ದುಬೈ: ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್ನಲ್ಲಿ ರದ್ದಾಗಿರುವ 5ನೇ ಟೆಸ್ಟ್ ಸ್ಥಿತಿಯ ಬಗ್ಗೆ ಯಾವುದೇ ಕಲ್ಪನೆಯನ್ನು ಹೊಂದಿಲ್ಲ. ಆದರೆ ಭಾರತ ತಂಡ ಕಠಿಣ ಹೋರಾಟ ನಡೆಸಿ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿದೆ ಎಂಬ ಭಾವನೆ ತಮ್ಮ ಮನದಲ್ಲಿದೆ ಎಂದು ಹೇಳಿದ್ದಾರೆ.
ಭಾರತ ತಂಡದ ಜೂನಿಯರ್ ಫಿಸಿಯೋ ಯೋಗೇಶ್ ಪರ್ಮಾರ್ಗೆ ಕೋವಿಡ್ 19 ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಮ್ಯಾಂಚೆಸ್ಟರ್ನಲ್ಲಿ ನಡೆಯಬೇಕಿದ್ದ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಗಿತ್ತು. ಇದೀಗ ಬಿಸಿಸಿಐ 2022ರ ಜುಲೈನಲ್ಲಿ 5ನೇ ಟೆಸ್ಟ್ ಪಂದ್ಯವನ್ನಾಡಲು ಒಪ್ಪಿಗೆ ಸೂಚಿಸಿದೆ ಎಂದು ಈಗಾಗಲೇ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
"5ನೇ ಟೆಸ್ಟ್ ಬಗ್ಗೆ ಏನಾಗುತ್ತಿದೆ ಎನ್ನುವುದು ನನಗೆ ಗೊತ್ತಿಲ್ಲ. ಮುಂದಿನ ವರ್ಷ ನಾವು ಉಳಿದಿರುವ ಒಂದು ಟೆಸ್ಟ್ ಪಂದ್ಯವನ್ನು ಆಡಬಹುದು. ಆದರೆ ಪ್ರಸ್ತುತ ನಾವು 2-1ರಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿದ್ದೇವೆ ಎನ್ನುವುದು ನನ್ನ ಮನದಲ್ಲಿದೆ" ಎಂದು ರೋಹಿತ್ ಅಡಿಡಾಸ್ನ ಇಂಪಾಸಿಬಲ್ ಇಸ್ ನತಿಂಗ್(Impossible Is Nothing) ಪ್ರಚಾರ ಅಭಿಯಾನವಾದ ವೇಳೆ ತಿಳಿಸಿದ್ದಾರೆ.
ಇಂಗ್ಲೆಂಡ್ ಸರಣಿಯಲ್ಲಿ ರೋಹಿತ್ ಒಂದು ಶತಕ ಮತ್ತು 2 ಅರ್ಧಶತಕಗಳ ಸಹಿತ 400 ರನ್ ಗಳಿಸಿದ್ದಾರೆ. ಇದು ಅತ್ಯುತ್ತಮ ಮೈಲಿಗಲ್ಲಿನ ಸರಣಿಯಾಗಿದೆಯೇ ಎಂದು ಕೇಳಿದ್ದಕ್ಕೆ, ಪ್ರಸ್ತುತ ನನ್ನ ಟೆಸ್ಟ್ ವೃತ್ತಿ ಜೀವನದಲ್ಲಿ ನೋಡಿದರೆ ಇದೊಂದು ಒಳ್ಳೆಯ ಸರಣಿ. ಆದರೆ ಇದು ನನ್ನ ವೃತ್ತಿ ಜೀವನದ ಶ್ರೇಷ್ಠ ಸರಣಿಯಲ್ಲ. ನನ್ನಿಂದ ಅತ್ಯುತ್ತಮವಾದದ್ದು ಇನ್ನೂ ಬರಬೇಕಿದೆ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಕೆಎಲ್ ರಾಹುಲ್ಗೆ ನಾಯಕತ್ವ ಕೌಶಲ್ಯಗಳ ಕೊರತೆಗಳಿವೆ: ಅಜಯ್ ಜಡೇಜಾ