ಕೊಲಂಬೊ:ಆತಿಥೇಯ ಶ್ರೀಲಂಕಾ ವಿರುದ್ಧದ ಕೊನೆಯ ಏಕದಿನ ಪಂದ್ಯ ಆರಂಭಗೊಂಡಿದೆ. ಟಾಸ್ ಗೆದ್ದಿರುವ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ.ಆರ್. ಪ್ರೇಮದಾಸ್ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ಟೀಂ ಇಂಡಿಯಾ 23 ಓವರ್ಗಳಲ್ಲಿ 3ವಿಕೆಟ್ನಷ್ಟಕ್ಕೆ 147ರನ್ಗಳಿಕೆ ಮಾಡಿದ್ದು, ಈ ವೇಳೆ ಮಳೆಯಿಂದಾಗಿ ಸ್ಥಗಿತಗೊಂಡಿತ್ತು. ಇದೀಗ ಪಂದ್ಯ ಪುನರ್ ಆರಂಭಗೊಂಡಿದ್ದು, 47 ಓವರ್ಗಳಿಗೆ ಕಡಿತಗೊಳಿಸಲಾಗಿದೆ.
ಟೀಂ ಇಂಡಿಯಾ ಪರ ಕ್ಯಾಪ್ಟನ್ ಶಿಖರ್ ಧವನ್(13ರನ್), ಪೃಥ್ವಿ ಶಾ(49ರನ್),ಸಂಜು ಸ್ಯಾಮ್ಸನ್(46ರನ್) 11ರನ್ಗಳಿಕೆ ಮಾಡಿರುವ ಮನೀಷ್ ಪಾಂಡೆ ವಿಕೆಟ್ ಒಪ್ಪಿಸಿದ್ದಾರೆ. 22ರನ್ಗಳಿಕೆ ಮಾಡಿರುವ ಸೂರ್ಯಕುಮಾರ್ ಯಾದವ್ ಹಾಗೂ ಮನೀಷ್ ಪಾಂಡೆ ಮೈದಾನದಲ್ಲಿದ್ದಾರೆ.
ಈಗಾಗಲೇ ಮುಕ್ತಾಯಗೊಂಡಿರುವ ಎರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆಲುವು ದಾಖಲಿಸಿದ್ದು ಸರಣಿ ಕೈವಶ ಮಾಡಿಕೊಂಡಿದೆ. ಹಾಗಾಗಿ, ಇಂದಿನ ಪಂದ್ಯದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ.
ಪ್ರಮುಖವಾಗಿ ಇಂದಿನ ಪಂದ್ಯದಲ್ಲಿ ಕಿಶನ್ ಸ್ಥಾನಕ್ಕೆ ಸಂಜು ಸ್ಯಾಮನ್ಸ್ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಬ್ಯಾಟ್ಸ್ಮನ್ ನಿತೀಶ್ ರಾಣಾ, ಸ್ಪಿನ್ನರ್ ಚೇತನ್ ಸಕಾರಿಯಾ, ಕನ್ನಡಿಗ ಆಲ್ರೌಂಡರ್ ಕೆ. ಗೌತಮ್ ಹಾಗೂ ರಾಹುಲ್ ಚಹರ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾರೆ.