ಕರ್ನಾಟಕ

karnataka

ETV Bharat / sports

England vs India: ಭಾರತಕ್ಕೆ ರಾಹುಲ್​​ - ಜಡೇಜಾ ಅರ್ಧಶತಕದ ಆಸರೆ.. 95 ರನ್​ಗಳ ಮುನ್ನಡೆ - ಟೀಂ ಇಂಡಿಯಾ ಟೆಸ್ಟ್​​

ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಮಿಂಚಿರುವ ಕನ್ನಡಿಗ ಕೆ.ಎಲ್​ ರಾಹುಲ್​ 84ರನ್​ ಹಾಗೂ ಆಲ್​ರೌಂಡರ್​ ರವೀಂದ್ರ ಜಡೇಜಾ 56ರನ್​ಗಳಿಕೆ ಮಾಡಿದರು.

KL Rahul- Ravindra Jadeja
KL Rahul- Ravindra Jadeja

By

Published : Aug 6, 2021, 8:32 PM IST

ನ್ಯಾಟಿಂಗ್​ಹ್ಯಾಮ್​:ಆತಿಥೇಯ ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​​ ಪಂದ್ಯದಲ್ಲಿ ಭಾರತ 278 ರನ್​ಗಳಿಗೆ ಆಲೌಟ್​ ಆಗಿದ್ದು, ಈ ಮೂಲಕ ಮೊದಲ ಇನ್ನಿಂಗ್ಸ್​​ನಲ್ಲಿ 95 ರನ್​ಗಳ ಮುನ್ನಡೆ ಪಡೆದು ಕೊಂಡಿದೆ.

ಕೆ.ಎಲ್​. ರಾಹುಲ್​ ಬ್ಯಾಟಿಂಗ್​

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​​ ನಡೆಸಿದ್ದ ಇಂಗ್ಲೆಂಡ್​ ತಂಡ ಮೊದಲ ಇನ್ನಿಂಗ್ಸ್​​ನಲ್ಲಿ ಕ್ಯಾಪ್ಟನ್​ ರೂಟ್​​ 64ರನ್​ಗಳ ನೆರವಿನಿಂದ ತನ್ನೆಲ್ಲ ವಿಕೆಟ್​ ಕಳೆದುಕೊಂಡು 183ರನ್​ಗಳಿಕೆ ಮಾಡಿತ್ತು. ಮೊದಲ ಇನ್ನಿಂಗ್ಸ್​​ನಲ್ಲಿ ಮಿಂಚು ಹರಿಸಿದ ಭಾರತದ ಬೌಲರ್​​ಗಳಾದ ಜಸ್​ಪ್ರೀತ್​ ಬುಮ್ರಾ 4ವಿಕೆಟ್​, ಮೊಹಮ್ಮದ್​ ಶಮಿ 3, ಶಾರ್ದೂಲ್​ ಠಾಕೂರ್​ 2 ಹಾಗೂ ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದುಕೊಂಡು ಮಿಂಚಿದರು.

ತಂಡಕ್ಕೆ ಬದ್ರಬುನಾದಿ ಹಾಕಿದ್ದ ರಾಹುಲ್​-ರೋಹಿತ್​​

ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ ಆರಂಭಿಸಿದ್ದ ಭಾರತಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ ಭದ್ರ ಬುನಾದಿ ಹಾಕಿದರು. ಮೊದಲ ವಿಕೆಟ್​ನಷ್ಟಕ್ಕೆ 97ರನ್​ಗಳಿಕೆ ಮಾಡಿದ್ದರು. 36ರನ್​ಗಳಿಕೆ ಮಾಡಿದ್ದ ಸಂದರ್ಭದಲ್ಲಿ ರೋಹಿತ್​ ಶರ್ಮಾ ವಿಕೆಟ್​ ಒಪ್ಪಿಸಿದ್ದರು. ಇದಾದ ಬಳಿಕ ಬಂದ ಪೂಜಾರಾ 4ರನ್, ಕ್ಯಾಪ್ಟನ್​ ವಿರಾಟ್​ 0ರನ್​, ರಹಾನೆ 5ರನ್​ಗಳಿಕೆ ಮಾಡಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು.

ಐದು ವಿಕೆಟ್​​ ಪಡೆದು ಮಿಂಚಿದ ರಾಬಿನ್ಸನ್​​

ಇದನ್ನೂ ಓದಿರಿ: ಟೋಕಿಯೋ ಒಲಿಂಪಿಕ್ಸ್​​: ನಾಳೆ ಕನ್ನಡತಿ ಆದಿತಿ, ರೈತನ ಮಗ ನೀರಜ್ ಚೋಪ್ರಾ ಫೈನಲ್​ ಪಂದ್ಯ

ಇದಾದ ಬಳಿಕ ಬಂದ ವಿಕೆಟ್ ಕೀಪರ್ ಬ್ಯಾಟ್ಸಮನ್​​ ಪಂತ್​​ ಸ್ಫೋಟಕ ಆಟವಾಡಿ 20 ಎಸೆತಗಳಲ್ಲಿ 25ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರು. ಇದಾದ ಬಳಿಕ ರಾಹುಲ್​ ಜೊತೆಗೂಡಿದ ಆಲ್​ರೌಂಡರ್ ಜಡೇಜಾ ಉತ್ತಮ ಆಟವಾಡಿದರು.

ಬ್ಯಾಟಿಂಗ್​ನಲ್ಲಿ ಮಿಂಚಿದ ಜಡೇಜಾ

ರಾಹುಲ್​- ಜಡೇಜಾ ಜೊತೆಯಾಟ

ಮಳೆಯ ಆರ್ಭಟದಿಂದಾಗಿ ಇಂದು ಪಂದ್ಯ ತಡವಾಗಿ ಆರಂಭಗೊಂಡಿತು. ಟೀಂ ಇಂಡಿಯಾ ಮಧ್ಯಮ ಕ್ರಮಾಂಕದಲ್ಲಿ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡರೂ, ರಾಹುಲ್ ಜೊತೆಯಾದ ಜಡೇಜಾ ತಂಡಕ್ಕೆ ಆಸರೆಯಾದರು. ಆದರೆ 84 ರನ್​ಗಳಿಕೆ ಮಾಡಿದ್ದ ವೇಳೆ ರಾಹುಲ್​​ ಆ್ಯಂಡರ್ಸನ್​ ಓವರ್​ನಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ರವೀಂದ್ರ ಜಡೇಜಾ ಆಕರ್ಷಕ ಅರ್ಧಶತಕ(56ರನ್​) ಸಿಡಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಇದಾದ ಬಳಿಕ ಶಾರ್ದೂಲ್ ಠಾಕೂರ್​(0)ವಿಕೆಟ್​ ಒಪ್ಪಿಸಿದರು.

ಸ್ಪೋಟಕ ಆಟವಾಡಿದ ರಿಷಭ್ ಪಂತ್​

ಬಾಲಗೋಚಿಗಳ ಉತ್ತಮ ಪ್ರದರ್ಶನ

ಟೀಂ ಇಂಡಿಯಾಗೆ ಬಾಲಗೋಚಿಗಳು ಉತ್ತಮ ಪ್ರದರ್ಶನ ನೀಡಿದರು. ಕೊನೆ ಕ್ಷಣದಲ್ಲಿ ಬ್ಯಾಟ್​ ಬೀಸಿದ ಮೊಹಮ್ಮದ್ ಶಮಿ 13ರನ್​ಗಳಿಸಿದ್ರೆ, ವೇಗದ ಬೌಲರ್​ ಬುಮ್ರಾ 28 ರನ್​​ ಹಾಗೂ ಸಿರಾಜ್​ 7 ರನ್​ಗಳಿಕೆ ಮಾಡಿದರು. ​ಇಂಗ್ಲೆಂಡ್ ಪರ ಮಿಂಚಿದ ರಾಬಿನ್ಸನ್​ 5 ವಿಕೆಟ್ ಪಡೆದುಕೊಂಡರೆ, ಜೆಮ್ಸ್​ ಆ್ಯಂಡರ್​ಸನ್​ 4 ವಿಕೆಟ್​ ಪಡೆದುಕೊಂಡರು.

ABOUT THE AUTHOR

...view details