ಮುಂಬೈ:ಇಂಗ್ಲೆಂಡ್ ಪ್ರವಾಸದಲ್ಲಿ ಗಾಯಗೊಂಡಿದ್ದ ಶುಬ್ಮನ್ ಗಿಲ್ ತವರಿಗೆ ಮರಳಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ ಪೋಸ್ಟ್ ಮಾಡಿದ್ದು, ಮನೆಗೆ ಬಂದಿರುವ ವಿಷಯವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ವೇಳೆ ಭಾರತ ತಂಡದ ಭಾಗವಾಗಿದ್ದ ಗಿಲ್ ಎರಡೂ ಇನ್ನಿಂಗ್ಸ್ ಮೂಲಕ ಕ್ರಮವಾಗಿ 28 ಮತ್ತು 8 ರನ್ಗಳಿಸಿದ್ದರು. ಈ ವೇಳೆ ಮಣಿಕಟ್ಟಿಗೆ ಗಂಭೀರ ಗಾಯವಾಗಿದ್ದರಿಂದ ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಹೊರಬಿದ್ದಿದ್ದರು.
ಶುಬ್ಮನ್ ಗಿಲ್ ಏರ್ಪೋರ್ಟ್ ರನ್ವೇಯಲ್ಲಿರುವ ಫೋಟೋ ಮತ್ತು ಮನೆಯಲ್ಲಿ ವೆಲ್ಕಮ್ ಟು ಹೋಮ್ ಶುಬಿ ಎಂದು ಬರೆದಿರುವ ಕೇಕ್ ಪೋಟೋವನ್ನು ತಮ್ಮ ಇನ್ಸ್ಟಾಗ್ರಾಮನಲ್ಲಿ ಬರೆದುಕೊಂಡಿದ್ದರು.