ಢಾಕಾ (ಬಾಂಗ್ಲಾದೇಶ): ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಕ್ಲೀನ್ ಸ್ವೀಪ್ನತ್ತ ದಾಪುಗಾಲು ಇಟ್ಟಿದೆ. ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿರುವ ಕೆಎಲ್ ರಾಹುಲ್ ಪಡೆಗೆ ಎರಡನೇ ಪಂದ್ಯದ ಗೆಲುವಿಗೆ ಕೇವಲ 100 ರನ್ಗಳ ಬಾಕಿ ಇದೆ.
ಎರಡನೇ ಪಂದ್ಯದಲ್ಲಿ ತನ್ನ ಮೊದಲ ಇನ್ಸಿಂಗ್ಸ್ನಲ್ಲಿ ಬಾಂಗ್ಲಾದೇಶ 227 ರನ್ಗಳನ್ನು ಬಾರಿಸಿತ್ತು. ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 314 ರನ್ ಬಾರಿಸಿ 87 ರನ್ಗಳ ಮುನ್ನಡೆ ಸಾಧಿಸಿತ್ತು. ಇಂದು ಎರಡನೇ ಇನ್ನಿಂಗ್ಸ್ನಲ್ಲಿ 231 ರನ್ಗಳಿಗೆ ಬಾಂಗ್ಲಾ ತಂಡವನ್ನು ಟೀಂ ಇಂಡಿಯಾ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ.