ಕರ್ನಾಟಕ

karnataka

ETV Bharat / sports

IND vs SL 3rd ODI ಒಂದೇ ಪಂದ್ಯದಲ್ಲಿ ಐವರು ಪದಾರ್ಪಣೆ: 47 ವರ್ಷಗಳ ಇತಿಹಾಸದಲ್ಲೇ ಮೊದಲು - ಚೇತನ್ ಸಕಾರಿಯಾ

1980ರ ನಂತರ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಏಕದಿನ ಪಂದ್ಯವೊಂದರಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪದಾರ್ಪಣೆಗೆ ಅವಕಾಶ ನೀಡಿ ದಾಖಲೆ ಬರೆದಿದೆ.

Five debutants
Five debutants

By

Published : Jul 23, 2021, 3:39 PM IST

ಕೊಲಂಬೊ(ಶ್ರೀಲಂಕಾ): ಆತಿಥೇಯ ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಹೊಸದೊಂದು ದಾಖಲೆ ನಿರ್ಮಾಣ ಮಾಡಿದೆ. ಒಂದೇ ಪಂದ್ಯದಲ್ಲಿ ಐವರು ಹೊಸಬರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದು ಒಂದು ಹೊಸ ರೆಕಾರ್ಡ್​.

ಲಂಕಾ ವಿರುದ್ಧದ ಎರಡು ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿ ಸರಣಿ ಕೈವಶ ಮಾಡಿಕೊಂಡಿರುವ ಕಾರಣ, ಇಂದಿನ ಪಂದ್ಯದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ದೊರೆತಿದೆ. ಹೀಗಾಗಿ ವಿಕೆಟ್​ ಕೀಪರ್​ ಬ್ಯಾಟ್ಸ್‌ಮನ್​ ಸಂಜು ಸ್ಯಾಮ್ಸನ್​, ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಮಿಂಚು ಹರಿಸಿರುವ ನಿತೀಶ್ ರಾಣಾ, ಚೇತೇಶ್ವರ್ ಸಕಾರಿಯಾ, ಕೆ. ಗೌತಮ್​ ಹಾಗೂ ರಾಹುಲ್​ ಚಹರ್​ ಅವಕಾಶ ಪಡೆದುಕೊಂಡಿದ್ದಾರೆ.

  • ಇಂದಿನ ಪಂದ್ಯದಲ್ಲಿ ಡೆಬ್ಯು ಮಾಡಿದ ಪ್ಲೇಯರ್ಸ್​

1. ಸಂಜು ಸ್ಯಾಮ್ಸನ್​,

2. ನಿತೀಶ್ ರಾಣಾ,

3. ಕೆ. ಗೌತಮ್​,

4. ಚೇತನ್ ಸಕಾರಿಯಾ

5. ರಾಹುಲ್​ ಚಹರ್​

ವಿಶೇಷವೆಂದರೆ 1980ರಲ್ಲಿ ಆಸ್ಟ್ರೇಲಿಯಾದ ಮೆಲ್ಬೋರ್ನ್​ ಕ್ರಿಕೆಟ್​ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಟೀಂ ಇಂಡಿಯಾ ದಿಲೀಪ್ ದೋಶಿ, ,ಕೀರ್ತಿ ಆಜಾದ್​, ರೋಜರ್​ ಬಿನ್ನಿ, ಸಂದೀಪ್ ಪಾಟೀಲ್​ ಹಾಗೂ ತಿರುಮಲೈ ಶ್ರೀನಿವಾಸನ್​ ಭಾರತದ ಪರ ಪದಾರ್ಪಣೆ ಮಾಡಿದ್ದರು. ವಿಕೆಟ್ ಕೀಪರ್​ ಬ್ಯಾಟ್ಸ್‌ಮನ್​​ ಸಂಜು ಸ್ಯಾಮ್ಸನ್‌​ ಈಗಾಗಲೇ 7 ಟಿ-20 ಪಂದ್ಯಗಳನ್ನು ಟೀಂ ಇಂಡಿಯಾ ಪರ ಆಡಿದ್ದಾರೆ. ಆದರೆ ಇದೇ ಮೊದಲ ಸಲ ಏಕದಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದಾರೆ. ಇವರಿಗೆ ಇಶಾನ್​ ಕಿಶನ್ ತಮ್ಮ ಸ್ಥಾನ ಬಿಟ್ಟುಕೊಟ್ಟಿದ್ದಾರೆ.

ಉಳಿದಂತೆ ಕೃನಾಲ್ ಜಾಗಕ್ಕೆ ಕನ್ನಡಿಗ ಕೆ. ಗೌತಮ್​ ಅವಕಾಶ ಪಡೆದುಕೊಂಡಿದ್ದು, ಭುವನೇಶ್ವರ್​ ಸ್ಥಾನದಲ್ಲಿ ನವದೀಪ್​ ಸೈನಿ ಆಡುತ್ತಿದ್ದಾರೆ. ಕುಲ್ದೀಪ್ ಹಾಗೂ ದೀಪಕ್​ ಚಹರ್​ ಸ್ಥಾನಕ್ಕೆ ಚೇತನ್​ ಸಕಾರಿಯಾ,ರಾಹುಲ್​ ಚಹರ್​ ಆಯ್ಕೆಯಾಗಿದ್ದಾರೆ. ಉಳಿದಂತೆ ನೀತಿಶ್ ರಾಣಾಗೂ ಮಣೆ ಹಾಕಲಾಗಿದೆ.

ಇದನ್ನೂ ಓದಿ: IND vs SL: ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದ ಶಿಖರ್ ಪಡೆ, ಕನ್ನಡಿಗ ಗೌತಮ್​ ಸೇರಿ ಐವರು ಪದಾರ್ಪಣೆ

ABOUT THE AUTHOR

...view details