ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮುಂಬರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯ ಫೆಬ್ರವರಿ 9 ರಂದು ಆರಂಭವಾಗಲಿದೆ. ಜನವರಿ 29 ರಿಂದ ಮೊದಲ ಟೆಸ್ಟ್‌ನ ಟಿಕೆಟ್‌ಗಳ ಮಾರಾಟ ಪ್ರಾರಂಭವಾಗಲಿದೆ. ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಿರುವುದಿಲ್ಲ, ಆದ್ದರಿಂದ ವೀಕ್ಷಕರು ಆಫ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಲು ಬಿಲಿಮೋರಿಯಾ ಪೆವಿಲಿಯನ್, ವಿಸಿಎ, ಸಿವಿಲ್ ಲೈನ್ಸ್, ನಾಗ್ಪುರಕ್ಕೆ ಹೋಗಬೇಕಾಗುತ್ತದೆ. ಟಿಕೆಟ್ ವಿಂಡೋ ಬೆಳಗ್ಗೆ 10:00 ರಿಂದ ಸಂಜೆ 05:00 ರವರೆಗೆ ತೆರೆದಿರುತ್ತದೆ. ಫೆಬ್ರವರಿ 7ರ (ಮಂಗಳವಾರ) ಸಂಜೆ 05:00 ಗಂಟೆಯಿಂದ ಟಿಕೆಟ್‌ಗಳನ್ನು ಮಾರಾಟ ಮಾಡಲು ಬಂದ್ ಮಾಡಲಾಗುವುದು.
ಟಿಕೆಟ್ ಬೆಲೆ: ಬಾರ್ಡರ್ ಗವಾಸ್ಕರ್ ಟ್ರೋಫಿ ಟಿಕೆಟ್‌ಗಳು ವಿಸಿಎ ಹತ್ತನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ 10 ರೂಗಳಿಗೆ ನೀಡಲಾಗುತ್ತಿದೆ. ಸುಮಾರು 4,000 ಟಿಕೆಟ್‌ಗಳನ್ನು ವಿದ್ಯಾರ್ಥಿಗಳಿಗೆ ಕಾಯ್ದಿರಿಸಲಾಗಿದೆ. ಈ ಟಿಕೆಟ್‌ಗಳನ್ನು ಶಾಲೆಯ ಮೂಲಕ ಮಾತ್ರ ಖರೀದಿಸಬಹುದಾಗಿದೆ (ವೈಯಕ್ತಿಕವಾಗಿ ಅಲ್ಲ). ವಿದ್ಯಾರ್ಥಿಗಳು ಮತ್ತು ಶಿಕ್ಷಕರು (ಪ್ರತಿ 25 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರು) ಪಂದ್ಯದ ದಿನದಂದು ತಮ್ಮ ಗುರುತಿನ ಚೀಟಿಯನ್ನು ತೋರಿಸಬೇಕಾಗುತ್ತದೆ. ವಿವಿಧ 13 ವಿಭಾಗಗಳಿಗೆ ವಿಭಿನ್ನ ಬೆಲೆಯನ್ನು ನಿಗದಿಪಡಿಸಲಾಗಿದೆ.
ವಿಂಗ್ಗಳ ಬೆಲೆ ಈ ರೀತಿ ಇದೆ..
ಪಶ್ಚಿಮ ಮೈದಾನ - 10 ರೂ
ಪೂರ್ವ ಮೈದಾನ - 300 ರೂ
ಪೂರ್ವ 1- 300 ರೂ
ವೆಸ್ಟ್ ಗ್ರೌಂಡ್ (ಬೀಜ್ R&S) - 400 ರೂ
ಪಶ್ಚಿಮ 1 - 400 ರೂ
ಉತ್ತರ ನಾಲ್ಕನೇ - 600 ರೂ
ಉತ್ತರ 3 - 800 ರೂ