ಓವಲ್ (ಲಂಡನ್): ಐಸಿಸಿ ವಿಶ್ವ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಮೊದಲ ಇನ್ನಿಂಗ್ನಲ್ಲಿ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್ಗಳು ವೈಫಲ್ಯ ಎದುರಿಸಿದ್ದಾರೆ. ಆಸ್ಟ್ರೇಲಿಯಾ ತಂಡದ ಮೊದಲ ಇನ್ಸಿಂಗ್ಸ್ನಲ್ಲಿ 469 ರನ್ಗಳು ಬೃಹತ್ ರನ್ ಪೇರಿಸಿದರೆ, ಟೀಂ ಇಂಡಿಯಾ 150 ರನ್ ಕಲೆ ಹಾಕುವಷ್ಟರಲ್ಲಿ ಪ್ರಮುಖ ಐದು ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಎರಡನೇ ದಿನದಾಟದ ಅಂತ್ಯಕ್ಕೆ ರೋಹಿತ್ ಪಡೆ 38 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿದೆ. ಅಜಿಂಕ್ಯ ರಹಾನೆ (29) ಹಾಗೂ ಶ್ರೀಕರ್ ಭರತ್ (5) ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಮೊದಲ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಆಸೀಸ್ ತಂಡ ಮೂರು ವಿಕೆಟ್ ನಷ್ಟಕ್ಕೆ 327 ರನ್ ಪೇರಿಸಿತ್ತು. ಇಂದು ಎರಡನೇ ದಿನದಾಟದಲ್ಲಿ ಭಾರತದ ವೇಗಿಗಳ ಬಿಗಿ ಹಿಡಿತ ಸಾಧಿಸಿದ್ದರಿಂದ ಕೇವಲ 142 ರನ್ ಕಲೆ ಹಾಕಿತ್ತು. ಅಂತಿಮವಾಗಿ 469 ರನ್ಗಳಿಗೆ ಸರ್ವಪತನ ಕಂಡು ತನ್ನ ಮೊದಲ ಇನ್ನಿಂಗ್ಸ್ ಮುಗಿಸಿತ್ತು. ನಂತರ ಭಾರತ ಪರ ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಮೊದಲ ಇನ್ನಿಂಗ್ಸ್ ಆರಂಭಿಸಿದರು.
ಇದನ್ನೂ ಓದಿ:ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ : ರಿಷಭ್ ಪಂತ್ ದಾಖಲೆ ಮುರಿದ ಟ್ರಾವಿಸ್ ಹೆಡ್
ಆದರೆ, ಇಬ್ಬರು ಬ್ಯಾಟರ್ಗಳು ತಂಡಕ್ಕೆ ಭದ್ರ ಅಡಿಪಾಯ ಹಾಕುವಲ್ಲಿ ವಿಫಲರಾದರು. ಅದರಲ್ಲೂ, ನಾಯಕ ರೋಹಿತ್ ಶರ್ಮಾ ತಮ್ಮ ಕಳಪೆ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ಆರಂಭಿಕರಾದ ಬಂದ ಹಿಟ್‌ಮ್ಯಾನ್ 26 ಬಾಲ್ಗಳನ್ನು ಎದುರಿಸಿ ಕೇವಲ 15 ರನ್ಗಳಿಗೆ ಪ್ಯಾಟ್ ಕಮ್ಮಿನ್ಸ್ ಎಸತೆದಲ್ಲಿ ಎಲ್ಬಿ ಬಲೆಗೆ ಬಿದ್ದರು. ಆದರೆ, ಕೊಂಚ ಆಕ್ರಮಣಕಾರಿಯಾಗಿ ಇನ್ನಿಂಗ್ಸ್ ಆರಂಭಿಸಿದರೂ ರೋಹಿತ್ ಹೆಚ್ಚು ಹೊತ್ತಲು ನಿಲ್ಲಲು ಸಾಧ್ಯವಾಗಲಿಲ್ಲ. ಮತ್ತೊಬ್ಬ ಆರಂಭಿಕ ಹಾಗೂ ಐಪಿಎಲ್ನಲ್ಲಿ ಶತಕಗಳ ಮೂಲಕ ಮಿಂಚು ಹರಿಸಿದ್ದ ಶುಭಮನ್ ಗಿಲ್ ಸಹ ಬೇಗ ಪೆವಿಲಿಯನ್ ಸೇರಿದರು. ನಾಯಕ ರೋಹಿತ್ ಬೆನ್ನಲ್ಲೇ ಗಿಲ್ 13 ರನ್ ಬಾರಿಸಿ ಸ್ಕಾಟ್ ಬೋಲ್ಯಾಂಡ್ ಎಸತೆದಲ್ಲಿ ಬೌಲ್ಡ್ ಆದರು.
ಬಳಿಕ ಕ್ರೀಸ್ಗೆ ಬಂದ ಚೇತೇಶ್ವರ ಪೂಜಾರ (14) ಹಾಗೂ ವಿರಾಟ್ ಕೊಹ್ಲಿ (14) ಕೂಡ ನಿರಾಸೆ ಮೂಡಿಸಿದರು. ಇದರ ನಡುವೆ ಐದನೇ ವಿಕೆಟ್ಗೆ ಅಜಿಂಕ್ಯ ರಹಾನೆ ಹಾಗೂ ರವೀಂದ್ರ ಜಡೇಜಾ ಉತ್ತಮ ಇನ್ನಿಂಗ್ ಕಟ್ಟಿ ತಂಡಕ್ಕೆ ನೆರವಾದರು. ರಹಾನೆ ಮತ್ತು ಜಡೇಜಾ ಜೋಡಿ 71 ರನ್ಗಳ ಜೊತೆಯಾಟ ನೀಡಿತು. ಆದರೆ, ಅರ್ಧ ಶತಕದ ಹೊಸ್ತಿಲಿನಲ್ಲಿ ಜಡೇಜಾ ಎಡವಿದರು. 51 ಬಾಲ್ಗಳಲ್ಲಿ ಏಳು ಬೌಂಡರಿ ಮತ್ತು ಸಿಕ್ಸರ್ ಸಮೇತ 48 ರನ್ ಸಿಡಿಸಿದ್ದ ಜಡೇಜಾ ನಾಥನ್ ಲಿಯಾನ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ, 29 ರನ್ ಗಳಿಸಿರುವ ರಹಾನೆ ಹಾಗೂ 5 ರನ್ ಗಳಿಸಿರುವ ಶ್ರೀಕರ್ ಭರತ್ ನಾಳೆಗೆ ಕ್ರೀಸ್ನಲ್ಲಿ ಇದ್ದಾರೆ. ಭಾರತ 318 ರನ್ಗಳ ಹಿನ್ನಡೆಯಲ್ಲಿದೆ.
ಇದನ್ನೂ ಓದಿ:WTC Final 2023: 2ನೇ ದಿನ ಭಾರತದ ಬೌಲರ್ಗಳ ಮೇಲುಗೈ; 31ನೇ ಟೆಸ್ಟ್ ಶತಕ ದಾಖಲಿಸಿದ ಸ್ಮಿತ್, 469 ರನ್ಗಳಿಗೆ ಆಸ್ಟ್ರೇಲಿಯಾ ಆಲೌಟ್