ಮುಂಬೈ:ಭಾರತ ತಂಡದ ವಿರುದ್ಧದ 2ನೇ ಟೆಸ್ಟ್ನಲ್ಲಿ ಕಿವೀಸ್ ಭಾರಿ ಹಿನ್ನಡೆ ಸಾಧಿಸಿದೆ. ಆದರೆ, ಮೊದಲ ಇನ್ನಿಂಗ್ಸ್ನಲ್ಲಿ ಅದ್ಭುತ ಬೌಲಿಂಗ್ ಮಾಡಿದ ಕಿವೀಸ್ ಬೌಲರ್ ಅಜಾಜ್ ಪಟೇಲ್ 10 ಪಡೆಯುವ ಮೂಲಕ ಈ ಸಾಧನೆ ಮಾಡಿದ ವಿಶ್ವದ 3ನೇ ಬೌಲರ್ ಎನಿಸಿಕೊಂಡಿದ್ದಾರೆ.
ಟೆಸ್ಟ್ನ ಮೊದಲ ದಿನವಾದ ಶುಕ್ರವಾರ ಭಾರತದ 4 ವಿಕೆಟ್ ಪಡೆದಿದ್ದ ಅಜಾಜ್ ಶನಿವಾರ ಉಳಿದ 6 ಬ್ಯಾಟರ್ಗಳನ್ನು ಪೆವಿಲಿಯನ್ಗಟ್ಟುವ ಮೂಲಕ ಇಂಗ್ಲೆಂಡ್ನ ಜಿಮ್ ಲೇಕರ್ ಮತ್ತು ಭಾರತದ ಲೆಜೆಂಡರಿ ಸ್ಪಿನ್ನರ್ ಅನಿಲ್ ಕುಂಬ್ಳೆಯವರೊಂದಿಗೆ ಇನ್ನಿಂಗ್ಸ್ನಲ್ಲಿ ಎಲ್ಲಾ 10 ವಿಕೆಟ್ ಪಡೆದ ದಾಖಲೆಗೆ ಪಾತ್ರರಾದರು.
ಭಾರತದಲ್ಲಿ ಜನಿಸಿ 1996ರಲ್ಲಿ ಕುಟುಂಬ ಸಮೇತ ನ್ಯೂಜಿಲ್ಯಾಂಡ್ಗೆ ವಲಸೆ ಹೋಗಿದ್ದ ಅಜಾಜ್ ಪಟೇಲ್ ಪ್ರಮುಖ ವಿಶ್ವದಾಖಲೆಯನ್ನು ಅನಿಲ್ ಕುಂಬ್ಳೆ ಜೊತೆಗೆ ಹಂಚಿಕೊಳ್ಳುವುದು ತುಂಬಾ ವಿಶೇಷ ಎಂದಿದ್ದಾರೆ.