ಕರ್ನಾಟಕ

karnataka

ETV Bharat / sports

ಭಾರತ-ಶ್ರೀಲಂಕಾ ಅಹರ್ನಿಶಿ ಟೆಸ್ಟ್: ಚಹಾ ವಿರಾಮಕ್ಕೆ 4 ವಿಕೆಟ್ ಕಳೆದುಕೊಂಡ ಭಾರತ; ಕೊಹ್ಲಿ,ರೋಹಿತ್ ಮತ್ತೊಮ್ಮೆ ವೈಫಲ್ಯ

ಪ್ರಸ್ತುತ ಚಹಾ ಬ್ರೇಕ್ ವೇಳೆಗೆ ಭಾರತ 29 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 84 ರನ್​ಗಳಿಸಿದೆ. ರಿಷಭ್ ಪಂತ್ 16 ಮತ್ತು ಅಯ್ಯರ್ 1 ರನ್​ಗಳಿಸಿ ಕ್ರೀಸ್​ನಲ್ಲಿದ್ದಾರೆ.

By

Published : Mar 12, 2022, 4:31 PM IST

Ind vs SL pink ball test
ಭಾರತ-ಶ್ರೀಲಂಕಾ ಅಹರ್ನಿಶಿ ಟೆಸ್ಟ್

ಬೆಂಗಳೂರು: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಅಹರ್ನಿಶಿ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ ಆರಂಭಿಕ ಆಘಾತಕ್ಕೆ ಒಳಗಾಗಿದೆ. ಟಾಸ್​ ಗೆದ್ದು ಬ್ಯಾಟಿಂಗ್ ಮಾಡುತ್ತಿರುವ ಭಾರತ ತಂಡ 86 ರನ್​ಗಳಾಗುವಷ್ಟರಲ್ಲಿ ಮೊದಲ ನಾಲ್ಕು ಬ್ಯಾಟರ್​ಗಳನ್ನು ಕಳೆದುಕೊಂಡಿದೆ.

ಸರಣಿ ಕ್ಲೀನ್ ಸ್ವೀಪ್ ಸಾಧಿಸುವ ವಿಶ್ವಾಸದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ ಕೇವಲ 10 ರನ್​ಗಳಾಗುವಷ್ಟರಲ್ಲಿ ಆರಂಭಿಕ ಮಯಾಂಕ್ ಅಗರ್ವಾಲ್(4) ವಿಕೆಟ್ ಕಳೆದುಕೊಂಡಿತು. ನಂತರ 400ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ನಾಯಕ ರೋಹಿತ್ ಶರ್ಮಾ ಕೇವಲ 15 ರನ್​ಗಳಿಸಿ ಎಂಬುಲ್ದೇನಿಯಾಗೆ ವಿಕೆಟ್ ಒಪ್ಪಿಸಿದರು.

ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಹನುಮ ವಿಹಾರಿ 3ನೇ ವಿಕೆಟ್​ಗೆ ಕೊಹ್ಕಿ ಜೊತೆಗೆ 47 ರನ್​ಗಳ ಜೊತೆಯಾಟ ನಡೆಸಿದರು. 81 ಎಸೆತಗಳಲ್ಲಿ 31 ರನ್​ಗಳಿಸಿದ್ದ ವಿಹಾರಿ ಜಯವಿಕ್ರಮ ಬೌಲಿಂಗ್​ನಲ್ಲಿ ಡಿಕ್ವೆಲ್ಲಾಗೆ ಕ್ಯಾಚ್ ನೀಡಿ ಪೆವಿಲಿಯನ್​ಗೆ ಮರಳಿದರು. ಇದರ ಬೆನ್ನಲ್ಲೆ 48 ಎಸೆತಗಳಲ್ಲಿ 23 ರನ್​ಗಳಿಸಿದ್ದ ವಿರಾಟ್​​ ಧನಂಜಯ ಡಿ ಸಿಲ್ವಾ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು.

ಪ್ರಸ್ತುತ ಚಹಾ ಬ್ರೇಕ್ ವೇಳೆಗೆ ಭಾರತ 29 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 84 ರನ್​ಗಳಿಸಿದೆ. ರಿಷಭ್ ಪಂತ್ 16 ಮತ್ತು ಅಯ್ಯರ್ 1 ರನ್​ಗಳಿಸಿ ಕ್ರೀಸ್​ನಲ್ಲಿದ್ದಾರೆ.

ಇದನ್ನೂ ಓದಿ:ವನಿತೆಯರ ವಿಶ್ವಕಪ್ ಕ್ರಿಕೆಟ್‌ : ಅಬ್ಬರಿಸಿ ನೆಲಕಚ್ಚಿದ ವೆಸ್ಟ್​ಇಂಡೀಸ್​, ಭಾರತಕ್ಕೆ 155 ರನ್​ಗಳ ಭರ್ಜರಿ ಗೆಲುವು!

ABOUT THE AUTHOR

...view details