ಕಾನ್ಪುರ :ಕಿವೀಸ್ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ತಂಡದ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಇಂಗ್ಲೆಂಡ್ ಪ್ರವಾಸದ ಬಳಿಕ ರಹಾನೆ ಮತ್ತೊಮ್ಮೆ ಮೈದಾನಕ್ಕಿಳಿಯಲಿದ್ದು, ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಬೇಕಾದ ಸವಾಲು ಎದುರಿಗಿದೆ. ರಾಹುಲ್ ದ್ರಾವಿಡ್ ಕೋಚ್ ಆದ ಬಳಿಕ ಭಾಗವಹಿಸುತ್ತಿರುವ ಮೊದಲ ಟೆಸ್ಟ್ ಸರಣಿ ಇದಾಗಿದೆ.
ಸದ್ಯ ಕೊನೆಗೊಂಡಿರುವ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಮುಖಭಂಗ ಅನುಭವಿಸಿರುವ ಕಿವೀಸ್ಗೆ ಕೂಡ ಟೆಸ್ಟ್ ಸರಣಿಯು ಸವಾಲಿನದಾಗಿದೆ. ಭಾರತದ ಪಿಚ್, ವಾತಾವರಣಕ್ಕೆ ಕೇನ್ ಪಡೆ ಹೇಗೆ ಹೊಂದಿಕೊಳ್ಳಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ. ಟೆಸ್ಟ್ ರ್ಯಾಂಕಿಂಗ್ನಲ್ಲಿ ಅಗ್ರ ಎರಡು ತಂಡಗಳ ಮುಖಾಮುಖಿಯು ಎಲ್ಲರ ಗಮನ ಸೆಳೆಯಲಿದೆ.
ಎರಡೂ ತಂಡಗಳ 11ರ ಬಳಗ: