ಲಂಡನ್: ಇಂಗ್ಲೆಂಡ್ ಪಿಚ್ಗಳು ಸ್ಪಿನ್ನರ್ಗಳಿಗೆ ಸಹಕರಿಸಿದರೆ ಟೀಂ ಇಂಡಿಯಾ ಮುಂಬರುವ ಟೆಸ್ಟ್ ಸರಣಿಯಲ್ಲಿ ಆಂಗ್ಲರ ವಿರುದ್ಧ ಮೇಲುಗೈ ಸಾಧಿಸುವುದಲ್ಲದೆ, 5-0 ಅಂತರಲ್ಲಿ ಸರಣಿ ಗೆಲ್ಲಲಿದೆ ಎಂದು ಇಂಗ್ಲೆಂಡ್ ತಂಡದ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಭವಿಷ್ಯ ನುಡಿದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪನೇಸರ್, ಇಂಗ್ಲೆಂಡ್ನಲ್ಲಿ ಆಗಸ್ಟ್-ಸೆಪ್ಟೆಂಬರ್ ಸಮಯದಲ್ಲಿ ಪಿಚ್ಗಳು ಸ್ಪಿನ್ನರ್ಗಳಿಗೆ ಹೆಚ್ಚು ಅನುಕೂಲ ಹೊಂದಿರುತ್ತವೆ. ಇದು ಸ್ಪಿನ್ ಬೌಲಿಂಗ್ ಎದುರು ತಿಣುಕಾಡುವ ಆಂಗ್ಲ ಬ್ಯಾಟ್ಸ್ಮನ್ಗಳಿಗೆ ಕಠಿಣ ಸವಾಲಾಗಿ ಪರಿಣಮಿಸಲಿದೆ ಎಂದಿದ್ದಾರೆ.
ಸದ್ಯ ಕಿವೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೆಚ್ಚು ಹಸಿರಾದ ಪಿಚ್ಗಳಲ್ಲಿ ಪಂದ್ಯಗಳು ನಡೆಯಲಿವೆ. ಆದರೆ ಆಗಸ್ಟ್ ವೇಳೆಗೆ ಪಿಚ್ಗಳ ಸ್ವರೂಪ ಬದಲಾಗಲಿದ್ದು, ಸ್ಪಿನ್ನರ್ಗಳಿಗೆ ಹೆಚ್ಚು ಅನುಕೂಲಕರವಾಗಿರಲಿವೆ. 5 ಟೆಸ್ಟ್ ಪಂದ್ಯಗಳ ಸರಣಿಯು ಪೈಪೋಟಿಯಿಂದ ಕೂಡಿರಲಿದ್ದು, ಭಾರತಕ್ಕೆ ಸರಣಿ ಜಯಿಸುವ ಅವಕಾಶವಿದೆ ಎಂದು ಅವರು ಹೇಳಿದ್ದಾರೆ.
ನಾಯಕ ಜೋ ರೂಟ್ ಬ್ಯಾಟ್ನಿಂದ ದೊಡ್ಡ ಇನ್ನಿಂಗ್ಸ್ಗಳು ಮೂಡಿಬಂದರೆ ಇಂಗ್ಲೆಂಡ್ ಜಯ ದಾಖಲಿಸಲಿದೆ. ಆದರೆ ಎಲ್ಲ ಸಲ ರೂಟ್ ಆಡಲಾಗುತ್ತಾ? ಎಂದಿರುವ ಮಾಂಟಿ, ಅನನುಭವಿ ಆಂಗ್ಲ ಬ್ಯಾಟಿಂಗ್ ವಿಭಾಗವನ್ನು ಕಾಡಬಲ್ಲಂತಹ ಬಲಿಷ್ಠ ಬೌಲಿಂಗ್ ಪಡೆ ಟೀಂ ಇಂಡಿಯಾದಲ್ಲಿದೆ. ರೂಟ್ ಬಳಗವು ಅಗ್ರಕ್ರಮಾಂಕದಲ್ಲಿ ಸಮಸ್ಯೆ ಹೊಂದಿದೆ. ಇತ್ತೀಚೆಗೆ ಸಿಡ್ನಿ ಹಾಗೂ ಬ್ರಿಸ್ಬೆನ್ ಟೆಸ್ಟ್ ಪಂದ್ಯಗಳಲ್ಲಿ ನೀವು ಬೌಲರ್ಗಳ ಸಾಮರ್ಥ್ಯ ನೋಡಿರಬಹುದು ಎಂದಿದ್ದಾರೆ.
ಇದನ್ನೂ ಓದಿ:ನಿನ್ನೆ ವಿಡಿಯೋ ಕಾಲ್ ಮಾಡಿ ಗುಣಮುಖನಾಗುವೆ ಎಂದಾತ ಇಂದು ಕೋವಿಡ್ಗೆ ಬಲಿ!