ನವದೆಹಲಿ:ತಂಡದಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡಿದರೂ ರಾಹುಲ್ ಹೊರಹೋಗಲು ಬಯಸಿದ ನಡೆಗೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಬೇಸರ ವ್ಯಕ್ತಪಡಿಸಿದೆ. ಅಲ್ಲದೇ ತಾವೂ ರಿಟೈನ್ ಮಾಡಿಕೊಳ್ಳುವ ಮುನ್ನ ಹೊಸ ಫ್ರಾಂಚೈಸಿಗಳು ಅವರನ್ನು ಸಂಪರ್ಕಿಸಿದ್ದೇ ಆದರೆ ಅದು ಅನೈತಿಕ ಎಂದು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಹೇಳಿದೆ.
ರಾಹುಲ್ 2020ರ ಆವೃತ್ತಿಯಲ್ಲಿ ರವಿ ಚಂದ್ರನ್ ಅಶ್ವಿನ್ ಬದಲಿಗೆ ಪಂಜಾಬ್ ತಂಡದ ನಾಯಕನಾಗಿ ನೇಮಕವಾಗಿದ್ದರು. ಅವರೂ ಕಳೆದ 2 ಆವೃತ್ತಿಗಳಲ್ಲೂ ಅತ್ಯುತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ತೋರಿದರೂ ನಾಯಕನಾಗಿ ತಂಡವನ್ನು ಪ್ಲೇ ಆಫ್ ಹಂತಕ್ಕೆ ಕೊಂಡೊಯ್ಯಲು ವಿಫಲರಾಗಿದ್ದರು. ಇದೀಗ ರಾಹುಲ್ ಆರ್ಪಿಎಸ್ಜಿ ಗ್ರೂಪ್ ಮಾಲಿಕತ್ವದ ಲಖನೌ ಫ್ರಾಂಚೈಸಿ ರಾಹುಲ್ರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಅವರು 2022ಕ್ಕೆ ನೂತನ ಫ್ರಾಂಚೈಸಿಯನ್ನು ಮುನ್ನಡೆಸಲಿದ್ದಾರೆ ಎಂಬ ವಿಷಯಗಳು ಭಾರಿ ಚರ್ಚೆಯಾಗುತ್ತಿವೆ.
ನಾವು ರಾಹುಲ್ರನ್ನು ರಿಟೈನ್ ಮಾಡಿಕೊಳ್ಳುವುದಕ್ಕೆ ಬಯಸಿದ್ದೆವು. ಆದರೆ ಅವರು ಹರಾಜಿಗೆ ಹೋಗುವುದಕ್ಕೆ ಬಯಸಿದರು. ಒಂದು ವೇಳೆ ಇದೆಲ್ಲಾ ಮುಗಿಯುವ ಮುನ್ನವೇ ಅವರನ್ನು ಬೇರೆ ಫ್ರಾಂಚೈಸಿ ಸಂಪರ್ಕಿಸಿದ್ದರೆ, ಅದು ಅನೈತಿಕವಾಗುತ್ತದೆ ಎಂದು ಪಂಜಾಬ್ ಕಿಂಗ್ಸ್ ಸಹಾ ಮಾಲೀಕ ನೆಸ್ ವಾಡಿಯಾ ಪಿಟಿಐಗೆ ಹೇಳಿದ್ದಾರೆ.