ಕರ್ನಾಟಕ

karnataka

ETV Bharat / sports

ಈ ಮೂವರು ರನ್​ಗಳಿಸಿದ್ರೆ ಆರ್​ಸಿಬಿ ಪ್ಲೇ ಆಫ್​ ಪ್ರವೇಶ ಸಾಧ್ಯವೇ ಇಲ್ಲ: ಅಕಾಶ್ ಚೋಪ್ರಾ - ಆಕಾಶ್ ಚೋಪ್ರಾ ಆರ್​ಸಿಬಿ ಪ್ಲೇ ಆಫ್​

ಮಂಗಳವಾರ ರಾಜಸ್ಥಾನ್ ವಿರುದ್ಧ ಕೇವಲ 145 ರನ್​ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಲಾಗದೇ ಆರ್​ಸಿಬಿ 29 ರನ್​ಗಳಿಂದ ಸೋಲು ಕಂಡಿತು. ಇದಕ್ಕೂ ಹಿಂದಿನ ಪಂದ್ಯದಲ್ಲಿ ಸನ್​ರೈಸರ್ಸ್ ವಿರುದ್ಧ 68 ರನ್​ಗಳಿಗೆ ಆಲೌಟ್ ಆಗಿ ಮುಜುಗರ ಅನುಭವಿಸಿತ್ತು. ಈಗಾಗಲೇ 10 ಅಂಕಗಳನ್ನು ಹೊಂದಿರುವ ಆರ್​ಸಿಬಿ ಉಳಿದ 5 ಪಂದ್ಯಗಳಲ್ಲಿ ಕನಿಷ್ಠ 3 ಪಂದ್ಯಗಳಲ್ಲಾದರೂ ಗೆಲ್ಲಲೇಬೇಕಿದೆ. ಆದರೆ ತಂಡದ ಬ್ಯಾಟಿಂಗ್ ವೈಫಲ್ಯ ದೊಡ್ಡ ಸಮಸ್ಯೆಯಾಗಿದೆ.

RCB won't qualify to playoffs
ಇಂಡಿಯನ್ ಪ್ರೀಮಿಯರ್ ಲೀಗ್

By

Published : Apr 27, 2022, 5:33 PM IST

ಮುಂಬೈ: ಸತತ ಎರಡೂ ಅಪಮಾನಕರ ಸೋಲಿಗೆ ತುತ್ತಾಗಿರುವ ಆರ್​ಸಿಬಿ ಮುಂದಿನ ಪಂದ್ಯಗಳಲ್ಲಿ ಜಯ ಸಾಧಿಸಿ ಪ್ಲೇ ಆಫ್​ ಪ್ರವೇಶಿಸಬೇಕೆಂದರೆ ತಂಡದ ಅಗ್ರ ಕ್ರಮಾಂಕದ ಬ್ಯಾಟರ್​ಗಳು ರನ್​ಗಳಿಸಬೇಕು. ಒಂದು ವೇಳೆ ಈ ಮೂವರು ವಿಫಲರಾದರೆ ಬೆಂಗಳೂರು ಫ್ರಾಂಚೈಸಿ ನಾಕೌಟ್ ಪ್ರವೇಶಿಸುವುದು ಅನುಮಾನ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಿಳಿಸಿದ್ದಾರೆ.

ಮಂಗಳವಾರ ರಾಜಸ್ಥಾನ್ ವಿರುದ್ಧ ಕೇವಲ 145 ರನ್​ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಲಾಗದೇ ಆರ್​ಸಿಬಿ 29 ರನ್​ಗಳಿಂದ ಸೋಲು ಕಂಡಿತು. ಇದಕ್ಕೂ ಹಿಂದಿನ ಪಂದ್ಯದಲ್ಲಿ ಸನ್​ರೈಸರ್ಸ್ ವಿರುದ್ಧ 68 ರನ್​ಗಳಿಗೆ ಆಲೌಟ್ ಆಗಿ ಮುಜುಗರ ಅನುಭವಿಸಿತ್ತು. ಈಗಾಗಲೇ 10 ಅಂಕಗಳನ್ನು ಹೊಂದಿರುವ ಆರ್​ಸಿಬಿ ಉಳಿದ 5 ಪಂದ್ಯಗಳಲ್ಲಿ ಕನಿಷ್ಠ 3 ಪಂದ್ಯಗಳಲ್ಲಾದರೂ ಗೆಲ್ಲಲೇಬೇಕಿದೆ. ಆದರೆ ತಂಡದ ಬ್ಯಾಟಿಂಗ್ ವೈಫಲ್ಯ ದೊಡ್ಡ ಸಮಸ್ಯೆಯಾಗಿದೆ.

ವಿರಾಟ್​ ಕೊಹ್ಲಿ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ದಯನೀಯ ವೈಫಲ್ಯ ಅನುಭವಿಸಿದ್ದಾರೆ. ಇನ್ನು ನಾಯಕ ಡುಪ್ಲೆಸಿಸ್​ ಒಂದು ಪಂದ್ಯ ಆಡಿದರೆ ಮೂರು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸುತ್ತಿದ್ದರೆ, ಕಳೆದ ವರ್ಷ ತಂಡದ ಆಪದ್ಬಾಂಧವನಾಗಿದ್ದ ಮ್ಯಾಕ್ಸ್​ವೆಲ್ ಮಂಕಾಗಿದ್ದಾರೆ. ಆರ್​ಸಿಬಿ ಪ್ರಸ್ತುತ ಸ್ಥಿತಿಯ ಬಗ್ಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ ಮತ್ತು ಕಾಮೆಂಟೇಟರ್ ಆಕಾಶ್ ಚೋಪ್ರಾ, ಈ ಮೂವರು ದೊಡ್ಡ ಆಟಗಾರರು ಆರ್​ಸಿಬಿಗೆ ರನ್​ ಗಳಿಸಬೇಕೆಂದು ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ತಿಳಿಸಿದ್ದಾರೆ.

"ಟಿ20 ಪಂದ್ಯದಲ್ಲಿ 29 ರನ್​ಗಳ ಸೋಲು ದೊಡ್ಡ ವಿಷಯ. ಅದರಲ್ಲೂ ತಂಡ 145 ರನ್​ಗಳ ಸಾಧಾರಣ ಗುರಿ ಹಿಂಬಾಲಿಸುವಾಗ. ಆರ್​ಸಿಬಿ ಹಿಂದಿನ ಪಂದ್ಯದಲ್ಲಿ 68 ರನ್​ಗಳಿಗೆ ಆಲೌಟ್​ ಆದರೆ, ಈ ಪಂದ್ಯದಲ್ಲಿ 115 ರನ್​ಗಳಿಸಿದೆ. ಆರ್​ಸಿಬಿ ಒಳ್ಳೆಯ ತಂಡವನ್ನು ಹೊಂದಿದೆ ಮತ್ತು ತಂಡ ಬೌನ್ಸ್​ ಬ್ಯಾಕ್​ ಮಾಡಲಿದೆ ಎಂದು ಈಗಲೂ ನಾನು ನಂಬುತ್ತೇನೆ. ಆದರೆ ಅಗ್ರ ಮೂರು ಬ್ಯಾಟರ್​ಗಳು ರನ್​ಗಳಿಸದಿದ್ದರೆ, ಇದು ನಡೆಯಲು ಸಾಧ್ಯವಿಲ್ಲ. ಟಾಪ್​ 3 ಅಂದರೆ ಕೊಹ್ಲಿ, ಫಾಫ್ ಮತ್ತು ಮ್ಯಾಕ್ಸ್​ವೆಲ್. ಒಂದು ವೇಳೆ ಈ ಮೂವರು ರನ್​ಗಳಿಸಿದ್ದಿದ್ದರೆ ಆರ್​ಸಿಬಿ ಪ್ಲೇ ಆಫ್ ಪ್ರವೇಶಿಸುವುದಿಲ್ಲ, ನಾನು ಬೇಕಾದ್ರೆ ಬರೆದುಕೊಡುತ್ತೇನೆ ಎಂದು ಚೋಪ್ರಾ ಹೇಳಿದ್ದಾರೆ.

ನಿನ್ನೆಯ ಪಂದ್ಯದ ಸೋಲಿನ ಬಳಿಕ ಆರ್​ಸಿಬಿ ರನ್​ರೇಟ್​ನಲ್ಲಿ ಮತ್ತಷ್ಟು ಕುಸಿತ ಕಂಡು 5ನೇ ಸ್ಥಾನದಲ್ಲಿ ಮುಂದುವರಿದರೆ, ಗೆದ್ದ ರಾಜಸ್ಥಾನ್​ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.

ಇದನ್ನೂ ಓದಿ:ಪಂದ್ಯ ಮುಗಿದ ಬಳಿಕ ಪರಾಗ್ ಜೊತೆ ಕೈ ಕುಲುಕಲು ನಿರಾಕರಿಸಿದ ಹರ್ಷಲ್ ಪಟೇಲ್: ವಿಡಿಯೋ ವೈರಲ್

ABOUT THE AUTHOR

...view details