ಕರ್ನಾಟಕ

karnataka

ETV Bharat / sports

ಐಪಿಎಲ್ ಪ್ರಸಾರದ ಹಕ್ಕಿನ ಮೇಲೆ ಆ್ಯಪಲ್, ಯೂಟ್ಯೂಬ್ ಸೇರಿದಂತೆ ವಿಶ್ವದ ದಿಗ್ಗಜ ಕಂಪನಿಗಳ ಕಣ್ಣು

2022ರಿಂದ 84ರ ಬದಲಾಗಿ 10 ತಂಡಗಳು ಕಣಕ್ಕಿಳಿದಿವೆ. ಹೀಗಾಗಿ 2 ತಿಂಗಳ ಅವಧಿಯಲ್ಲಿ ಬರೋಬ್ಬರಿ 74 ಪಂದ್ಯಗಳು ನಡೆಯಲಿವೆ. ಈ ಕಾರಣದಿಂದ ಪ್ರಸಾರದ ಹಕ್ಕನ್ನು ಬೃಹತ್​ ಮೊತ್ತಕ್ಕೆ ಏರಿಕೆ ಮಾಡಿದೆ.

Indian premier league
ಇಂಡಿಯನ್ ಪ್ರೀಮಿಯರ್ ಲೀಗ್

By

Published : Apr 5, 2022, 7:52 PM IST

ಮುಂಬೈ: ಟಿ20 ಕ್ರಿಕೆಟ್​ನ ಅತ್ಯಂತ ಪ್ರಸಿದ್ಧ ಲೀಗ್​ ಆಗಿರುವ ಇಂಡಿಯನ್ ಪ್ರೀಮಿಯರ್​ ಲೀಗ್​ನ ನೇರಪ್ರಸಾರದ ಹಕ್ಕಿಗಾಗಿ ಬಿಸಿಸಿಐ ಈಗಾಗಲೇ ಟೆಂಡರ್​ ಕರೆದಿದೆ. ಬೃಹತ್​ ಮೊತ್ತವನ್ನು ನಿಗದಿ ಮಾಡಿದ್ದರೂ ವಿಶ್ವಪ್ರಸಿದ್ಧ ಕೆಲವು ಕಂಪನಿಗಳು ಶ್ರೀಮಂತ ಲೀಗ್​ನ ನೇರ ಪ್ರಸಾರದ ಹಕ್ಕನ್ನು ಖರೀದಿಸಲು ಉತ್ಸಾಹ ತೋರಿವೆ.

2022ರ ಐಪಿಎಲ್​ ಆವೃತ್ತಿಯೊಂದಿಗೆ ಸ್ಟಾರ್ ಸ್ಪೋರ್ಟ್ಸ್​ ಜೊತೆಗಿನ ಒಪ್ಪಂದ ಅಂತಿಮವಾಗಲಿದೆ. 2023-27ರ ವರೆಗಿನ ಐಪಿಎಲ್ ಪ್ರಸಾರದ ಅಧಿಕೃತ ಹಕ್ಕನ್ನು ಈ ಬಾರಿ ಬಿಸಿಸಿಐ ಹರಾಜಿನ ಮೂಲಕ ಮಾರಾಟ ಮಾಡಲಿದ್ದು, ಇದಕ್ಕಾಗಿ ಬರೋಬ್ಬರಿ 32,890 ಕೋಟಿ ರೂಪಾಯಿಯನ್ನು ನಿಗದಿಮಾಡಿದೆ. 2022ರಿಂದ 84ರ ಬದಲಾಗಿ 10 ತಂಡಗಳು ಕಣಕ್ಕಿಳಿದಿವೆ. ಹೀಗಾಗಿ 2 ತಿಂಗಳ ಅವಧಿಯಲ್ಲಿ ಬರೋಬ್ಬರಿ 74 ಪಂದ್ಯಗಳು ನಡೆಯಲಿವೆ. ಈ ಕಾರಣದಿಂದ ಪ್ರಸಾರದ ಹಕ್ಕನ್ನು ಬೃಹತ್​ ಮೊತ್ತಕ್ಕೆ ಏರಿಕೆ ಮಾಡಿದೆ.

ಆ್ಯಪಲ್​, ಅಮೇಜಾನ್ ಸೇರಿ ಪ್ರಸಿದ್ಧ ಕಂಪನಿಗಳಿಂದ ಪೈಪೋಟಿ;ಕ್ರಿಕೆಟ್​ ಜಗತ್ತಿನ ಶ್ರೇಷ್ಠ ಲೀಗ್​ನ ಪ್ರಸಾರದ ಹಕ್ಕನ್ನು ಖರೀದಿಸುವುದಕ್ಕೆ ಸೋನಿ, ಡಿಸ್ನಿ, ಟಿವಿ18-ವಯಾಕಾಮ್, ಜೀ ಮತ್ತು ಅಮೇಜಾನ್​ ಸೇರಿದಂತೆ ನಗದು ಸಮೃದ್ಧ ಲೀಗ್​ನ ಮೀಡಿಯಾ ರೈಟ್ಸ್​ ಹಕ್ಕನ್ನು ಖರೀದಿಸಲು ಆಸಕ್ತಿ ತೋರಿಸಿವೆ ಎಂದು ತಿಳಿದುಬಂದಿದೆ.

ಅಮೆರಿಕದ ವಿಶ್ವಪ್ರಸಿದ್ಧ ಟೆಕ್ನಾಲಜಿ ಕಂಪನಿ ಆ್ಯಪಲ್​ ಮತ್ತು ಸಾಮಾಜಿಕ ಜಾಲತಾಣವಾದ ಯೂಟ್ಯೂಬ್​ ಕೂಡ ಇಂಡಿಯನ್​ ಪ್ರೀಮಿಯರ್​ ಲೀಗ್​​ನ ಪ್ರಸಾರದ ಹಕ್ಕನ್ನು ಖರೀದಿಸಲು ಮುಂದಾಗಿವೆ ಎಂದು ಟೈಮ್ಸ್ ಆಫ್​ ಇಂಡಿಯಾ ವರದಿ ಮಾಡಿದೆ. ಆದರೆ ಈ ಬಗ್ಗೆ ಬಿಸಿಸಿಐನಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಕಂಪನಿಗಳಲ್ಲದೆ, ಕೆಲವು ಅಷ್ಟೇನು ಜನಪ್ರಿಯವಲ್ಲದ ಸಂಸ್ಥೆಗಳು ಕೂಡ ಸ್ಪರ್ಧೆಯಲ್ಲಿವೆ. ಜೂನ್​ 12ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು, ಮೇ10 ಹರಾಜು ದಾಖಲಾತಿಗಳನ್ನು ಖರೀದಿಸಲು ಕೊನೆಯ ದಿನಾಂಕವಾಗಲಿದೆ.

ಐಪಿಎಲ್​ನಿಂದ ಬರುವಂತಹ ಆದಾಯವನ್ನು ದೇಶದ ಡೊಮೆಸ್ಟೆಕ್​ ಕ್ರಿಕೆಟ್​ ರಚನೆ, ಉತ್ತಮ ಮೂಲ ಸೌಕರ್ಯ ಮತ್ತು ಕ್ರಿಕೆಟ್ ಒಕ್ಕೂಟದ ಕಲ್ಯಾಣಕ್ಕಾಗಿ ಬಳಕೆ ಮಾಡಲಾಗುತ್ತದೆ. ಈ ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿರಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.

ಇದನ್ನೂ ಓದಿ:ಟೇಬಲ್​ ಟೆನಿಸ್ ರ‍್ಯಾಂಕಿಂಗ್‌ನಲ್ಲಿ ಐತಿಹಾಸಿಕ ಸಾಧನೆಗೆ ಪಾತ್ರರಾದ ಮನಿಕಾ ಬಾತ್ರಾ-ಅರ್ಚನಾ ಜೋಡಿ

ABOUT THE AUTHOR

...view details