ಮುಂಬೈ :ಲಯ ಕಳೆದುಕೊಂಡಿರುವ ಭಾರತದ ಹಿರಿಯ ಆಟಗಾರರಾದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ ಅವರಿಗೆ ತಂಡದ ಸಂಪೂರ್ಣ ಬೆಂಬಲಿವಿದೆ. ಶುಕ್ರವಾರದಿಂದ ಮುಂಬೈನಲ್ಲಿ ಆರಂಭವಾಗಲಿರುವ ನ್ಯೂಜಿಲ್ಯಾಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಅವರಿಂದ ಒಳ್ಳೆಯ ಪ್ರದರ್ಶನ ಬರಲಿದೆ.
ಅವರಿಬ್ಬರೂ ಫಾರ್ಮ್‌ಗೆ ಬೌನ್ಸ್ಬ್ಯಾಕ್ ಮಾಡಲು ಕೇವಲ ಒಂದು ಇನ್ನಿಂಗ್ಸ್ ದೂರದಲ್ಲಿದ್ದಾರೆ ಎಂದು ಭಾರತದ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಅಭಿಪ್ರಾಯಪಟ್ಟಿದ್ದಾರೆ. 2021ರಲ್ಲಿ ರಹಾನೆ 21 ಇನ್ನಿಂಗ್ಸ್ಗಳಿಂದ 19ರ ಸರಾಸರಿಯಲ್ಲಿ 411 ರನ್ಗಳಿಸಿದ್ದಾರೆ.
ಇದರಲ್ಲಿ 2 ಅರ್ಧಶತಕ ಸೇರಿವೆ. ಇನ್ನು ಪೂಜಾರಾ 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ 193 ರನ್ ಸಿಡಿಸಿದ್ದೆ ಕೊನೆಯ ಶತಕವಾಗಿದೆ. ಕಿವೀಶ್ ವಿರುದ್ಧದ ಮೊದಲ ಪಂದ್ಯದಲ್ಲಿ ರಹಾನೆ 35 ಮತ್ತು 4 ರನ್ಗಳಿಸಿದರೆ, ಪೂಜಾರಾ 26 ಮತ್ತು 22 ರನ್ಗಳಿಸಿ ಔಟಾಗಿದ್ದರು.
"ಅಜಿಂಕ್ಯ ಮತ್ತು ಪೂಜಾರ ಅವರ ಹಿಂದೆ ಸಾಕಷ್ಟು ಅನುಭವವಿದೆ ಎಂದು ನಮಗೆ ತಿಳಿದಿದೆ. ಅವರಿಬ್ಬರು ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಅವರು ಫಾರ್ಮ್‌ಗೆ ಮರಳಲು ಕೇವಲ ಒಂದು ಇನ್ನಿಂಗ್ಸ್ ದೂರದಲ್ಲಿದ್ದಾರೆ ಎಂದು ನಮಗೆ ಒಂದು ತಂಡವಾಗಿ ತಿಳಿದಿದೆ. ಆದ್ದರಿಂದ, ಇಡೀ ತಂಡ ಅವರ ಹಿಂದೆ ಇದೆ ಮತ್ತು ಪ್ರತಿಯೊಬ್ಬರು ಅವರನ್ನು ಬೆಂಬಲಿಸುತ್ತಾರೆ.