ಗುವಾಹಟಿ: ದಕ್ಷಿಣ ಆಫ್ರಿಕಾದ ಎದುರಿನ ಎರಡನೇ ಟಿ20ಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ ತಂಡ 3 ವಿಕೆಟ್ ನಷ್ಟಕ್ಕೆ 237 ರನ್ಗಳ ಬೃಹತ್ ಮೊತ್ತ ಪೇರಿಸಿದೆ. ಟಾಸ್ ಸೋತು ಬ್ಯಾಟಿಂಗ್ಗಿಳಿದ ಟೀಂ ಇಂಡಿಯಾಕ್ಕೆ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಉತ್ತಮ ಆರಂಭ ನೀಡಿದರು.
ಭಾರತದ ಆರಂಭಿಕ ಬ್ಯಾಟರ್ಗಳು 9.5 ಓವರ್ಗಳಲ್ಲಿ 96 ರನ್ ಜೊತೆಯಾಟ ನೀಡಿದರು. ರೋಹಿತ್ ಶರ್ಮಾ ಬಿರುಸಿನ ಆಟಕ್ಕೆ ಹರಿಣಗಳ ತಂಡದ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. 37 ಎಸೆತದಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ನೊಂದಿಗೆ 43 ರನ್ ಬಾರಿಸಿದರು. 9.5 ಓವರ್ನಲ್ಲಿ ಮಹರಾಜ ಎಸೆದ ಚೆಂಡನ್ನು ಲೆಗ್ ಸೈಡ್ನತ್ತ ಬಾರಿಸಲು ಯತ್ನಿಸಿ ಕ್ಯಾಚ್ ನೀಡಿದರು.
ರಾಹುಲ್ ಆಕರ್ಷಕ ಅರ್ದ ಶತಕ :ಕೆ.ಎಲ್ ರಾಹುಲ್ ಮೊದಲ ಪಂದ್ಯದ ಫಾರ್ಮ್ನ್ನು ಮುಂದುವರೆಸಿದ್ದು ಆಕರ್ಷಕ ಅರ್ದಶತಕ ಬಾರಿಸಿದರು. ಕ್ರೀಸ್ಗೆ ಬಂದಾಗಿನಿಂದಲೇ ಹೊಡಿಬಡಿ ಆಟಕ್ಕೆ ಇಳಿದ ರಾಹುಲ್ 28 ಎಸೆತದಲ್ಲಿ 5 ಬೌಡರಿ ಮತ್ತು 4 ಸಿಕ್ಸರ್ನಿಂದ 57 ರನ್ ಗಳಿಸಿದರು. 11.3ನೇ ಓವರ್ನಲ್ಲಿ ಮಹರಾಜ ಬೌಲಿಂಗಿನಲ್ಲೇ ಎಲ್ಬಿಡಬ್ಲ್ಯೂಗೆ ಬಲಿಯಾದರು.