ಓವಲ್(ಇಂಗ್ಲೆಂಡ್):ಭಾರತ-ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನ ಎರಡನೇ ದಿನದಾಟದಲ್ಲಿ ಇಂಗ್ಲೆಂಡ್ ಆಲ್ಔಟ್ ಆಗಿದೆ. ಟೀಂ ಇಂಡಿಯಾ ಬೌಲರ್ಗಳ ಕರಾರುವಾಕ್ ದಾಳಿಗೆ ಸಿಲುಕಿದ ಇಂಗ್ಲೆಂಡ್ 84 ಓವರ್ಗಳಲ್ಲಿ 290 ರನ್ ಗಳಿಸಿ 90 ರನ್ನುಗಳ ಮುನ್ನಡೆ ಪಡೆಯಿತು. ಇದೀಗ ಭಾರತ ಎರಡನೇ ಇನ್ನಿಂಗ್ಸ್ ಆರಂಭಿಸಿದೆ.
ಇಂಗ್ಲೆಂಡ್ ತಂಡ ಮೂರು ವಿಕೆಟ್ಗಳನ್ನು ಮೊದಲ ದಿನದಾಟದಲ್ಲೇ ಕಳೆದುಕೊಂಡಿತ್ತು. ಇಂದು ಉಮೇಶ್ ಯಾದವ್ 2, ಶಾರ್ದೂಲ್ ಠಾಕೂರ್ ಮತ್ತು ಸಿರಾಜ್ ತಲಾ ಒಂದು ವಿಕೆಟ್ ಮತ್ತು ರವೀಂದ್ರ ಜಡೇಜಾ ಎರಡು ವಿಕೆಟ್ ಪಡೆದುಕೊಳ್ಳುವ ಮೂಲಕ ಇಂಗ್ಲೆಂಡ್ ರನ್ ಮುನ್ನಡೆ ಕೇವಲ 90 ರನ್ಗಳಿಗೆ ಸೀಮಿತಗೊಳಿಸಲು ಸಫಲರಾಗಿದರು.
ಮೊದಲನೇ ದಿನದಾಟದಲ್ಲಿ ಬೂಮ್ರಾ 2 ವಿಕೆಟ್, ಉಮೇಶ್ ಯಾದವ್ ಒಂದು ವಿಕೆಟ್ ಪಡೆದಾಕ್ಷಣ ಆತಿಥೇಯರನ್ನು ಆದಷ್ಟು ಬೇಗ ಆಲ್ಔಟ್ ಮಾಡಬಹುದು ಎಂಬ ಆಸೆಗೆ ಇಂಗ್ಲೆಂಡ್ ದಾಂಡಿಗರು ತಣ್ಣೀರೆರಚಿದ್ದಾರೆ.