ಕರ್ನಾಟಕ

karnataka

ETV Bharat / sports

ಧೋನಿ ಚೆನ್ನೈ ಬಾಸ್​, ಫೈನಲ್​ನಲ್ಲಿ ಜಯದ ರನ್​ಗಳಿಸಿದರೆ ಮುಂದಿನ ವರ್ಷವೂ ಆಡ್ತಾರೆ : ಸ್ಟೇನ್ - ಧೋನಿ ರೀಟೈನ್​ ಬಗ್ಗೆ ಸ್ಟೈನ್​

ಧೋನಿ ಕೂಡ 14 ಪಂದ್ಯಗಳಲ್ಲಿ ಕೇವಲ 200 ರನ್​ ಬಾರಿಸಿದ್ದರು. ಆದರೆ, ಈ ವರ್ಷ ಅದಕ್ಕಿಂತಲೂ ಕೆಟ್ಟ ಪ್ರದರ್ಶನವಾಗಿದೆ. ಆದರೆ, ಹಿಂದಿನ ಲೀಗ್​ಗಳ ಹಾಗೆ ಅವರು ತಾವೂ 4 ಅಥವಾ 5ರಲ್ಲಿ ಬ್ಯಾಟಿಂಗ್​ಗೆ ಬಾರದೇ 6 ಅಥವಾ 7ರಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. 12 ಪಂದ್ಯಗಳಲ್ಲಿ ಕೇವಲ 66 ರನ್​ಗಳಿಸಿದ್ದಾರೆ. ಹಾಗಾಗಿ, ಬಹುಪಾಲು ಕ್ರಿಕೆಟ್​ ತಜ್ಞರು ಧೋನಿಗೆ ಇದೇ ಕೊನೆಯ ಲೀಗ್​ ಆಗಬಹುದು ಎನ್ನುತ್ತಿದ್ದಾರೆ..

MS Dhoni
ಎಂಎಸ್ ಧೋನಿ

By

Published : Oct 4, 2021, 3:43 PM IST

ದುಬೈ :ಕಳೆದ ಎರಡು ಐಪಿಎಲ್​ ಆವೃತ್ತಿಗಳಲ್ಲಿ ಒಬ್ಬ ಬ್ಯಾಟ್ಸ್​ಮನ್​ ಆಗಿ ಧೋನಿ ವೈಫಲ್ಯ ಅನುಭವಿಸಿದ್ದಾರೆ. ಒಂದು ಕಾಲದಲ್ಲಿ ಸ್ಫೋಟಕ ಬ್ಯಾಟ್ಸ್​ಮನ್ ಆಗಿದ್ದ ಧೋನಿ ಚೆನ್ನೈಗೆ ಸೋಲುವ ಅದೆಷ್ಟೋ ಪಂದ್ಯಗಳನ್ನು ಏಕಾಂಗಿಯಾಗಿ ಹೋರಾಡಿ ಗೆಲ್ಲಿಸಿಕೊಟ್ಟಿದ್ದಾರೆ.

ಆದರೆ, ಅದೆಲ್ಲಾ ಈಗ ಮುಗಿದು ಹೋದ ಕಥೆಯಾಗಿದೆ. ಧೋನಿ ಹಿಂದಿನ ಧೋನಿಯಾಗಿ ಉಳಿದಿಲ್ಲ. ಅವರಿಗೆ 40 ವರ್ಷಗಳೂ ಮುಗಿದ್ದಿದ್ದು, ಮುಂದಿನ ವರ್ಷ ಐಪಿಎಲ್​ನಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ.

2008ರಿಂದ 2021ರವರೆಗೆ 12 ಬಾರಿ ಚೆನ್ನೈ ಸೂಪರ್​ ಕಿಂಗ್ಸ್ ತಂಡವನ್ನು ಧೋನಿಮುನ್ನಡೆಸಿದ್ದಾರೆ. ಸಿಎಸ್‌ಕೆ 11 ಬಾರಿ ಪ್ಲೇ ಆಫ್​ ಹಂತ ತಲುಪಿದೆ. 8 ಬಾರಿ ಫೈನಲ್​ಗೆ ಕೊಂಡೊಯ್ದಿದ್ದಾರೆ. ಆದರೆ, 2020ರಲ್ಲಿ ಮಾತ್ರ ಸಿಎಸ್​ಕೆ ದಯನೀಯ ವೈಫಲ್ಯ ಅನುಭವಿಸಿತು. ಐಪಿಎಲ್​ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ಲೇ ಆಫ್​ ರೇಸ್​ನಿಂದ ಹೊರ ಬಿದ್ದಿದ್ದಲ್ಲದೆ, ಮೊದಲ ತಂಡವಾಗಿಯೂ ಹೊರಬಿದ್ದಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ತಂದಿತ್ತು.

ಧೋನಿ ಕೂಡ 14 ಪಂದ್ಯಗಳಲ್ಲಿ ಕೇವಲ 200 ರನ್​ ಬಾರಿಸಿದ್ದರು. ಆದರೆ, ಈ ವರ್ಷ ಅದಕ್ಕಿಂತಲೂ ಕೆಟ್ಟ ಪ್ರದರ್ಶನವಾಗಿದೆ. ಆದರೆ, ಹಿಂದಿನ ಲೀಗ್​ಗಳ ಹಾಗೆ ಅವರು ತಾವೂ 4 ಅಥವಾ 5ರಲ್ಲಿ ಬ್ಯಾಟಿಂಗ್​ಗೆ ಬಾರದೇ 6 ಅಥವಾ 7ರಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. 12 ಪಂದ್ಯಗಳಲ್ಲಿ ಕೇವಲ 66 ರನ್​ಗಳಿಸಿದ್ದಾರೆ. ಹಾಗಾಗಿ, ಬಹುಪಾಲು ಕ್ರಿಕೆಟ್​ ತಜ್ಞರು ಧೋನಿಗೆ ಇದೇ ಕೊನೆಯ ಲೀಗ್​ ಆಗಬಹುದು ಎನ್ನುತ್ತಿದ್ದಾರೆ.

"ಅವರು ಚೆನ್ನೈ ಸೂಪರ್​ ಕಿಂಗ್ಸ್​ ಬಾಸ್​. ನೀವು ಚೆನ್ನೈ ಎಂದರೆ, ನೀವು ಎಂಎಸ್ ಧೋನಿ ಎಂದೇ ಭಾವಿಸುತ್ತೀರಿ. ಅವರು ಕೇವಲ ಒಂದೆರಡು ಪಂದ್ಯಗಳನ್ನು ಹೊಂದಿದ್ದಾರೆ ಮತ್ತು ಈಗಾಗಲೇ ಫೈನಲ್ಸ್(ಕ್ವಾಲಿಫೈಯರ್)​ ಪ್ರವೇಶಿಸಿದ್ದಾರೆ. ಆದರೆ, ಈವರೆಗೂ ಧೋನಿ ಏನು ಮಾಡದಿರುವುದನ್ನು ನೋಡಿದ್ದೇವೆ. ಒಂದು ವೇಳೆ ಅವರು ಫೈನಲ್​ನಲ್ಲಿ ಏನಾದರೂ ಜಯದ ರನ್​ಗಳನ್ನು ಬಾರಿಸಿದರೆ, ಅವರು ಮುಂದಿನ ವರ್ಷದ ಐಪಿಎಲ್​ನಲ್ಲೂ ಗ್ಲೌಸ್​ ತೊಡಲಿದ್ದಾರೆ ಎನ್ನುವುದನ್ನು ನೀವು ಖಚಿತಪಡಿಸಿಕೊಳ್ಳಬಹುದು" ಎಂದು ದಕ್ಷಿಣ ಆಫ್ರಿಕಾದ ಲೆಜೆಂಡರಿ ಬೌಲರ್​ ಡೇಲ್​ ಸ್ಟೇನ್​ ಇಸ್​ಪಿಎನ್​ಗೆ ತಿಳಿಸಿದ್ದಾರೆ.

ಆದರೆ, ಸಿಎಸ್​ಕೆ ತಂಡಕ್ಕೆ ಧೋನಿ ಬ್ಯಾಟಿಂಗ್ ವೈಫಲ್ಯ ಎಳ್ಳಷ್ಟು ಸಮಸ್ಯೆಯಾಗಿಲ್ಲ. ಅವರ ನಾಯಕತ್ವ ಲೀಗ್​ನಲ್ಲೇ ಅತ್ಯುತ್ತಮವಾಗಿದೆ. ಅಲ್ಲದೆ ತಂಡ ಕೂಡ ಸಮತೋಲನದಿಂದ ಕೂಡಿದೆ. ಹಾಗಾಗಿ, ಲೀಗ್​ನಲ್ಲಿ ಅಗ್ರಸ್ಥಾನವಾಗಿ ಉಳಿದುಕೊಂಡಿದೆ. ಇನ್ನು, ಸೋತಿರುವ ಪಂದ್ಯಗಳಲ್ಲೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದೆ. ಹಾಗಾಗಿ, ಧೋನಿ ನಾಯಕತ್ವದಲ್ಲಿ ಸಿಎಸ್​ಕೆ ತನ್ನ 4ನೇ ಟ್ರೋಫಿ ಗೆದ್ದರೆ ಮುಂದಿನ ವರ್ಷವೂ ಚೆನ್ನೈ ನೇತೃತ್ವವಹಿಸುವ ಸಾಧ್ಯತೆಯಿದೆ.

ಇದನ್ನು ಓದಿ:ಸಿಎಸ್​ಕೆ vs ಡೆಲ್ಲಿ: ಅಗ್ರಸ್ಥಾನಕ್ಕಾಗಿ ಪೈಪೋಟಿ, ಗೆದ್ದವರಿಗೆ ಫೈನಲ್​ ಪ್ರವೇಶಿಸಲು 2 ಅವಕಾಶ

ABOUT THE AUTHOR

...view details