ಕರ್ನಾಟಕ

karnataka

ETV Bharat / sports

ಭಾರತ ತಂಡದಲ್ಲಿ ಆಡುವುದು ನನ್ನ ಕನಸು, ಯಾವುದೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಸಿದ್ಧ: ಅಯ್ಯರ್ - ಜೈಪುರದ ಸವಾಯ್ ಮಾನ್​ಸಿಂಗ್

ದುಬೈನಲ್ಲಿ ನಡೆದ 2ನೇ ಹಂತದ ಐಪಿಎಲ್​ನಲ್ಲಿ ಅವಕಾಶ ಪಡೆದಿದ್ದ ವೆಂಕಟೇಶ್ ಅಯ್ಯರ್​ ಆಡಿದ 10 ಪಂದ್ಯಗಳಿಂದ 370 ರನ್​ಗಳಿಸಿದ್ದರು. ಅದಕ್ಕೂ ಮುನ್ನ 2020-21ರ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್​ನಲ್ಲಿ5 ಪಂದ್ಯಗಳಿಂದ 227 4ರನ್​ಗಳಿಸಿದ್ದರು. 26 ವರ್ಷದ ಅಯ್ಯರ್ 53 (47 ಇನ್ನಿಂಗ್ಸ್) ಟಿ20 ಪಂದ್ಯಗಳಲ್ಲಿ 39 ರ ಸರಾಸರಿಯಲ್ಲಿ 924 ರನ್​ಗಳಿಸಿದ್ದಾರೆ.

Venkatesh iyer
ವೆಂಕಟೇಶ್ ಅಯ್ಯರ್

By

Published : Nov 17, 2021, 7:52 PM IST

ಜೈಪುರ: ನ್ಯೂಜಿಲ್ಯಾಂಡ್ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದಲ್ಲಿ ಆರಂಭಿಕನಾಗಿ ಮಿಂಚು ಹರಿಸಿ ತಂಡವನ್ನು ಫೈನಲ್​ಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದ ವೆಂಕಟೇಶ್​ ಅಯ್ಯರ್​ ಭಾರತ ತಂಡಕ್ಕೆ ಇಂದು ಪದಾರ್ಪಣೆ ಮಾಡಿದ್ದಾರೆ.

ದುಬೈ ಲೆಗ್​ನಲ್ಲಿ ಐಪಿಎಲ್​ ಆಡಲು ಅವಕಾಶ ಪಡೆದಿದ್ದ ವೆಂಕಟೇಶ್ ಅಯ್ಯರ್​ ಆಡಿದ 10 ಪಂದ್ಯಗಳಿಂದ 370 ರನ್​ಗಳಿಸಿದ್ದರು. ಅದಕ್ಕೂ ಮುನ್ನ 2020-21ರ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್​ನಲ್ಲಿ 5 ಪಂದ್ಯಗಳಿಂದ 227 ರನ್​ಗಳಿಸಿದ್ದರು. 26 ವರ್ಷದ ಅಯ್ಯರ್ 53 (47 ಇನ್ನಿಂಗ್ಸ್) ಟಿ20 ಪಂದ್ಯಗಳಲ್ಲಿ 39ರ ಸರಾಸರಿಯಲ್ಲಿ 924 ರನ್​ಗಳಿಸಿದ್ದಾರೆ. 38 ಇನ್ನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿದ್ದು 29 ವಿಕೆಟ್ ಪಡೆದಿದ್ದಾರೆ. ಲಿಸ್ಟ್​ ಎ ಪಂದ್ಯಗಳಲ್ಲಿ 98ರ ಸರಾಸರಿಯಲ್ಲಿ 24 ಪಂದ್ಯಗಳಿಂದ 849 ರನ್​ಗಳಿಸಿದ್ದಾರೆ.

ಪ್ರತಿಯೊಬ್ಬ ಕ್ರಿಕೆಟಿಗನಿಗೂ ದೇಶದ ಪರ ಆಡಬೇಕೆಂಬ ಕನಸಿರುತ್ತದೆ. ನನಗೆ ಈ ಅವಕಾಶ ಒದಗಿ ಬಂದಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ರಾಹುಲ್​ ದ್ರಾವಿಡ್​ ಸರ್​ ಕೋಚಿಂಗ್​ನಲ್ಲಿ ಆಡುತ್ತಿರುವುದಕ್ಕೆ ತುಂಬಾ ಸಂತೋಷವಿದ್ದು, ಈ ಪಂದ್ಯವನ್ನಾಡಲು ನಿಜವಾಗಿಯೂ ಉತ್ಸಾಹದಿಂದ ಎದುರು ನೋಡುತ್ತಿದ್ದೇನೆ.

ಜವಾಬ್ದಾರಿ ಬಗ್ಗೆ ಮಾತನಾಡಿ, ಕ್ರಿಕೆಟಿಗನಾಗಿ ಯಾವುದೇ ಕೆಲಸ ನೀಡಿದರೂ ಹೊಂದಿಕೊಳ್ಳಬೇಕಾಗುತ್ತದೆ. ನಾನು ಕೂಡ ನನಗೆ ತಂಡದಲ್ಲಿ ನೀಡುವ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸಲು ಸಿದ್ಧನಿದ್ದೇನೆ. ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದಕ್ಕಾದರೂ ಮತ್ತು ಯಾವುದೇ ಸಂದರ್ಭದಲ್ಲಿ ಬೌಲಿಂಗ್ ಮಾಡಲು ಹೇಳಿದರೆ ಅದಕ್ಕೆ ಸಿದ್ಧನಿದ್ದೇನೆ ಎಂದು ಪದಾರ್ಪಣೆ ಕ್ಯಾಪ್ ಪಡೆದ ನಂತರ ಅಯ್ಯರ್​ ಹೇಳಿದ್ದಾರೆ.

ವೆಂಕಟೇಶ್ ಅಯ್ಯರ್ ಅವರನ್ನು ಹಾರ್ದಿಕ್ ಪಾಂಡ್ಯ ಜಾಗದಲ್ಲಿ ಆಡಿಸಲು ಯೋಜನೆ ಮಾಡಲಾಗುತ್ತಿದೆ. ಆದ್ದರಿಂದ ಅವರು ಭಾರತ ತಂಡದಲ್ಲಿ 6ನೇ ಕ್ರಮಾಂಕದಲ್ಲಿ ಆಡಲಿದ್ದಾರೆ.

ಇದನ್ನೂ ಓದಿ: ICC T20I rankings: 6ಕ್ಕೆ ಕುಸಿದ ರಾಹುಲ್, 8ರಲ್ಲಿ ಕೊಹ್ಲಿ ಸ್ಥಿರ, ಜಂಪಾ ಶ್ರೇಷ್ಠ ಸಾಧನೆ

ABOUT THE AUTHOR

...view details