ಅಹ್ಮದಾಬಾದ್: ಭಾರತದ ಸ್ಪಿನ್ದ್ವಯರಾದ ವಾಷಿಂಗ್ಟನ್ ಸುಂದರ್ ಮತ್ತು ಯುಜ್ವೆಂದ್ರ ಚಹಲ್ ಅವರ ಕರಾರುವಾಕ್ ದಾಳಿಗೆ ಸಿಲುಕಿದ ವೆಸ್ಟ್ ಇಂಡೀಸ್ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಕೇವಲ 177 ರನ್ಗಳ ಸಾಧಾರಣ ಗುರಿ ನೀಡಿದೆ.
ಅದಿಕೃತವಾಗಿ ನಾಯಕತ್ವ ವಹಿಸಿಕೊಂಡ ರೋಹಿತ್ ಶರ್ಮಾ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಾಯಕನ ನಿರ್ಧಾರಕ್ಕೆ ತಕ್ಕಂತೆ ಬೌಲಿಂಗ್ ಮಾಡಿದ ಮೊಹಮ್ಮದ್ ಸಿರಾಜ್ 3ನೇ ಓವರ್ನಲ್ಲೇ ಆರಂಭಿಕ ಶಾಯ್ ಹೋಪ್ ವಿಕೆಟ್ ಪಡೆದು ಭಾರತಕ್ಕೆ ಮುನ್ನಡೆ ಒದಗಿಸಿಕೊಟ್ಟರು.
2ನೇ ವಿಕೆಟ್ಗೆ ಒಂದಾದ ಬ್ರೆಂಡನ್ ಕಿಂಗ್ ಮತ್ತು ಬ್ರಾವೋ 31 ರನ್ಗಳ ಜೊತೆಯಾಟ ನೀಡಿದರು. ಆದರೆ ಸುಂದರ್ 13 ರನ್ಗಳಿಸಿದ್ದ ಕಿಂಗ್ ವಿಕೆಟ್ ಪಡೆಯುತ್ತಿದ್ದಂತೆ ವಿಂಡೀಸ್ ಪತನ ಆರಂಭವಾಯಿತು.
ಸುಂದರ್ ಮತ್ತು ಚಹಲ್ ದಾಳಿಗೆ ಸಿಲುಕಿದ ವಿಂಡೀಸ್ 79 ರನ್ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತು. ಡರೇನ್ ಬ್ರಾವೋ 18, ಶಮರ್ ಬ್ರೂಕ್ಸ್ 12, ನಿಕೋಲಸ್ ಪೂರನ್ 18, ನಾಯಕ ಕೀರನ್ ಪೊಲಾರ್ಡ್ (0) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.