ಬೆಂಗಳೂರು: ಭಾರತ - ಶ್ರೀಲಂಕಾ ನಡುವೆ ಶನಿವಾರದಿಂದ ಆರಂಭವಾಗಲಿರುವ ದ್ವಿತೀಯ ಹಾಗೂ ಅಹರ್ನಿಶಿ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿರುವ ಕರ್ನಾಟಕ ಕ್ರಿಕೆಟ್ ಸಂಸ್ಥೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ.
ಕೋವಿಡ್ 19 ಕಾರಣ ಕೆಲವು ರಾಜ್ಯಗಳು ಶೆ.25 ಇಲ್ಲವೇ 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡುತ್ತಿವೆ. ಆದರೆ 2 ವರ್ಷಗಳ ನಂತರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆಯುತ್ತಿದ್ದು, ಸ್ಟೇಡಿಯಂನ ಶೇಕಡಾ 100ರಷ್ಟು ವೀಕ್ಷಕರಿಗೆ ಅನುಮತಿ ನೀಡಲಿದ್ದೇವೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ವಾರದ ಹಿಂದೆ ಮಾರ್ಚ್ 12ರಿಂದ 16ರವರೆಗೆ ನಡೆಯಲಿರುವ ಅಹರ್ನಿಶಿ ಟೆಸ್ಟ್ ಪಂದ್ಯಕ್ಕೆ 50% ವೀಕ್ಷಕರಿಗೆ ಮೈದಾನದೊಳಗೆ ಪಂದ್ಯ ಅನುಮತಿ ನೀಡಲಾಗಿತ್ತು. ಸೀಮಿತ ಟಿಕೆಟ್ ಲಭ್ಯವಾಗಿದ್ದರಿಂದ ಎಲ್ಲಾ ಟಿಕೆಟ್ಗಳು ಮಾರಾಟವಾಗಿದ್ದವು. ಆದರೆ ರಾಜ್ಯದಲ್ಲಿ ವಿಧಿಸಲಾಗಿದ್ದ ಕೋವಿಡ್ ನಿರ್ಬಂಧ ತೆರವಾಗಿರುವ ಕಾರಣ ಸಂಸ್ಥೆ 100% ವೀಕ್ಷಕರಿಗೆ ಅನುಮತಿ ನೀಡಲಾಗುವುದು ಎಂದು ತಿಳಿಸಿದೆ.