಂಡ್ ನಡುವಿನ ಪಂದ್ಯವು ಸೇಂಟ್ ಜಾರ್ಜ್ ಪಾರ್ಕ್ ಗೆಕೆಬೆರಾದಲ್ಲಿ ಸಂಜೆ 6:30 ಕ್ಕೆ ನಡೆಯಲಿದೆ. ಭಾರತ ಮಹಿಳಾ ತಂಡ ವಿಶ್ವಕಪ್‌ನಲ್ಲಿ ಇದುವರೆಗೆ ಎರಡು ಪಂದ್ಯಗಳನ್ನು ಗೆದ್ದು ಬಿ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಮೂರು ಪಂದ್ಯಗಳನ್ನು ಗೆದ್ದಿರುವ ಇಂಗ್ಲೆಂಡ್ ಪ್ರಥಮ ಸ್ಥಾನದಲ್ಲಿದ್ದು, ಸೆಮಿಫೈನಲ್ಗೆ ಪ್ರವೇಶ ಪಡೆದುಕೊಂಡಿದೆ.
ಐಸಿಸಿ ಶ್ರೇಯಾಂಕದಲ್ಲಿ 10ನೇ ಸ್ಥಾನದಲ್ಲಿರುವ ಐರ್ಲೆಂಡ್ ಈಗಾಗಲೇ ಮೂರು ಪಂದ್ಯಗಳಲ್ಲಿ ಸೋತು ಸ್ಪರ್ಧೆಯಿಂದ ಹೊರಬಿದ್ದಿದೆ. ಭಾರತಕ್ಕೆ ಪಾಕಿಸ್ತಾನ ಸ್ಪರ್ಧಾಳುವಾಗಿದೆ. ಭಾರತ ಒಂದು ವೇಳೆ ಈ ಪಂದ್ಯದಲ್ಲಿ ಸೋತರ ಪಾಕಿಸ್ತಾನಕ್ಕೆ ಸೆಮೀಸ್ ಅವಕಾಶ ಸಾಧ್ಯತೆ ಇದೆ. ಪಾಕ್ಗೆ ಇಂಗ್ಲೆಂಡ್ ಮೇಲೆ ಕೊನೆಯ ಪಂದ್ಯ (ಫೆಬ್ರವರಿ 21) ಇದ್ದು ಅದರಲ್ಲಿ, ಜಯಿಸಿದರೆ 4 ಅಂಕ ಆಗಲಿದೆ. ಪಾಕ್ +0.981 ರನ್ ರೇಟ್ ಇರುವುದರಿಂದ ಭಾರತವನ್ನು ಮೂರನೇ ಸ್ಥಾನಕ್ಕೆ ತಳ್ಳಿ ಸೆಮೀಸ್ ಪ್ರವೇಶ ಪಡೆಯಲಿದೆ.
ಇಲ್ಲಿಯವರೆಗೆ ಭಾರತ ಮತ್ತು ಐರ್ಲೆಂಡ್ (IND vs IRE) ಒಂದು ಪಂದ್ಯವನ್ನು ಆಡಿದೆ. 15 ನವೆಂಬರ್ 2018 ರಂದು ಮಹಿಳಾ ವಿಶ್ವಕಪ್‌ನಲ್ಲಿ ಎರಡೂ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ 52 ರನ್‌ಗಳಿಂದ ಐರ್ಲೆಂಡ್ ತಂಡವನ್ನು ಸೋಲಿಸಿತು. ಪಂದ್ಯದಲ್ಲಿ ಮಿಥಾಲಿ ರಾಜ್ 56 ಎಸೆತಗಳಲ್ಲಿ 51 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಮೊದಲೆರಡು ಪಂದ್ಯದಲ್ಲಿ ಟಾಸ್ ಸೋತು ಪಂದ್ಯ ಗೆದ್ದಿದ್ದ ಭಾರತ, ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದು ಪಂದ್ಯದಲ್ಲಿ ಸೋಲನುಭವಿಸಿತು. ಸತತ ಮೂರು ಪಂದ್ಯಗಳಿಂದ ವಿಕೆಟ್ ಕೀಪರ್ ರಿಚಾ ಘೋಷ್ 30+ ರನ್ ಮಾಡುತ್ತಿದ್ದು ಭಾರತಕ್ಕೆ ಆಸರೆಯಾಗಿದ್ದಾರೆ. ಬೌಲಿಂಗ್ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದು, ಆಂಗ್ಲರ ವಿರುದ್ಧ ರೇಣುಕಾ ಸಿಂಗ್ 15 ರನ್ ಬಿಟ್ಟುಕೊಟ್ಟು 5 ವಿಕೆಟ್ ಕಬಳಿಸಿ ಟ್ವಿ20 ವಿಶ್ವಕಪ್‌ನಲ್ಲಿ ಐದು ವಿಕೆಟ್ ಗಳಿಸಿದ ದಾಖಲೆ ಬರೆದಿದ್ದಾರೆ.
ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳ ಮೇಲೆ 7 ವಿಕೆಟ್ಗಳ ಜಯವನ್ನು ಸಾಧಸಿತ್ತು. ಈ ಪಂದ್ಯದಲ್ಲಿ ಪಾಕಿಸ್ತಾನವನ್ನು 149 ರನ್ಗೆ ಕಟ್ಟಿಹಾಕಿದ ಭಾರತೀಯ ವನಿತೆಯರು ಕೊನೆಯ ಒಂದು ಓವರ್ ಉಳಿಸಿಕೊಂಡು ಪಂದ್ಯ ಗೆದ್ದಿದ್ದರು. ವೆಸ್ಟ್ ಇಂಡೀಸ್ ಎದುರು ರಿಚಾ ಘೋಷ್ ಮತ್ತು ನಾಯಕಿ ಕೌರ್ ಅವರ ಅದ್ಭುತ ಪ್ರದರ್ಶನದಿಂದ ಗೆಲುವು ದಾಖಲಾಗಿತ್ತು. ಇಂಗ್ಲೆಂಡ್ ಮೇಲೆ ಕೇವಲ 11 ರನ್‌ಗಳಿಂದ ಭಾರತ ಸೋಲನುಭವಿಸಿತ್ತು. ಇಂದಿನ ಪಂದ್ಯದಲ್ಲಿ ಗೆಲ್ಲುವ ಫೆವ್ರೀಟ್ ತಂಡ ಭಾರತವೇ ಆಗಿದೆ. ಪಂದ್ಯ ಭಾರತೀಯ ಕಾಲಮಾನ 6:30ಕ್ಕೆ ಆರಂಭವಾಗಲಿದೆ. ದಕ್ಷಿಣ ಆಫ್ರಿಕಾದ ಸೇಂಟ್ ಜಾರ್ಜ್ ಪಾರ್ಕ್ ಗೆಕೆಬೆರಾದಲ್ಲಿ ಆಯೋಜಿಸಲಾಗಿದೆ.
ಇದನ್ನೂ ಓದಿ:ಟಿ20 ವಿಶ್ವಕಪ್‌ನಲ್ಲಿ 5 ವಿಕೆಟ್ ಗೊಂಚಲು! ಪಂದ್ಯ ಸೋತರೂ ಮನಸ್ಸು ಗೆದ್ದ ರೇಣುಕಾ ಸಿಂಗ್