ದುಬೈ: ಮುಂದಿನ ತಿಂಗಳು 2023 ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಲಿದ್ದು, ಸ್ಪರ್ಧೆಯ ವಿಜೇತರು ಬಹುಮಾನ ನಿಧಿ $ 1.6 ಮಿಲಿಯನ್ (ಅಂದಾಜು 13.21 ಕೋಟಿ) ಮನೆಗೆ ತೆಗೆದುಕೊಂಡು ಹೋಗುತ್ತಾರೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಶುಕ್ರವಾರ ಪ್ರಕಟಿಸಿದೆ.
ಸುದೀರ್ಘ ಮಾದರಿಯ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಬೃಹತ್ ಮೊತ್ತವನ್ನು ಐಸಿಸಿ ಹೇಳಿದೆ. ಸೋತ ಫೈನಲಿಸ್ಟ್‌ಗಳು $800,000 (Rs 6.50 ಕೋಟಿ) ಮೊತ್ತವನ್ನು ಪಡೆಯಲಿದೆ. ಚಾಂಪಿಯನ್‌ಶಿಪ್ ಫೈನಲ್ ಪಂದದ್ಯ ಲಂಡನ್‌ನ ಓವಲ್‌ನಲ್ಲಿ ಜೂನ್ 7 ರಿಂದ 11 (ಜೂನ್ 12 ಮೀಸಲು ದಿನ) ರವರೆಗೆ ನಡೆಯಲಿದೆ. ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗುತ್ತಿದೆ. ಟೂರ್ನಮೆಂಟ್‌ನ ಬಹುಮಾನದ ಮೊತ್ತವು ಚಾಂಪಿಯನ್‌ಶಿಪ್‌ನ ಉದ್ಘಾಟನಾ ಆವೃತ್ತಿಯಂತೆಯೇ ಇದೆ ಐಸಿಸಿ ಶುಕ್ರವಾರ ಮಾಹಿತಿ ನೀಡಿದೆ.
ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲ್ಯಾಂಡ್ ತಂಡವು ಎರಡು ವರ್ಷಗಳ ಹಿಂದೆ ಸೌತಾಂಪ್ಟನ್‌ನಲ್ಲಿ ಆರು ದಿನಗಳ ಫೈನಲ್‌ನಲ್ಲಿ ಭಾರತದ ವಿರುದ್ಧ ಎಂಟು ವಿಕೆಟ್‌ಗಳ ಜಯಸಾಧಿಸಿತ್ತು. 2019-21 ರಲ್ಲೂ ವಿಜೇತ ತಂಡಕ್ಕೆ 13.21 ಕೋಟಿ ಮೊತ್ತವನ್ನೇ ಕೊಡಲಾಗಿ, ಯಾವುದೇ ಏರಿಕೆ ಮಾಡಲಾಗಿಲ್ಲ ಎಂದು ತಿಳಿಸಿದೆ.
2021- 2023 ರಲ್ಲಿ ಭಾಗವಹಿಸಿ ಎಲ್ಲ ತಂಡಗಳಿಗೆ ಕೊಡುವ ಒಟ್ಟು ಬಹುಮಾನ ಮೊತ್ತ $3.8 ಮಿಲಿಯನ್ ಆಗಲಿದೆ. ಮೂರನೇ ಸ್ಥಾನ ಪಡೆಯುವ ಮೂಲಕ ದಕ್ಷಿಣ ಆಫ್ರಿಕಾ $450,000 ಗಳಿಸಿದೆ. ನಾಲ್ಕನೇ ಸ್ಥಾನವನ್ನು ಗಳಿಸಿದ ಇಂಗ್ಲೆಂಡ್ $ 350,000 ಬಹುಮಾನವನ್ನು ಪಡೆಯಲಿದೆ. ನ್ಯೂಜಿಲ್ಯಾಂಡ್ನಲ್ಲಿ ಸರಣಿ ಸೋಲುವ ಮುನ್ನ ಫೈನಲ್‌ನಲ್ಲಿ ಸ್ಥಾನ ಪಡೆಯುವ ಲೆಕ್ಕಾಚಾರದಲ್ಲಿದ್ದ ಶ್ರೀಲಂಕಾ ಐದನೇ ಸ್ಥಾನಕ್ಕೆ ಕುಸಿದಿದೆ. ಅವರ ಬಹುಮಾನದ ಹಣದ ಪಾಲು $200,000 ಆಗಿದೆ. ಆರನೇ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್, ಏಳನೇ ಸ್ಥಾನದಲ್ಲಿರುವ ಪಾಕಿಸ್ತಾನ, ಎಂಟನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ಮತ್ತು ಒಂಬತ್ತನೇ ಸ್ಥಾನದಲ್ಲಿರುವ ಬಾಂಗ್ಲಾದೇಶಕ್ಕೆ ತಲಾ $100,000 ನೀಡಲಾಗುವುದು.