ಕರ್ನಾಟಕ

karnataka

ETV Bharat / sports

ಆಸ್ಟ್ರೇಲಿಯಾದ ಪ್ರತಿಭೆಗಳನ್ನು ಗುರುತಿಸಿ, ಸದೃಢಗೊಳಿಸಲು ಭಾರತದ ಕ್ರಮ ಅನುಸರಿಸುವುದು ಅಗತ್ಯ: ಟಿಮ್ ಪೇನ್ - ಕ್ರಿಕೆಟ್ ಆಸ್ಟ್ರೇಲಿಯಾ

ಭಾರತ ತಂಡದ ಟಾಪ್ ಕ್ರಿಕೆಟಿಗರು ಈಗಾಗಲೇ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಮತ್ತು ಟೆಸ್ಟ್​ ಸರಣಿಗಾಗಿ ಮೂರುವರೆ ತಿಂಗಳ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಆದರೆ, ಬಿಸಿಸಿಐ ಈಗಾಗಲೇ ದೇಶದ ಪರ 20 ಸದಸ್ಯರ ಮತ್ತೊಂದು ತಂಡವನ್ನು ಶ್ರೀಲಂಕಾ ವಿರುದ್ಧದ ವೈಟ್​ಬಾಲ್ ಸರಣಿಗೆ ಆಯ್ಕೆ ಮಾಡಿದೆ.

ಟಿಮ್ ಪೇನ್ ಟೀಮ್ ಇಂಡಿಯಾ
ಟಿಮ್ ಪೇನ್ ಟೀಮ್ ಇಂಡಿಯಾ

By

Published : Jun 15, 2021, 3:28 PM IST

ಮೆಲ್ಬೋರ್ನ್​: ತಂಡದಲ್ಲಿ ಆಳವನ್ನು ಸೃಷ್ಟಿಸುವಲ್ಲಿ ಆಸ್ಟ್ರೇಲಿಯಾ ಭಾರತವನ್ನು ಅನುಕರಿಸುವ ಅವಶ್ಯಕತೆಯಿದೆ. ಇದರಿಂದ ಟಾಪ್ ಆಟಗಾರರಿಗೆ ವಿಶ್ರಾಂತಿ ನೀಡುವುದರ ಜೊತೆಗೆ ಅವರಲ್ಲಿ ಹೊಸತನವನ್ನುಂಟು ಮಾಡಬಹುದು ಎಂದು ಆಸ್ಟ್ರೇಲಿಯಾ ಟೆಸ್ಟ್​ ತಂಡದ ನಾಯಕ ಟಿಮ್ ಪೇನ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ತಂಡದ ಟಾಪ್ ಕ್ರಿಕೆಟಿಗರು ಈಗಾಗಲೇ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಮತ್ತು ಟೆಸ್ಟ್​ ಸರಣಿಗಾಗಿ ಮುರೂವರೆ ತಿಂಗಳ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಆದರೆ, ಬಿಸಿಸಿಐ ಈಗಾಗಲೇ ದೇಶದ ಪರ 20 ಸದಸ್ಯರ ಮತ್ತೊಂದು ತಂಡವನ್ನು ಶ್ರೀಲಂಕಾ ವಿರುದ್ಧದ ವೈಟ್​ಬಾಲ್ ಸರಣಿಗೆ ಆಯ್ಕೆ ಮಾಡಿದೆ.

ಇನ್ನು ಆಸ್ಟ್ರೇಲಿಯಾ ಮುಂದಿನ ಸರಣಿಗಾಗಿ ವೆಸ್ಟ್​ ಇಂಡೀಸ್ ಪ್ರವಾಸ ಕೈಗೊಳ್ಳಬೇಕಿದೆ. ಆದರೆ, ಬಯೋಬಬಲ್​ನಿಂದ ವಿಶ್ರಾಂತಿ ಬಯಸಿರುವ ಟಿಮ್ ಪೇನ್, ವಾರ್ನರ್​ ಮತ್ತು ಸ್ಮಿತ್ ಸೇರಿದಂತೆ ಕೆಲವು ಟಾಪ್​ ಕ್ರಿಕೆಟಿಗರು ವಿಂಡೀಸ್ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಈ ಕಾರಣದಿಂದ ಪೇನ್​ ತಂಡದಲ್ಲಿ ಆಳವನ್ನು ಸೃಷ್ಟಿಸಲು ಆಸ್ಟ್ರೇಲಿಯಾ ಬಿಸಿಸಿಐನಂತೆ ಯುವಕರಿಗೆ ಅವಕಾಶ ನೀಡುವ ಮೂಲಕ ಸೀನಿಯರ್ ಕ್ರಿಕೆಟಿಗರಿಂದ ವರ್ಕ್​ಲೋಡ್​ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಈಗ ನಮ್ಮ ತಂಡದಲ್ಲಿ ಸಾಮರ್ಥ್ಯವುಳ್ಳ ಆಟಗಾರರನ್ನು ಗುರುತಿಸಿ ತಂಡದ ಬೆಂಚ್​ ಬಲವನ್ನು ಹೆಚ್ಚಿಸುವುದು ಆಸ್ಟ್ರೇಲಿಯಾಕ್ಕೆ ಪ್ರಮುಖ ವಿಷಯವಾಗಿದೆ. ತಾತ್ವಿಕವಾಗಿ ನಾವು ಪ್ರವಾಸದಿಂದ ಹೊರ ಬರುವ ಹುಡುಗರನ್ನು ಹೊಂದಿಲ್ಲ. ಆದರೆ, ಕೆಲವೊಂದು ಕಾರಣಗಳಿಂದ ವಿಶ್ರಾಂತಿ ಬಯಸಿದಾಗ ನಾವು ಬೇರೆ ಯೋಜನೆ ಮಾಡಬೇಕಿರುತ್ತದೆ ಎಂದು ಪೇನ್ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

ನಾವು ಈ ಸಂದರ್ಭದಲ್ಲಿ ಭಾರತವನ್ನು ನೋಡಿದಾಗ, ಅವರು ಅದ್ಭುತವಾಗಿ ತಂಡದ ಸಮತೋಲನವನ್ನು ನಿರ್ವಹಿಸುತ್ತಿದ್ದಾರೆ. ಟೆಸ್ಟ್​ ಕ್ರಿಕೆಟ್ ​ಅನ್ನು ಆಡಬಲ್ಲಂತಹ ನೈಜ ಪ್ರತಿಭೆಗಳನ್ನು ತಂಡದಲ್ಲಿ ಹೊಂದಿದ್ದಾರೆ. ನಮ್ಮ ಅತ್ಯುತ್ತಮ ಆಟಗಾರರು ವಿಶ್ರಾಂತಿ ಬಯಸಿದಾಗ ನಮಗೂ ಅಂತಹ ಪ್ರತಿಭಾನ್ವಿತ ಆಟಗಾರರ ಅವಶ್ಯಕತೆಯಿದೆ. ವಿಶ್ರಾಂತಿ ನಂತರ ಉತ್ತಮ ಆಟಗಾರರಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸಬಹುದು ಎಂದು ಪೇನ್ ಹೇಳಿದ್ದಾರೆ.

ಇದನ್ನು ಓದಿ: ಭಾರತ v/s ನ್ಯೂಜಿಲ್ಯಾಂಡ್​ : ಟಿಮ್ ಪೇನ್ ಪ್ರಕಾರ ಈ ತಂಡ ಸುಲಭವಾಗಿ WTC ಗೆಲ್ಲಲಿದೆ

ABOUT THE AUTHOR

...view details