ಮುಂಬೈ: 15ನೇ ಆವೃತ್ತಿಯ ಐಪಿಎಲ್ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಆರ್ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ, ಆಡಿರುವ 9 ಇನ್ನಿಂಗ್ಸ್ ಮೂಲಕ ಕೇವಲ 128 ರನ್ಗಳಿಸಿದ್ದಾರೆ. ಸ್ಟಾರ್ ಬ್ಯಾಟರ್ 2 ಬಾರಿ ಗೋಲ್ಡನ್ ಡಕ್ ಆಗಿರುವುದರ ಜೊತೆಗೆ ಸತತ 4ನೇ ಇನ್ನಿಂಗ್ಸ್ನಲ್ಲಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಹಾಗಾಗಿ, ಭಾರತದ ಮಾಜಿ ಕೋಚ್ ರವಿಶಾಸ್ತ್ರಿ, ವಿರಾಟ್ ಕೊಹ್ಲಿ ಐಪಿಎಲ್‌ನಿಂದ ಹೊರಬಂದು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
ಐಪಿಎಲ್‌ನಿಂದ ಬ್ರೇಕ್ ಪಡೆಯುವುದು ಕೊಹ್ಲಿಗೆ ಒಳ್ಳೆಯ ಆಯ್ಕೆ. ಏಕೆಂದರೆ ಅವರು ಎಲ್ಲಾ ಸ್ವರೂಪಗಳ ತಂಡದ ನಾಯಕತ್ವ ವಹಿಸಿಕೊಂಡು ತಡೆರಹಿತ ಕ್ರಿಕೆಟ್ ಆಡಿದ್ದಾರೆ. ಆದ್ದರಿಂದ ಅವರಿಗೆ ಒಂದು ಬ್ರೇಕ್ ಅಗತ್ಯವಿದ್ದು, ಇದನ್ನು ತೆಗೆದುಕೊಳ್ಳುವುದು ಅವರ ವೃತ್ತಿ ಜೀವನಕ್ಕೆ ಉತ್ತಮ. ಕೆಲವೊಮ್ಮೆ ಕ್ರಿಕೆಟಿಗರು ಸಮತೋಲನವನ್ನು ಕಾಯ್ದುಕೊಳ್ಳಬೇಕೆಂಬುದು ನಿಮಗೆ ತಿಳಿದಿರುವ ವಿಷಯ. ಅವರು ಈಗಾಗಲೇ ಟೂರ್ನಮೆಂಟ್ನಲ್ಲಿದ್ದಾರೆ, ನೀವು 6-7 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವುದಕ್ಕೆ ಬಯಸಿದರೆ, ನಿಮ್ಮ ಕಾಳಜಿಗಾಗಿ ಐಪಿಎಲ್‌ನಿಂದ ಹೊರಬನ್ನಿ ಎಂದು ಶಾಸ್ತ್ರಿ ಜತಿನ್ ಸಪ್ರು ಅವರ ಯೂಟ್ಯೂಬ್ ಚಾನೆಲ್ಗೆ ಸಂವಾದದಲ್ಲಿ ತಿಳಿಸಿದ್ದಾರೆ.