ಕರ್ನಾಟಕ

karnataka

ETV Bharat / sports

ಟಿ20 ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲೇ ದಾಖಲೆ ವೀಕ್ಷಣೆ ಪಡೆದ ಭಾರತ vs ಪಾಕಿಸ್ತಾನ ಪಂದ್ಯ - ಭಾರತ vs ಪಾಕಿಸ್ತಾನ ಪಂದ್ಯ ವೀಕ್ಷಣೆಯಲ್ಲಿ ದಾಖಲೆ

5 ವರ್ಷಗಳ ನಂತರ ಮರಳಿದ್ದ ಟಿ20 ವಿಶ್ವಕಪ್​ ಕ್ರಿಕೆಟ್​ ಅಭಿಮಾನಿಗಳಿಗೆ ಒಂದು ತಿಂಗಳ ಕಾಲ ಹಬ್ಬವನ್ನುಂಟು ಮಾಡಿತ್ತು. ಜನಪ್ರಿಯ ತಂಡಗಳನ್ನೊಳಗೊಂಡ ಈ ಟೂರ್ನಿಗೆ ಇದೇ ಮೊದಲ ಬಾರಿಗೆ ಯುಎಇ ಮತ್ತು ಒಮಾನ್​ ದೇಶಗಳು ವೇದಿಕೆ ಒದಗಿಸಿದ್ದವು. ದೀರ್ಘಕಾಲದ ನಂತರ ಮರಳಿದ್ದ ಚುಟುಕು ಮಹಾಸಮರ, ವೀಕ್ಷಣೆಯಲ್ಲೂ ದಾಖಲೆ ನಿರ್ಮಿಸಿದೆ.

Ind-Pak 2021 WC clash
ಭಾರತ ಪಾಕಿಸ್ತಾನ ಟಿ20 ಪಂದ್ಯ

By

Published : Nov 25, 2021, 7:52 PM IST

ನವದೆಹಲಿ: ಇತ್ತೀಚೆಗೆ ಯುಎಇಯಲ್ಲಿ ಮುಗಿದ ಟಿ20 ವಿಶ್ವಕಪ್​ನಲ್ಲಿ ಮುಖಾಮುಖಿಯಾಗಿದ್ದ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಲೀಗ್​ ಪಂದ್ಯ ವಿಶ್ವಕಪ್​ ಇತಿಹಾಸದಲ್ಲೇ ಹೆಚ್ಚು ವೀಕ್ಷಣೆ ಪಡೆದ ಪಂದ್ಯ ಎಂಬ ದಾಖಲೆಗೆ ಪಾತ್ರವಾಗಿದೆ.

5 ವರ್ಷಗಳ ನಂತರ ಮರಳಿದ್ದ ಟಿ20 ವಿಶ್ವಕಪ್​ ಕ್ರಿಕೆಟ್​ ಅಭಿಮಾನಿಗಳಿಗೆ ರಸದೌತಣ ಉಣಬಡಿಸಿತ್ತು. ಜನಪ್ರಿಯ ತಂಡಗಳನ್ನೊಳಗೊಂಡ ಈ ಟೂರ್ನಮೆಂಟ್​ಗೆ ಇದೇ ಮೊದಲ ಬಾರಿಗೆ ಯುಎಇ ಮತ್ತು ಒಮಾನ್​ ದೇಶಗಳು ವೇದಿಕೆ ಒದಗಿಸಿದ್ದವು. ದೀರ್ಘಕಾಲದ ನಂತರ ಮರಳಿದ್ದ ಚುಟುಕು ಮಹಾಸಮರ ವೀಕ್ಷಣೆಯಲ್ಲೂ ದಾಖಲೆ ಬರೆದಿದೆ.

ಟೂರ್ನಿಯಲ್ಲಿ ಅತ್ಯಂತ ನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯ ಸ್ಟಾರ್ ಇಂಡಿಯಾ ನೆಟ್‌ವರ್ಕ್‌ನಲ್ಲಿ ಭಾರತದಾದ್ಯಂತ 167 ಮಿಲಿಯನ್ ಮಂದಿಯನ್ನು ತಲುಪಿದ್ದು, ಸುಮಾರು 15.9 ಶತಕೋಟಿ(ಬಿಲಿಯನ್​) ನಿಮಿಷಗಳ ವೀಕ್ಷಣೆ ಪಡೆದಿದೆ.

ಈ ಪಂದ್ಯ ಟಿ20 ವಿಶ್ವಕಪ್​ ಇತಿಹಾಸದಲ್ಲೇ ಅತೀ ಹೆಚ್ಚು ವೀಕ್ಷಣೆ ಪಡೆದ ಪಂದ್ಯ ಎಂಬ ದಾಖಲೆಗೂ ಪಾತ್ರವಾಗಿದೆ. ಈ ಹಿಂದೆ, 2016ರ ಟಿ20 ವಿಶ್ವಕಪ್​ನ ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವಿನ ಸೆಮಿಫೈನಲ್ ಪಂದ್ಯ ಗರಿಷ್ಠ ವೀಕ್ಷಣೆ ಪಡೆದ ಟಿ20 ಪಂದ್ಯವಾಗಿತ್ತು. ಇಡೀ ಟೂರ್ನಮೆಂಟ್ ಭಾರತದಲ್ಲಿ 115 ಶತಕೋಟಿ ವೀಕ್ಷಣೆ ಪಡೆದುಕೊಂಡಿದೆ ಎಂದು ಐಸಿಸಿ ತಿಳಿಸಿದೆ.

ಇದನ್ನೂ ಓದಿ: ಪದಾರ್ಪಣೆ ಪಂದ್ಯದಲ್ಲಿ ಅರ್ಧಶತಕ: ಶ್ರೇಯಸ್ ಅಯ್ಯರ್​ ಪ್ರಶಂಸಿಸಿದ ರೋಹಿತ್

ABOUT THE AUTHOR

...view details