ಆ್ಯಂಟಿಗುವಾ: 5ನೇ ಅಂಡರ್ 19 ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಭಾರತ ಕಿರಿಯರ ತಂಡ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.
U19 ಕ್ರಿಕೆಟ್ನಲ್ಲಿ ಭಾರತ ತಂಡ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ. ಭಾರತ 4 ಟ್ರೋಫಿ ಗೆದ್ದಿದ್ದರೆ, 2ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ 1988ರ ಮೊದಲ ಆವೃತ್ತಿ ಸೇರಿದಂತೆ ಒಟ್ಟು 3 ಬಾರಿ ಚಾಂಪಿಯನ್ ಆಗಿ 2ನೇ ಸ್ಥಾನದಲ್ಲಿದೆ. ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ನಾಲ್ಕರ ಘಟ್ಟದ ಪಂದ್ಯವ್ನು ಭಾರತ ಗೆದ್ದರೆ 5 ಬೇ ಬಾರಿ ಪ್ರಶಸ್ತಿ ಎತ್ತಿ ಹಿಡಿದ ತಂಡವಾಗಲಿದೆ.