ಲಂಡನ್:ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಟಿ ಬ್ರೇಕ್ ವೇಳೆಗೆ ಆಸ್ಟ್ರೇಲಿಯಾ ಉತ್ತಮ ಕಮ್ಬ್ಯಾಕ್ ಮಾಡಿದೆ. ದಿನದ ಎರಡನೇ ಸೆಷನ್ನಲ್ಲಿ ಕೇವಲ ಒಂದು ವಿಕೆಟ್ ಬಿಟ್ಟುಕೊಟ್ಟು 97 ರನ್ ಕಲೆಹಾಕಿದೆ. ಎರಡನೇ ಸೆಷ್ನ್ ಅಂತ್ಯದ ವೇಳೆಗೆ ಆಸ್ಟ್ರೇಲಿಯಾ 3 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿದೆ. ಪ್ರಸ್ತುತ ಕ್ರೀಸ್ನಲ್ಲಿ ಸ್ಮಿತ್ ಮತ್ತು ಹೆಡ್ ಇದ್ದಾರೆ.
ಮೊದಲ ಸೆಷನ್ನಲ್ಲಿ ಉಸ್ಮಾನ್ ಖವಾಜಾ ಮತ್ತು ಡೇವಿಡ್ ವಾರ್ನರ್ ಅವರು ವಿಕೆಟ್ ಒಪ್ಪಿಸಿದ್ದರು. ಎರಡನೇ ಸೆಷನ್ನಲ್ಲಿ ಮಾರ್ನಸ್ ಲಬುಶೇನ್ ಶಮಿಗೆ ಕ್ಲೀನ್ ಬೌಲ್ಡ್ ಆದರು. ಎರಡು ವಿಕೆಟ್ ಪತನದ ನಂತರ ಪಿಚ್ ಅರಿತು ಸ್ಮಿತ್ ಜೊತೆಗೆ ಇನ್ನಿಂಗ್ಸ್ ಬೆಳೆಸಲು ನೋಡುತ್ತಿದ್ದ ಮಾರ್ನಸ್ 62 ಬಾಲ್ ಎದುರಿಸಿ 26 ರನ್ ಗಳಿಸಿದ್ದರು. ಮೊಹಮ್ಮದ್ ಶಮಿಯ ಕರಾರುವಾಕ್ಕು ಇನ್ಸ್ವಿಂಗ್ ಬಾಲ್ಗೆ ಲಬುಶೇನ್ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ಗೆ ಮರಳಿದರು.
ನಂತರ ಬಂದ ಟ್ರಾವೆಸ್ ಹೆಡ್ ತಂಡದ ಮೂರು ವಿಕೆಟ್ ಬಿದಿದ್ದರೂ ಅಂಜದೇ ಬ್ಯಾಟಿಂಗ್ ಮಾಡಿದರು. ಸ್ಮಿತ್ ಅವರಿಗೆ ಸಾಥ್ ನೀಡುತ್ತಾ ವಿಕೆಟ್ ಕಾಯ್ದುಕೊಳ್ಳುತ್ತಿದ್ದಾರೆ. ಹೆಡ್ ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸುತ್ತಿದ್ದು, 75 ಎಸೆತಗಳಲ್ಲಿ 10 ಬೌಂಡರಿ ಸಹಿತ 60 ರನ್ ದಾಖಲಿಸಿ ಕ್ರೀಸ್ನಲ್ಲಿದ್ದಾರೆ. ಸ್ಮಿತ್ 102 ಬಾಲ್ ಎದುರಿಸಿ 33 ರನ್ ಗಳಿಸಿ ಆಡುತ್ತಿದ್ದಾರೆ.
ಮೊದಲ ಅವದಿ: ಮೊದಲ ಸೆಷನ್ನಲ್ಲಿ ಭಾರತ ತನ್ನ ಹಿಡಿತವನ್ನು ತೆಗೆದುಕೊಂಡಿದೆ. ಆರಂಭಿಕ ಜೋಡಿಯನ್ನು ಜೊತೆಯಾಟ ಆಡಲು ಬಿಡದೇ ನಾಲ್ಕನೇ ಓವರ್ನಲ್ಲೇ ಖವಾಜಾ ಅವರ ವಿಕೆಟ್ನ್ನು ಸಿರಾಜ್ ಪಡೆದರು. ನಂತರ 43 ರನ್ ಗಳಿಸಿ ಆಡುತ್ತಿದ್ದ ವಾರ್ನರ್ಗೆ ಶಾರ್ದೂಲ್ ಪೆವಿಲಿಯನ್ ದಾರಿ ತೋರಿಸಿದರು. ಇದರಿಂದ ಊಟದ ವಿರಾಮದ ವೇಳೆಗೆ 23 ಓವರ್ಗೆ ಆಸ್ಟ್ರೇಲಿಯಾ 2 ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿತ್ತು.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ಮೊದಲ ಅವದಿಯಲ್ಲಿ ಆಸಿಸ್ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಟಿ20ಯಲ್ಲಿ ಪವರ್ ಪ್ಲೇ ಸಮಯದಲ್ಲೇ ವಿಕೆಟ್ ತೆಗೆದುಕೊಡುವ ಸ್ಟಾರ್ ಬೌಲರ್ ಸಿರಾಜ್ ಟೆಸ್ಟ್ನಲ್ಲೂ ಅದನ್ನೇ ಮುಂದುವರೆಸಿದ್ದಾರೆ.