ಕರ್ನಾಟಕ

karnataka

By

Published : Feb 10, 2022, 5:50 PM IST

ETV Bharat / sports

ಪಂತ್​ರನ್ನು ಆರಂಭಿಕನಾಗಿ ಕಣಕ್ಕಿಳಿಸಿದ್ದು ಪ್ರಯೋಗವಷ್ಟೆ, ಶಾಶ್ವತ ನಿರ್ಧಾರವಲ್ಲ: ರೋಹಿತ್ ಶರ್ಮಾ

ಬುಧವಾರ ನಡೆದ 2ನೇ ಏಕದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್​​ ಅರ್ಧಶತಕ(64) ಮತ್ತು ಪ್ರಸಿಧ್ ಕೃಷ್ಣ ಅವರ(12ಕ್ಕೆ4) ಅದ್ಭುತ ಬೌಲಿಂಗ್ ನೆರವಿನಿಂದ ಭಾರತ ತಂಡ ವೆಸ್ಟ್​ ಇಂಡೀಸ್​ ವಿರುದ್ಧ 44 ರನ್​ಗಳ ಗೆಲುವು ಸಾಧಿಸಿ 2-0ಯಲ್ಲಿ 3 ಪಂದ್ಯಗಳ ಏಕದಿನ ಸರಣಿಯನ್ನು ವಶಪಡಿಸಿಕೊಂಡಿತ್ತು.

Rohit on Pant opening innings in ODIs
ರೋಹಿತ್ ಶರ್ಮಾ ರಿಷಭ್ ಪಂತ್

ಅಹ್ಮದಾಬಾದ್​: ವಿಂಡೀಸ್​ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ವಿಕೆಟ್​ ಕೀಪರ್​ ರಿಷಭ್ ಪಂತ್​ ಅವರನ್ನು ಆರಂಭಿಕ ಸ್ಥಾನದಲ್ಲಿ ಕಣಕ್ಕಿಳಿಸಿದ್ದು ಒಂದು ಪ್ರಯೋಗವಷ್ಟೇ, ಖಾಯಂ ಆರಂಭಿಕ ಮುಂದಿನ ಪಂದ್ಯದಲ್ಲಿ ಶಿಖರ್​ ಧವನ್​ ತಮ್ಮ ಸ್ಥಾನಕ್ಕೆ ಮರಳಲಿದ್ದಾರೆ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಬುಧವಾರ ನಡೆದ 2ನೇ ಏಕದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್​​ ಅರ್ಧಶತಕ(64) ಮತ್ತು ಪ್ರಸಿಧ್ ಕೃಷ್ಣ ಅವರ(12ಕ್ಕೆ4) ಅದ್ಭುತ ಬೌಲಿಂಗ್ ನೆರವಿನಿಂದ ಭಾರತ ತಂಡ ವೆಸ್ಟ್​ ಇಂಡೀಸ್​ ವಿರುದ್ಧ 44 ರನ್​ಗಳ ಗೆಲುವು ಸಾಧಿಸಿ 2-0ಯಲ್ಲಿ 3 ಪಂದ್ಯಗಳ ಏಕದಿನ ಸರಣಿಯನ್ನು ವಶಪಡಿಸಿಕೊಂಡಿತ್ತು.

ಇನ್ನು ಈ ಪಂದ್ಯದಲ್ಲಿ ರಿಷಭ್ ಪಂತ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸುವ ಮೂಲಕ ರೋಹಿತ್ ಶರ್ಮಾ ಆಶ್ಚರ್ಯಕರ ನಿರ್ಧಾರ ತೆಗೆದುಕೊಂಡಿದ್ದರು. ಪಂತ್ ಭಾರತ ತಂಡದ ಪರ ಇದೇ ಮೊದಲ ಬಾರಿಗೆ ಆರಂಭಿಕನಾಗಿ ಕಣ್ಣಕ್ಕಿಳಿದಿದ್ದರು. ಆದರೆ ಕೇವಲ 18 ರನ್​ಗಳಿಗೆ ವಿಕೆಟ್​ ಒಪ್ಪಿಸಿದ್ದರು.

"ಮ್ಯಾನೇಜ್​​ಮೆಂಟ್​ನಿಂದ ನನಗೆ ವಿಭಿನ್ನ ವಿಷಯಗಳನ್ನು ಮಾಡಲು ಹೇಳಲಾಗಿದೆ. ಆದ್ದರಿಂದ ನಾನು ವಿಶೇಷ ನಿರ್ಧಾರ ತೆಗೆದುಕೊಂಡೆ (ಪಂತ್ ಆರಂಭಿಕನನ್ನಾಗಿ ಕಣಕ್ಕಿಳಿಸಿದ್ದು). ಇದನ್ನು ನಾವು ಒಂದು ಪಂದ್ಯಕ್ಕೆ ಪ್ರಯತ್ನಿಸಲು ಮಾತ್ರ ಬಯಸಿದ್ದೆವೆ, ಇದೇನು ಶಾಶ್ವತ ನಿರ್ಧಾರವಲ್ಲ. ಶಿಖರ್​ ಧವನ್​ ಮುಂದಿನ ಪಂದ್ಯದ ವೇಳೆ ತಂಡಕ್ಕೆ ಮರಳಲಿದ್ದಾರೆ. ಆದರೆ ನಾವು ಇಂತಹ ಕೆಲವು ಪ್ರಯೋಗಗಳನ್ನು ಮಾಡುವುದರಿಂದ ಒಂದಷ್ಟು ಪಂದ್ಯಗಳನ್ನು ಕಳೆದುಕೊಂಡರೂ ಚಿಂತಿಸುವುದಿಲ್ಲ, ಏಕೆಂದರೆ ದೀರ್ಘಾವಧಿಗೆ ತಂಡವನ್ನು ಬಲಿಷ್ಠಗೊಳಿಸುವ ಉದ್ದೇಶ ಮುಖ್ಯವಾಗಿದೆ" ಎಂದು ರೋಹಿತ್ ಪಂದ್ಯದ ನಂತರ ನಡೆದ ಹೇಳಿದ್ದಾರೆ.

ಇದನ್ನೂ ಓದಿ:ಶಿಖರ್​ ಧವನ್​ ಕಮ್​ಬ್ಯಾಕ್ ಬಲ​, ಸರಣಿ ವೈಟ್​ವಾಷ್​ ಮಾಡುವತ್ತ ಕಣ್ಣಿಟ್ಟ ಭಾರತ

ABOUT THE AUTHOR

...view details