ದುಬೈ: ಮುಂದಿನ ವರ್ಷ ಎಂ ಎಸ್ ಧೋನಿ ಐಪಿಎಲ್ನಲ್ಲಿ ಆಡುವುದಿಲ್ಲವೆಂದರೆ ನಾನೂ ಕೂಡ ಆಡುವುದಿಲ್ಲ ಎಂದು ಭಾರತ ತಂಡದ ಮಾಜಿ ಆಲ್ರೌಂಡರ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಪನಾಯಕ ಸುರೇಶ್ ರೈನಾ ಹೇಳಿದ್ದಾರೆ.
ಕ್ರಿಕೆಟ್ ಹೊರತುಪಡಿಸಿಯೂ ಮೈದಾನದ ಹೊರಗೆ ಎಂ ಎಸ್ ಧೋನಿ ಅವರೊಂದಿಗೆ ಹೆಚ್ಚು ಬಾಂಧವ್ಯ ಹೊಂದಿರುವ ಆಟಗಾರ ಅಂದರೆ ಅದು ಸುರೇಶ್ ರೈನಾ. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ ಕೆಲವೇ ನಿಮಿಷಗಳಲ್ಲಿ ರೈನಾ ಕೂಡ ನಿವೃತ್ತಿ ಘೋಷಿಸಿದ್ದರು. ಅದು ಅವರಿಬ್ಬರ ನಡುವಿನ ಸ್ನೇಹಕ್ಕೆ ಸಾಕ್ಷಿಯಾಗಿತ್ತು.
14 ವರ್ಷಗಳ ಕಾಲ ಒಟ್ಟಾಗಿ ಕ್ರಿಕೆಟ್ ಆಡಿರುವ ಇವರಿಬ್ಬರು ಕಳೆದ ಒಂದು ದಶಕದಿಂದ ಐಪಿಎಲ್ನಲ್ಲಿ ಸಿಎಸ್ಕೆ ಪರ ಆಡುತ್ತಿದ್ದಾರೆ. ಸಿಎಸ್ಕೆ ತಂಡಕ್ಕೆ ಧೋನಿ ಏಕೈಕ ನಾಯಕನಾಗಿದ್ದರೆ, ರೈನಾ ತಂಡದ ಉಪನಾಯಕನಾಗಿ ಆಡಿದ್ದಾರೆ.
ಧೋನಿ ಮತ್ತು ಸುರೇಶ್ ರೈನಾ ನಡುವೆ ಅನ್ಯೋನ್ಯ ಸ್ನೇಹವಿದೆ. 2014ರಲ್ಲಿ ಧೋನಿ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದ ವೇಳೆ ಮೊಬೈಲ್ ತೆಗೆದುಕೊಂಡು ಹೋಗಿರಲಿಲ್ಲ. ಆ ಸಂದರ್ಭದಲ್ಲಿ ಸಾಕ್ಷಿ ತಮ್ಮ ಮಗಳು ಜೀವಾಳಿಗೆ ಜನ್ಮ ನೀಡಿದ್ದ ವಿಷಯವನ್ನು ರೈನಾಗೆ ಕರೆ ಮಾಡಿ ಧೋನಿ ವಿಷಯ ತಿಳಿಸುವಂತೆ ಹೇಳಿದ್ದರು.