ನವದೆಹಲಿ:ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಪಂದ್ಯದಲ್ಲಿ ಭಾರತ 9 ವಿಕೆಟ್ಗಳಿಂದ ಸೋತು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ಗೆ ತಲುಪುವ ಸಾಧ್ಯತೆಯನ್ನು ಕಳೆದುಕೊಂಡಿದೆ. ಮುಂದಿನ ಪಂದ್ಯ ನಿರ್ಣಾಯಕವಾಗಿದ್ದು, ಅಹಮದಾಬಾದ್ನಲ್ಲಿ ಕಾಂಗರೂ ಪಡೆಯನ್ನು ಕಟ್ಟಿಹಾಕಿ ಗೆದ್ದು, ಜೂನ್ 7 ರಂದು ಲಂಡನ್‌ನ ಓವಲ್ ಗ್ರೌಂಡ್ನಲ್ಲಿ ಮತ್ತೆ ಆಸಿಸ್ನ್ನು ಎದುರಿಸಿ ಚಾಪಿಯನ್ ಶಿಪ್ನ ಗದೆ ಗೆಲ್ಲ ಬೇಕಿದೆ. ಕಳೆದು ಬಾರಿ ನ್ಯೂಜಿಲ್ಯಾಂಡ್ ವಿರುದ್ಧ ಸೋತು ರನ್ನರ್ ಅಪ್ ಆಗಿದ್ದ ಭಾರತಕ್ಕೆ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯ ಪ್ರಮುಖವಾಗಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಟೆಸ್ಟ್ ಪಂದ್ಯ ಮಾರ್ಚ್ 9-13 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆಸ್ಟ್ರೇಲಿಯಾದ ನಾಥನ್ ಲಿಯಾನ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅತ್ಯಂತ ಯಶಸ್ವಿ ಬೌಲರ್ ಆಗಿದ್ದಾರೆ. ಅವರು ಗರಿಷ್ಠ 136 ವಿಕೆಟ್ ಪಡೆದಿದ್ದಾರೆ. ಅವರ ನಂತರದ ಸ್ಥಾನದಲ್ಲಿ 124 ವಿಕೆಟ್ ಪಡೆದ ರವಿಚಂದ್ರನ್ ಅಶ್ವಿನ್ ಇದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ 123 ವಿಕೆಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಸ್ಟುವರ್ಟ್ ಬೋರ್ಡ್ 112 ವಿಕೆಟ್‌ಗಳೊಂದಿಗೆ ನಾಲ್ಕನೇ ಮತ್ತು ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ 100 ವಿಕೆಟ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.
ನಾಥನ್ ಲಿಯಾನ್ ಮೂರನೇ ಟೆಸ್ಟ್ನಲ್ಲಿ 11 ವಿಕೆಟ್ ಪಡೆದು ಮಿಂಚಿದ್ದಾರೆ. ಟೆಸ್ಟ್ ವೃತ್ತಿ ಜಿವನದಲ್ಲಿ 118 ಪಂದ್ಯದಲ್ಲಿ 222 ಇನ್ನಿಂಗ್ಸ್ ಬೌಲಿಂಗ್ ಮಾಡಿದ ಲಿನಯಾನ್ ಅವರು 14,904 ರನ್ ಬಿಟ್ಟುಕೊಟ್ಟು 479 ವಿಕೆಟ್ ಕಬಳಿಸಿದ್ದಾರೆ. ನಾಲ್ಕು ಬಾರಿ 10 ವಿಕೆಟ್ ಉರುಳಿಸಿದ್ದಾರೆ. ಆರ್ ಅಶ್ವಿನ್ 91 ಪಂದ್ಯಗಳಲ್ಲಿ 172 ಇನ್ನಿಂಗ್ಸ್ಗಳನ್ನು ಆಡಿದ್ದು 467 ವಿಕೆಟ್ ಪಡೆದಿದ್ದು, 31 ಬಾರಿ ಐದು ವಿಕೆಟ್ ಮತ್ತು 7 ಬಾರಿ 10 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.