ಪಾರ್ಲ್: ಬೋಲ್ಯಾಂಡ್‌ನಲ್ಲಿ ನಡೆಯುತ್ತಿರುವ ಭಾರತ-ದ.ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಹರಿಣಗಳು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ತಂಡವನ್ನು ಮುನ್ನಡೆಸುತ್ತಿದ್ದು, ವೆಂಕಟೇಶ್ ಅಯ್ಯರ್‌ಗೆ ಪಂದ್ಯದಲ್ಲಿ ಸ್ಥಾನ ನೀಡಲಾಗಿದೆ.
ತಂಡಗಳು ಇಂತಿವೆ
ಟೀಂ ಇಂಡಿಯಾ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಾಹಲ್.
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿಕಾಕ್ (ವಿಕೆಟ್ ಕೀಪರ್), ಮಲಾನ್, ಮಾರ್ ಕ್ರಮ್, ವಾಂಡರ್ ಡಾಸನ್, ತೆಂಬಾ ಬೌಮಾ (ನಾಯಕ), ಡೇವಿಡ್ ಮಿಲ್ಲರ್, ಪೆಹ್ಲುಕ್ವಾಯೊ, ಜಾನ್ಸನ್, ಕೇಶವ್ ಮಹಾರಾಜ್, ಷಂಸಿ, ಲುಂಗಿ ಎಂಗಿಡಿ.