ಕರ್ನಾಟಕ

karnataka

ETV Bharat / sports

ಸಿಕ್ಸರ್​ ಮೂಲಕ​ ಖಾತೆ ತೆರೆದು ಫೋರ್​ ಮೂಲಕ ಫಿಫ್ಟಿ ದಾಟಿದ ಬರ್ತ್‌ಡೇ ಬಾಯ್ ಇಶಾನ್..

ಇಶಾನ್ ಕಿಶನ್ ಕಳೆದ ಮಾರ್ಚ್​ನಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ವಿಶೇಷವೆಂದರೆ ಆ ಪಂದ್ಯದಲ್ಲೂ ಮೊದಲ ಎಸೆತದಲ್ಲೇ ಬೌಂಡರಿ ಮೂಲಕ ಖಾತೆ ತೆರೆದಿದ್ದರು. ಅಷ್ಟೇ ಅಲ್ಲದೆ 32 ಎಸೆತಗಳಲ್ಲಿ 56 ರನ್​ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಬಾಚಿದ್ದರು..

ಇಶಾನ್ ಕಿಶನ್ ಅರ್ಧಶತಕ
ಇಶಾನ್ ಕಿಶನ್ ಅರ್ಧಶತಕ

By

Published : Jul 18, 2021, 9:10 PM IST

ಕೊಲಂಬೊ : ಶ್ರೀಲಂಕಾ ವಿರುದ್ಧ ಭಾರತ ತಂಡದ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದೆ. ಇನ್ನಿಂಗ್ಸ್​ ಆರಂಭಿಸಿದ ಪೃಥ್ವಿ ಶಾ ಸಿಂಹಳೀಯರ ಬೌಂಡರಿ ಸುತ್ತ ಓಡಿಸಿ ಸುಸ್ತು ಮಾಡಿಸಿದರೆ, ಇಂದೇ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಇಶಾನ್ ಕಿಶನ್ ಕೇವಲ 33 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಜನ್ಮದಿನವನ್ನು ಸಾರ್ಥಕಪಡಿಸಿಕೊಂಡಿದ್ದಾರೆ.

23ನೇ ವಸಂತಕ್ಕೆ ಕಾಲಿಟ್ಟ ಇಶಾನ್ ಕಿಶನ್ ಭಾರತ ತಂಡದ 25ನೇ ವಿಕೆಟ್​ ಕೀಪರ್ ಆಗಿ ಪದಾರ್ಪಣೆ ಮಾಡಿದ್ದರು. ಆರಂಭಿಕ ಬ್ಯಾಟ್ಸ್​ಮನ್ ಪೃಥ್ವಿ ಶಾ 43(24)ರನ್​ಗಳಿಸಿ ಔಟಾಗುತ್ತಿದ್ದಂತೆ ಕ್ರೀಸ್‌ಗೆ ಆಗಮಿಸಿದ ಕಿಶನ್, ತಾವೆದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ಖಾತೆ ತೆರೆದರು. ವಿಶೇಷವೆಂದರೆ ಇದೇ ಓವರ್​ನಲ್ಲಿ ಪೃಥ್ವಿ ಶಾ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್​ ಒಪ್ಪಿಸಿದ್ದರು. ಆದರೆ, ಇಶಾನ್ ಇದನ್ನು ಲೆಕ್ಕಿಸದೇ ಬ್ಯಾಕ್​ ಟು ಬ್ಯಾಕ್​ ಬೌಂಡರಿ ಬಾರಿಸಿದರು.

ಟಿ20ಯಲ್ಲೂ ಪದಾರ್ಪಣೆ ಪಂದ್ಯದಲ್ಲಿ ಅರ್ಧಶತಕ

ಇಶಾನ್ ಕಿಶನ್ ಕಳೆದ ಮಾರ್ಚ್​ನಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ವಿಶೇಷವೆಂದರೆ ಆ ಪಂದ್ಯದಲ್ಲೂ ಮೊದಲ ಎಸೆತದಲ್ಲೇ ಬೌಂಡರಿ ಮೂಲಕ ಖಾತೆ ತೆರೆದಿದ್ದರು. ಅಷ್ಟೇ ಅಲ್ಲದೆ 32 ಎಸೆತಗಳಲ್ಲಿ 56 ರನ್​ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಬಾಚಿದ್ದರು.

ಬೌಂಡರಿ ಮೂಲಕವೇ ಅರ್ಧಶತಕ

ಇನ್ನು, ಸಿಕ್ಸರ್​ ಮೂಲಕ ಖಾತೆ ತೆರೆದ ಕಿಶನ್ ತಾವೆದುರಿಸಿದ ಟಿ20 ಮಾದರಿಯಲ್ಲಿ ಬ್ಯಾಟಿಂಗ್ ನಡೆಸಿ 33ನೇ ಎಸೆತದಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಅವರ ಇನ್ನಿಂಗ್ಸ್​ನಲ್ಲಿ 8 ಆಕರ್ಷಕ ಬೌಂಡರಿ ಮತ್ತು 2 ಭರ್ಜರಿ ಸಿಕ್ಸರ್​ ಸೇರಿತ್ತು.

ಇದನ್ನು ಓದಿ:ಜನ್ಮದಿನದಂದೇ ಏಕದಿನ ಕ್ರಿಕೆಟ್​ಗೆ ಇಶಾನ್ ಕಿಶನ್ ಪದಾರ್ಪಣೆ

ABOUT THE AUTHOR

...view details