ಹೈದರಾಬಾದ್: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರನೇ ಮತ್ತು ಅಂತಿಮ ಟಿ-20 ಪಂದ್ಯ ಬುಧವಾರ (ನಿನ್ನೆ) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು. ಈ ರೋಚಕ ಪಂದ್ಯದಲ್ಲಿ ಎರಡು ಸೂಪರ್ ಓವರ್‌ಗಳು ಕಂಡುಬಂದವು. ಭಾರತ ನೀಡಿದ 212 ರನ್‌ಗಳ ಗುರಿಯನ್ನು ಬೆನ್ನತ್ತಿದ್ದ ಅಫ್ಘಾನಿಸ್ತಾನ ಕೂಡ 20 ಓವರ್‌ಗಳಲ್ಲಿ 212 ರನ್ ಗಳಿಸುವ ಮೂಲಕ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಈ ವೇಳೆ ಸೂಪರ್ ಓವರ್ ನಡೆಸಲಾಯಿತು. ಅದೂ ಕೂಡ ಡ್ರಾನಲ್ಲೇ ಕೊನೆಗೊಂಡಿತು. ಇದಾದ ಬಳಿಕ ಎರಡನೇ ಸೂಪರ್ ಓವರ್ ನಡೆಯಿತು ಅದರಲ್ಲಿ ಭಾರತ ತಂಡ ಗೆಲುವು ಸಾಧಿಸಿತು.
ಈ ರೋಚಕ ಪಂದ್ಯದಲ್ಲಿ ಮತ್ತೊಂದು ರೋಚಕ ಸಂಗತಿ ಕೂಡ ಕಂಡುಬಂದಿದೆ. ವಾಸ್ತವವಾಗಿ, ಕಿಂಗ್ ಕೊಹ್ಲಿ ಪಂದ್ಯದಲ್ಲಿ ಒಂದೂ ರನ್ ಗಳಿಸಲು ಸಾಧ್ಯವಾಗದಿದ್ದರೂ, ಫೀಲ್ಡಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೇ ಅವರ ಅದ್ಭುತ ಫೀಲ್ಡಿಂಗ್ನ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಕೂಡ ಆಗಿದೆ.
ಎರಡನೇ ಇನಿಂಗ್ಸ್‌ನ 17ನೇ ಓವರ್‌ನಲ್ಲಿ, ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಸ್ಟ್ರೈಕ್ನಲ್ಲಿದ್ದ ಕರೀಂ ಜನ್ನತ್ ಬ್ಯಾಕ್ ಫುಟ್‌ನಲ್ಲಿ ಚೆಂಡನ್ನು ಬೌಂಡರಿಯತ್ತ ಬಾರಿಸಿದ್ದರು. ಈ ವೇಳೆ ಬೌಂಡರಿ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಸಿಕ್ಸರ್ ಹೋಗದಂತೆ ಹೈಜಂಪ್ ಮಾಡಿ ಚೆಂಡನ್ನು ತಡೆದು 5ರನ್ ಉಳಿಸಿದ್ದರು.