ಓವೆಲ್ (ಲಂಡನ್): ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023ನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿದೆ. ಎರಡನೇ ಬಾರಿಗೆ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡಿದ ಭಾರತ ಕಪ್ ಗೆಲ್ಲುವಲ್ಲಿ ಮುಗ್ಗರಿಸಿದೆ. ಇದರಿಂದ 10 ವರ್ಷಗಳಿಂದ ಐಸಿಸಿ ಕಪ್ ಬರ ಮುಂದುವರೆದಿದೆ. ಅಂತಿಮ ದಿನಕ್ಕೆ 280 ರನ್ ಭಾರತಕ್ಕೆ ಬೇಕಾಗಿತ್ತು. ಆಸ್ಟ್ರೇಲಿಯಾಕ್ಕೆ 7 ವಿಕೆಟ್ ಬೇಕಿತ್ತು, ಇದನ್ನು ಮೊದಲ ಇನ್ನಿಂಗ್ಸ್ನಲ್ಲೇ ಕಬಳಿಸಿ ಗೆದ್ದುಕೊಂಡಿತು.
ಆಸ್ಟ್ರೇಲಿಯಾ ಭೋಜನಕ್ಕೂ ಮುನ್ನ ಭಾರತ 7 ವಿಕೆಟ್ಗಳನ್ನು ಕಬಳಿಸಿ 209 ರನ್ ಬೃಹತ್ ಗೆಲುವು ಬರೆಯಿತು. ನ್ಯೂಜಿಲೆಂಡ್ ಮೊದಲ ಟೆಸ್ಟ್ ಚಾಂಪಿಯನ್ಶಿಪ್ ಗೆದ್ದರೆ ಆಸ್ಟ್ರೇಲಿಯಾ ಎರಡನೇ ತಂಡವಾಗಿದೆ.
ನಾಲ್ಕನೇ ದಿನದ ಆಟದ ಅಂತ್ಯಕ್ಕೆ ಭಾರತ ಎರಡನೇ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿತ್ತು. ಕ್ರಿಸ್ನಲ್ಲಿ 44 ರನ್ ಗಳಸಿದ ವಿರಾಟ್ ಕೊಹ್ಲಿ ಮತ್ತು 20 ರನ್ ಮಾಡಿದ್ದ ಅಜಿಂಕ್ಯ ರಹಾನೆ ಇದ್ದರು. ಐದನೇ ದಿನಕ್ಕೆ ಅನುಭವಿ ದ್ವಯರ ಮೇಲೆ ಭಾರತದ ಭರವಸೆ ನೆಟ್ಟಿತ್ತು. ಆದರೆ ಅಂತಿಮ ದಿನದ ಆಟ ಆರಂಭವಾಗುತ್ತಿದ್ದಂತೆ ಆಸ್ಟ್ರೇಲಿಯಾದ ದಾಳಿ ಪ್ರಭಲವಾಗುತ್ತಾ ಬಂತು.
ಇಂದಿನ ಏಳನೇ ಓವರ್ನಲ್ಲಿ ಬೋಲ್ಯಾಂಡ್ ಭಾರತವನ್ನು ಸಂಕಷ್ಟಕ್ಕೆ ನೂಕಿದರು. ಒಂದೇ ಓವರ್ನಲ್ಲಿ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜ ಅವರ ವಿಕೆಟ್ ಕಬಳಿಸಿದರು. ಇದರಿಂದ ಭಾರತಕ್ಕೆ ಗೆಲುವು ದೂರ ಸಾಗಿತು. ಅಲ್ಲದೇ ಪ್ರಿಡಿಕ್ಷನ್ಗಳ ಪ್ರಕಾರ ಆಸ್ಟ್ರೇಲಿಯಾಕ್ಕೆ 94 ಪ್ರತಿಶತದಷ್ಟು ಗೆಲುವಿನ ಅಂಶಇತ್ತು. ಅದರಂತೆ ಕಾಂಗರೂ ಪಡೆ ತನ್ನ ಬೌಲಿಂಗ್ ಪ್ರದರ್ಶನವನ್ನು ನೀಡಿತು.
78 ಬಾಲ್ನಲ್ಲಿ 7 ಬೌಂಡರಿಯಿಂದ 49ರನ್ ಗಳಿಸಿ ಆಡುತ್ತಿದ್ದ ವಿರಾಟ್ 1 ರನ್ನಿಂದ ಟೆಸ್ಟ್ನ 29ನೇ ಅರ್ಧಶತಕದಿಂದ ವಂಚಿತರಾದರು. ಅಲ್ಲದೇ ಅವರ ಬೆನ್ನಲ್ಲೇ ಬಂದ ಆಲ್ರೌಂಡರ್ ರವೀಂದ್ರ ಜಡೇಜ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಬೇಸರ ಉಂಟುಮಾಡಿದರು. ಈ ಎರಡು ವಿಕೆಟ್ ನಂತರ ಕೀಪರ್ ಶ್ರೀಕರ್ ಭರತ್ ಮತ್ತು ಅಜಿಂಕ್ಯಾ ರಹಾನೆ ಮೊದಲ ಇನ್ನಿಂಗ್ಸ್ನಂತೆ ರನ್ ನಿರೀಕ್ಷಿಸಲಾಗಿತ್ತು.