ಕರ್ನಾಟಕ

karnataka

ETV Bharat / sports

ಯಾರ್ಕರ್​ ಕಿಂಗ್​​ ವಿಶ್ವ ದಾಖಲೆ: ಟೆಸ್ಟ್​​ನ ಒಂದೇ ಓವರ್​ನಲ್ಲಿ 35ರನ್​​ ಸಿಡಿಸಿ ಲಾರಾ ದಾಖಲೆ ಮುರಿದ ಬುಮ್ರಾ - Batting World Record In Tests

ಯಾರ್ಕರ್​ ಎಸೆತಗಳ ಮೂಲಕ ಮಿಂಚು ಹರಿಸುತ್ತಿದ್ದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್​ ವಿರುದ್ಧದ ಫೈನಲ್​ ಟೆಸ್ಟ್​ ಪಂದ್ಯದಲ್ಲಿ ಬ್ಯಾಟಿಂಗ್​ನಲ್ಲೂ ಅಬ್ಬರಿಸಿದ್ದಾರೆ. ಈ ಮೂಲಕ ಟೆಸ್ಟ್​ನಲ್ಲಿ ಯಾರು ನಿರ್ಮಿಸದ ಸಾಧನೆ ಬರೆದಿದ್ದಾರೆ. ಇದರ ಜೊತೆಗೆ ಬ್ಯಾಟಿಂಗ್ ದಿಗ್ಗಜ ಬ್ರಿಯಾನ್ ಲಾರಾ ದಾಖಲೆ ಬ್ರೇಕ್ ಮಾಡಿದ್ದಾರೆ.

Jasprit Bumrah create history in test cricket
Jasprit Bumrah create history in test cricket

By

Published : Jul 2, 2022, 5:26 PM IST

ಬರ್ಮಿಂಗ್​ಹ್ಯಾಮ್​​:ಭಾರತ-ಇಂಗ್ಲೆಂಡ್​ ನಡುವಿನ ಅಂತಿಮ ಟೆಸ್ಟ್​​ನಲ್ಲಿ ಟೀಂ ಇಂಡಿಯಾ 416ರನ್​​​ಗಳಿಕೆ ಮಾಡಿ ಆಲೌಟ್​​ ಆಗಿದೆ. ಕೊನೆಯದಾಗಿ ಬ್ಯಾಟ್​ ಬೀಸಲು ಮೈದಾನಕ್ಕಿಳಿದ ನಾಯಕ ಜಸ್ಪ್ರೀತ್ ಬುಮ್ರಾ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ. ಈ ಮೂಲಕ ತಾವು ಸಹ ಬ್ಯಾಟಿಂಗ್​ನಲ್ಲಿ ಮಿಂಚು ಹರಿಸುವ ಸಾಮರ್ಥ್ಯ ಹೊಂದಿರುವುದನ್ನು ಸಾಬೀತು ಮಾಡಿದ್ದಾರೆ.

ಮೊಹಮ್ಮದ್ ಶಮಿ ವಿಕೆಟ್ ಪತನಗೊಳ್ಳುತ್ತಿದ್ದಂತೆ ಮೈದಾನಕ್ಕಿಳಿದ ಕ್ಯಾಪ್ಟನ್ ಬುಮ್ರಾ ಒಂದೇ ಓವರ್​ನಲ್ಲಿ 35ರನ್​ಗಳಿಕೆ ಮಾಡಿದರು. ಇಂಗ್ಲೆಂಡ್ ತಂಡದ ಸ್ಟುವರ್ಟ್ ಬ್ರಾಡ್​ ಎಸೆದ ಓವರ್​​ನಲ್ಲಿ 4 ಬೌಂಡರಿ, 2 ಸಿಕ್ಸರ್ ಸಮೇತವಾಗಿ 35ರನ್​​ ಸಿಡಿಸಿದರು. ಇದರಲ್ಲಿ ಒಂದು ವೈಡ್​ ಫೋರ್​ ಸಹ ಸೇರಿಕೊಂಡಿತ್ತು. ಬುಮ್ರಾ ಒಂದೇ ಓವರ್​​ನಲ್ಲಿ ಅತಿ ಹೆಚ್ಚು ರನ್​ಗಳಿಸಿ ವೆಸ್ಟ್​ ಇಂಡೀಸ್​ನ ಶ್ರೇಷ್ಟ ಬ್ಯಾಟರ್ ಬ್ರಿಯಾನ್ ಲಾರಾ ದಾಖಲೆ ಮುರಿದಿದ್ದಾರೆ.

ಇದನ್ನೂ ಓದಿ:ಪಂತ್​, ಜಡೇಜಾ ಶತಕ: ಬುಮ್ರಾ ಸ್ಫೋಟಕ ಆಟ; ಮೊದಲ ಇನ್ನಿಂಗ್ಸ್​ನಲ್ಲಿ 416ರನ್​​ಗಳಿಸಿದ ಇಂಡಿಯಾ

ಒಂದೇ ಓವರ್​ನಲ್ಲಿ ಅತಿ ಹೆಚ್ಚು ರನ್​ಗಳಿಸಿದ ಬುಮ್ರಾ: ಟೆಸ್ಟ್​ ಕ್ರಿಕೆಟ್ ಇತಿಹಾಸದಲ್ಲಿ ಜಸ್ಪ್ರೀತ್ ಬುಮ್ರಾ ಒಂದೇ ಓವರ್​ನಲ್ಲಿ 35ರನ್​​ಗಳಿಕೆ ಮಾಡಿದ್ದು, ಇಷ್ಟೊಂದು ರನ್​ಗಳಿಸಿರುವ ಮೊದಲ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈ ಹಿಂದೆ 2003ರಲ್ಲಿ ಬ್ರೇನ್ ಲಾರಾ ಒಂದೇ ಓವರ್​ನಲ್ಲಿ 28ರನ್​​ಗಳಿಕೆ ಮಾಡಿದ್ದರು. ಇದರ ಜೊತೆಗೆ 2013ರಲ್ಲಿ ಜಾರ್ಜ್​ ಬೈಲಿ ಹಾಗೂ 2020ರಲ್ಲಿ ಕೇಶವ್​ ಮಹಾರಾಜ್​ ಒಂದೇ ಓವರ್​ನಲ್ಲಿ 28ರನ್​​ಗಳಿಕೆ ಮಾಡಿದ್ದರು.

ಟೆಸ್ಟ್​ನಲ್ಲಿ ಒಂದೇ ಓವರ್​ನಲ್ಲಿ ಅತಿ ಹೆಚ್ಚು ರನ್​ಗಳಿಸಿದ ಪ್ಲೇಯರ್ಸ್​

  • ಜಸ್ಪ್ರೀತ್ ಬುಮ್ರಾ 35ರನ್​​: ಬರ್ಮಿಂಗ್​ಹ್ಯಾಮ್​ 2022
  • ಬ್ರಿಯಾನ್ ಲಾರಾ 28ರನ್​​: ಜೋಹಾನ್ಸ್​ ಬರ್ಗ್​ 2003
  • ಜಾರ್ಜ್ ಬೈಲಿ 28ರನ್​​: ಪರ್ತ್​ 2013
  • ಕೇಶವ್ ಮಹಾರಾಜ್​​ 28ರನ್​​: ಪೋರ್ಟ್​ ಎಲಿಜಬೆತ್​ 2022

ಟಿ20ಯಲ್ಲೂ 36ರನ್​ ಬಿಟ್ಟುಕೊಟ್ಟಿರುವ ಬ್ರಾಡ್​: 2007ರಲ್ಲಿ ಭಾರತ-ಇಂಗ್ಲೆಂಡ್​ ನಡುವಿನ ಟಿ20 ಪಂದ್ಯದಲ್ಲೂ ಸ್ಟುವರ್ಟ್​ ಬ್ರಾಡ್​ ಒಂದೇ ಓವರ್​ನಲ್ಲಿ 36ರನ್​ ಬಿಟ್ಟುಕೊಟ್ಟಿದ್ದರು. ಆರು ಎಸೆತಗಳನ್ನ ಯುವರಾಜ್ ಸಿಂಗ್ ಸಿಕ್ಸರ್​ಗೆ ಅಟ್ಟಿದ್ದರು. ಇಂದಿನ ಟೆಸ್ಟ್​ ಪಂದ್ಯದಲ್ಲೂ ಬ್ರಾಡ್​ ದಾಖಲೆಯ 35ರನ್​ ಬಿಟ್ಟುಕೊಟ್ಟಿದ್ದಾರೆ.

ಬುಮ್ರಾಗೆ ಅಭಿನಂದನೆಗಳ ಸುರಿಮಳೆ: ಒಂದೇ ಓವರ್​ನಲ್ಲಿ ಬುಮ್ರಾ 35ರನ್​ಗಳಿಕೆ ಮಾಡ್ತಿದ್ದಂತೆ ಅವರಿಗೆ ಅಭಿನಂದನೆಗಳ ಸುರಿಮಳೆಗೈಯಲಾಗ್ತಿದೆ. ಟ್ವೀಟ್ ಮಾಡಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್​ 'ಇದು ಯುವಿ ನಾ ಅಥವಾ ಬುಮ್ರಾ ನಾ?'(Kya yeh Yuvi hai ya Bumrah!?) ಎಂದು ಪ್ರಶ್ನೆ ಮಾಡಿದ್ದು, 2007ರ ಇನ್ನಿಂಗ್ಸ್​​ ನೆನಪಾಯ್ತು ಎಂದಿದ್ದಾರೆ. ಇನ್ನೂ ಡ್ರೆಸ್ಸಿಂಗ್ ರೂಮ್​ನಲ್ಲಿ ಕುಳಿತಿದ್ದ ವಿರಾಟ್​, ಪಂತ್ ಸೇರಿದಂತೆ ಟೀಂ ಇಂಡಿಯಾ ಪ್ಲೇಯರ್ಸ್​ ಸಂಭ್ರಮಿಸಿದ್ದಾರೆ.

ABOUT THE AUTHOR

...view details