ಅಹ್ಮದಾಬಾದ್(ಗುಜರಾತ್):ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ಟೀಂ ಇಂಡಿಯಾ ಉಪನಾಯಕ ಕೆಎಲ್ ರಾಹುಲ್ ಇದೀಗ ತಂಡ ಸರ್ಪಡೆಯಾಗಿದ್ದು, ನೆಟ್ನಲ್ಲಿ ಅಭ್ಯಾಸ ಆರಂಭ ಮಾಡಿದ್ದಾರೆ. ಇವರ ಜೊತೆಗೆ ಹೆಚ್ಚುವರಿಯಾಗಿ ತಂಡ ಸೇರಿಕೊಂಡಿರುವ ಮಯಾಂಕ್ ಅಗರವಾಲ್ ಹಾಗೂ ಕೋವಿಡ್ನಿಂದ ಚೇತರಿಸಿಕೊಂಡಿರುವ ನವದೀಪ್ ಸೈನಿ ಕೂಡ ತರಬೇತಿಯಲ್ಲಿ ಭಾಗಿಯಾದರು.
ವೆಸ್ಟ್ ಇಂಡೀಸ್ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ರೋಹಿತ್ ಪಡೆ ಈಗಾಗಲೇ 1-0 ಅಂತರದ ಮುನ್ನಡೆ ಸಾಧಿಸಿದ್ದು, ನಾಡಿದ್ದು ಎರಡನೇ ಏಕದಿನ ಪಂದ್ಯ ಆರಂಭಗೊಳ್ಳಲಿದೆ. ತಂಡಕ್ಕೆ ಕೆಎಲ್ ರಾಹುಲ್ ಮರಳಿರುವ ಕಾರಣ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ದ ಇಶನ್ ಕಿಶನ್ ಆಡುವ 11ರ ಬಳಗದಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ.