ಕರ್ನಾಟಕ

karnataka

ETV Bharat / sports

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ : ಶ್ರೀಲಂಕಾ ವಿರುದ್ಧ ಭಾರತ ಸರಣಿ ಗೆದ್ದ ನಂತರ ಅಂಕಪಟ್ಟಿ ಹೀಗಿದೆ.. - ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಭಾರತ

ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಪಂದ್ಯವೊಂದಕ್ಕೆ 12 ಅಂಕವನ್ನು ನಿಗದಿ ಮಾಡಲಾಗಿದೆ. ಪಂದ್ಯವನ್ನು ಗೆದ್ದ ತಂಡ 12 ಅಂಕ ಪಡೆಯಲಿದೆ. ಟೈನಲ್ಲಿ ಅಂತ್ಯಗೊಂಡರೆ 2 ತಂಡಗಳಿಗೂ ತಲಾ 6 ಅಂಕ ಮತ್ತು ಡ್ರಾನಲ್ಲಿ ಅಂತ್ಯವಾದರೆ ತಲಾ 4 ಅಂಕಗಳನ್ನು ನೀಡಲಾಗುತ್ತದೆ..

ICC World Test Championship
ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್

By

Published : Mar 14, 2022, 7:31 PM IST

ಬೆಂಗಳೂರು : ಶ್ರೀಲಂಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆಲ್ಲುತ್ತಿದ್ದಂತೆ ಭಾರತ ತಂಡ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ.

2021-23ಎ ಆವೃತ್ತಿಯಲ್ಲಿ 4 ಟೆಸ್ಟ್​ ಸರಣಿಯನ್ನಾಡಿರುವ ಭಾರತ ತಂಡ 6 ಜಯ ಮತ್ತು 3 ಸೋಲು ಮತ್ತು 2 ಡ್ರಾ ಸಾಧಿಸಿ 58.33ರ ಸರಾಸರಿಯೊಂದಿಗೆ 4ನೇ ಸ್ಥಾನದಲ್ಲಿದೆ. ಈ ಸರಣಿಗೂ ಮುನ್ನ ಭಾರತ 5ನೇ ಸ್ಥಾನದಲ್ಲಿತ್ತು.

ಆ್ಯಶಸ್​ ನಂತರ 2ನೇ ಸರಣಿಯನ್ನಾಡುತ್ತಿರುವ ಆಸ್ಟ್ರೇಲಿಯಾ 6 ಪಂದ್ಯಗಳನ್ನಾಡಿದ್ದು, 4 ಗೆಲುವು ಮತ್ತು 2 ಡ್ರಾದೊಂದಿಗೆ 77.77 ಗೆಲುವಿನ ಸರಾಸರಿಯನ್ನು ಹೊಂದಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಪಾಕಿಸ್ತಾನ 5 ಪಂದ್ಯಗಳಲ್ಲಿ 3 ಗೆಲುವು ತಲಾ ಒಂದು ಡ್ರಾ ಮತ್ತು ಸೋಲು ಕಂಡು 66.66 ಸರಾಸರಿಯೊಂದಿಗೆ 2ನೇ ಸ್ಥಾನದಲ್ಲಿದೆ. 60 ಸರಾಸರಿ ಹೊಂದಿರುವ ದಕ್ಷಿಣ ಆಫ್ರಿಕಾ ತಂಡ 3ನೇ ಸ್ಥಾನದಲ್ಲಿದೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಅಂಕಪಟ್ಟಿ

ಭಾರತದ ವಿರುದ್ಧ 0-2ರಲ್ಲಿ ಸರಣಿ ಸೋತ ಶ್ರೀಲಂಕಾ(50%), ನ್ಯೂಜಿಲ್ಯಾಂಡ್​(38%), ಬಾಂಗ್ಲಾದೇಶ(25%), ವೆಸ್ಟ್ ಇಂಡೀಸ್(23%) ಮತ್ತು ಇಂಗ್ಲೆಂಡ್(11%) ನಂತರದ ಸ್ಥಾನದಲ್ಲಿವೆ.

ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಪಂದ್ಯವೊಂದಕ್ಕೆ 12 ಅಂಕವನ್ನು ನಿಗದಿ ಮಾಡಲಾಗಿದೆ. ಪಂದ್ಯವನ್ನು ಗೆದ್ದ ತಂಡ 12 ಅಂಕ ಪಡೆಯಲಿದೆ. ಟೈನಲ್ಲಿ ಅಂತ್ಯಗೊಂಡರೆ 2 ತಂಡಗಳಿಗೂ ತಲಾ 6 ಅಂಕ ಮತ್ತು ಡ್ರಾನಲ್ಲಿ ಅಂತ್ಯವಾದರೆ ತಲಾ 4 ಅಂಕಗಳನ್ನು ನೀಡಲಾಗುತ್ತದೆ.

ಇದನ್ನೂ ಓದಿ:ಶ್ರೀಲಂಕಾ ವಿರುದ್ಧ 238 ರನ್​ಗಳ ಜಯ ಸಾಧಿಸಿದ ಭಾರತ; 2-0ಯಲ್ಲಿ ಸರಣಿ ಕ್ಲೀನ್ ಸ್ವೀಪ್

ABOUT THE AUTHOR

...view details