ನವದೆಹಲಿ:ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟಿ - 20 ಪಂದ್ಯದಲ್ಲಿ ಭಾರತ ಸೋಲು ಕಂಡಿದ್ದು, ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 0-1 ಅಂತರದ ಹಿನ್ನೆಡೆ ಸಾಧಿಸಿದೆ. ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿದ್ದ ರಿಷಭ್ ಪಂತ್ ಇದೀಗ ಕಳಪೆ ರೆಕಾರ್ಡ್ ಪಟ್ಟಿ ಸೇರಿಕೊಂಡಿದ್ದಾರೆ.
ನಾಯಕತ್ವ ಜವಾಬ್ದಾರಿ ವಹಿಸಿಕೊಂಡ ಮೊದಲ ಪಂದ್ಯದಲ್ಲೇ ಸೋಲು ಕಂಡಿರುವ ಭಾರತೀಯ ನಾಯಕರ ಪಟ್ಟಿಯಲ್ಲಿ ರಿಷಭ್ 2ನೇಯವರಾಗಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ ಕೂಡ ಟಿ-20 ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲೇ ಭಾರತ ಸೋಲು ಕಂಡಿತ್ತು.
ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭಿಕ ಆಟಗಾರ ಇಶಾನ್ ಕಿಶನ್(76)ರನ್ಗಳ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ನಷ್ಟಕ್ಕೆ 211ರನ್ಗಳಿಕೆ ಮಾಡಿತ್ತು. ಇದರ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಡುಸ್ಸೆನ್ ಅಜೇಯ 75 ಹಾಗೂ ಮಿಲ್ಲರ್ 64ರನ್ಗಳ ನೆರವಿನಿಂದ 19.1 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
ಇದನ್ನೂ ಓದಿ:IND vs SA 1st T20: ಬೌಲರ್ಗಳ ಕಳಪೆ ಪ್ರದರ್ಶನ; ದ.ಆಫ್ರಿಕಾ ಎದುರು ಮುಗ್ಗರಿಸಿದ ಭಾರತ
ವಿರಾಟ್ ನಾಯಕತ್ವದ ಮೊದಲ ಟಿ-20 ಪಂದ್ಯದಲ್ಲಿ ಭಾರತ ಸೋಲು: 2017ರಲ್ಲಿ ಇಂಗ್ಲೆಂಡ್ ವಿರುದ್ಧ ಕಾನ್ಫುರ್ನಲ್ಲಿ ನಡೆದ ಪಂದ್ಯದಲ್ಲಿ ಭಾರತ 7 ವಿಕೆಟ್ಗಳ ಸೋಲು ಕಂಡಿತ್ತು. ಆ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ 29 ರನ್ಗಳಿಕೆ ಮಾಡಿದ್ದರು. ನಿನ್ನೆಯ ಪಂದ್ಯದಲ್ಲೂ ರಿಷಭ್ ಪಂತ್ 29ರನ್ಗಳಿಕೆ ಮಾಡಿ ಔಟಾಗಿದ್ದರು.
ಟಿ -20 ಪಂದ್ಯದಲ್ಲಿ 200+ ರನ್ಗಳಿಕೆ ಮಾಡಿದ ಬಳಿಕ ಟೀಂ ಇಂಡಿಯಾ ಯಾವತ್ತೂ ಸೋಲು ಕಂಡಿಲ್ಲ. ಆದರೆ, ನಿನ್ನೆಯ ಪಂದ್ಯದಲ್ಲಿ ಸೋಲಿನ ರುಚಿ ಕಂಡಿದೆ. ಈ ಮೂಲಕ ಚುಟುಕು ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಸಲ ಇಷ್ಟೊಂದು ರನ್ಗಳಿಕೆ ಮಾಡಿ ಸೋಲು ಕಂಡ ತಂಡವಾಗಿ ಸಹ ಹೊರಹೊಮ್ಮಿತು. ಜೊತೆಗೆ ಸತತವಾಗಿ 13ನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಆಸೆ ಕೂಡ ನಿನ್ನೆ ಕೈಗೂಡಲಿಲ್ಲ.
ಭಾರತದ ವಿಶ್ವದಾಖಲೆಯ ಕನಸು ನೂಚ್ಚುನೂರು: ಟಿ-20 ಕ್ರಿಕೆಟ್ನಲ್ಲಿ ಈಗಾಗಲೇ ಸತತವಾಗಿ 12 ಪಂದ್ಯಗಳನ್ನ ಗೆದ್ದ ಭಾರತ, ನಿನ್ನೆಯ ಪಂದ್ಯದಲ್ಲಿ ಗೆಲುವು ದಾಖಲು ಮಾಡಿದರೆ ಹೊಸದೊಂದು ವಿಶ್ವದಾಖಲೆ ನಿರ್ಮಾಣವಾಗುತ್ತಿತ್ತು. ಆದರೆ, ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಆ ಅವಕಾಶ ಕೈತಪ್ಪಿಸಿಕೊಂಡಿತು.