ಕರ್ನಾಟಕ

karnataka

ETV Bharat / sports

ಬ್ಯಾಟರ್​ಗಳ ಅಬ್ಬರ, ಬೌಲರ್​ಗಳ ಆರ್ಭಟ; ಯಾರಿಗೆ ಅನುಕೂಲವಾಲಿವೆ ಸೆಮಿ ಫೈನಲ್​ಗಳ ಪಿಚ್​?

World Cup 2023 semi final venue: ವಿಶ್ವಕಪ್‌ನ ಸೆಮಿಫೈನಲ್‌ಗೆ ವೇದಿಕೆ ಸಿದ್ಧವಾಗಿದೆ. ಬುಧವಾರ ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ಭಾರತ ನ್ಯೂಜಿಲೆಂಡ್ ಮತ್ತು ಗುರುವಾರದ ಎರಡನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

world cup 2023 semi finals venu  eden gardens and wankhede stadium  wankhede stadium pitch report  eden gardens stadium pitch report  ಬ್ಯಾಟ್ಸ್​ಮನ್​ಗಳ ಅಬ್ಬರ  ಬೌಲರ್​ಗಳ ಆರ್ಭಟ  ಯಾರಿಗೆ ಅನುಕೂಲವಾಲಿದೆ ಸೆಮಿ ಫೈನಲ್​ಗಳ ಪಿಚ್  ವಿಶ್ವಕಪ್‌ನ ಸೆಮಿಫೈನಲ್‌ಗೆ ವೇದಿಕೆ ಸಿದ್ಧ  ಮೊದಲ ಸೆಮಿಫೈನಲ್‌ನಲ್ಲಿ ಭಾರತ ನ್ಯೂಜಿಲೆಂಡ್  ಎರಡನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ  ನಾಳೆಯಿಂದ ವಿಶ್ವಕಪ್‌ನ ಸೆಮಿಫೈನಲ್‌ ಆರಂಭ  ರನ್‌ಗಳ ಸುರಿಮಳೆ  ವಾಂಖೆಡೆ ಮತ್ತು ಈಡನ್ ಗಾರ್ಡನ್ಸ್ ಪಿಚ್‌
ಯಾರಿಗೆ ಅನುಕೂಲವಾಲಿದೆ ಸೆಮಿ ಫೈನಲ್​ಗಳ ಪಿಚ್

By ETV Bharat Karnataka Team

Published : Nov 14, 2023, 12:22 PM IST

ಹೈದರಾಬಾದ್​: ನಾಳೆಯಿಂದ ವಿಶ್ವಕಪ್‌ನ ಸೆಮಿಫೈನಲ್‌ ಆರಂಭವಾಗುತ್ತಿದೆ. ಬುಧವಾರ ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮತ್ತು ಗುರುವಾರದ ಎರಡನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಕಾದಾಟ ನಡೆಯಲಿದೆ. ಈಗ ಈ ಸೆಮಿಸ್ ಪಂದ್ಯಗಳ ಸ್ಥಳಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ವಾಂಖೆಡೆ ಮತ್ತು ಈಡನ್ ಗಾರ್ಡನ್ಸ್ ಪಿಚ್‌ಗಳು ಯಾರಿಗೆ ಸೂಕ್ತವಾಗಿವೆ?, ರನ್‌ಗಳ ಸುರಿಮಳೆ ಹರಿಯುವುದೇ?, ವಿಕೆಟ್‌ಗಳು ಉರುಳುತ್ತವೆಯಾ? ಎಂಬುದರ ಬಗ್ಗೆ ಲೆಕ್ಕಾಚಾರ ಶುರುವಾಗಿದೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಸೆಮಿಫೈನಲ್​ಗೆ ವೇದಿಕೆಯಾಗಲಿರುವ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ರನ್​ಗಳ ಮಹಾಪೂರವೇ ಹರಿದು ಬರಲಿದೆ. ಏಕೆಂದರೆ ಈ ವಿಶ್ವಕಪ್‌ನಲ್ಲಿ ಇಲ್ಲಿಯವರೆಗೆ ಇಲ್ಲಿ ನಡೆದ ಪಂದ್ಯಗಳಲ್ಲಿ ಬೃಹತ್ ಸ್ಕೋರ್‌ಗಳು ದಾಖಲಾಗಿವೆ. ಇಲ್ಲಿ ಎರಡು ಪಂದ್ಯಗಳನ್ನು ಆಡಿರುವ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್ ವಿರುದ್ಧ 399/7 ಮತ್ತು ಬಾಂಗ್ಲಾದೇಶ ವಿರುದ್ಧ 382/5 ರನ್​ ಗಳಿಸಿತ್ತು. ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ 357/8 ಸ್ಕೋರ್ ಮಾಡಿತ್ತು. ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನ 291/5 ಸ್ಕೋರ್ ಮಾಡಿದಾಗ, ಮ್ಯಾಕ್ಸ್‌ವೆಲ್ ಅವರ ಅದ್ಭುತ ದ್ವಿಶತಕದಿಂದ ಕಾಂಗರೂ ತಂಡ ಗೆಲುವು ಸಾಧಿಸಿತ್ತು.

ಈ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಮೊದಲು ಬ್ಯಾಟ್ ಮಾಡುವ ತಂಡಕ್ಕೆ ಹೆಚ್ಚಿನ ಯಶಸ್ಸಿನ ಅವಕಾಶವಿದೆ. ಬ್ಯಾಟಿಂಗ್‌ ಮಾಡಿದ ತಂಡ ಬೃಹತ್​ ಸ್ಕೋರ್ ದಾಖಲಿಸಬಹುದಾಗಿದೆ. ಈ ಕೆಂಪು ಜೇಡಿಮಣ್ಣಿನ ಪಿಚ್ ಆಟ ಮುಂದುವರೆದಂತೆ ವೇಗಿಗಳಿಗೆ ಮತ್ತು ಸ್ಪಿನ್ನರ್‌ಗಳಿಗೆ ಸರಿಹೊಂದುವ ಸಾಧ್ಯತೆಯಿದೆ. ಇದರೊಂದಿಗೆ ಚೇಸಿಂಗ್​ನಲ್ಲಿ ಬೌಲಿಂಗ್‌ಗೆ ಅನುಕೂಲವಾಗುವ ಸಾಧ್ಯತೆಯೂ ಇದೆ.

ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ಎರಡನೇ ಸೆಮಿಫೈನಲ್ ನಡೆಯಲಿರುವ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಪಿಚ್ ಬೌಲಿಂಗ್ ಮತ್ತು ಬ್ಯಾಟಿಂಗ್‌ಗೆ ಸಮಾನವಾಗಿದೆ. ಈ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶದ ವಿರುದ್ಧ ನೆದರ್ಲ್ಯಾಂಡ್​ 229 ರನ್ ಗಳಿಸಿತ್ತು ಮತ್ತು ನಂತರ ಎದುರಾಳಿಯನ್ನು 142 ಕ್ಕೆ ಆಲೌಟ್ ಮಾಡಿತ್ತು. ಇನ್ನೊಂದು ಪಂದ್ಯದಲ್ಲಿ ಬಾಂಗ್ಲಾದೇಶ ಮೊದಲು 204 ರನ್ ಗಳಿಸಿತ್ತು. ಪಾಕಿಸ್ತಾನ 32.3 ಓವರ್‌ಗಳಲ್ಲಿ ಗುರಿ ತಲುಪಿತ್ತು.

ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 326/5ರ ಬೃಹತ್ ಸ್ಕೋರ್ ಮಾಡಿದ್ದು ಗೊತ್ತೇ ಇದೆ. ಆ ಬಳಿಕ ಬೌಲಿಂಗ್ ಅಬ್ಬರಿಸಿದ ಸಫಾರಿ ತಂಡ 83ಕ್ಕೆ ಕುಸಿದಿತ್ತು. ಪಾಕಿಸ್ತಾನದ ವಿರುದ್ಧ ಆಸೀಸ್ 337/9 ರನ್ ಗಳಿಸಿ 93 ರನ್‌ಗಳಿಂದ ಗೆದ್ದಿತ್ತು. ಈ ಸ್ಕೋರ್‌ಗಳನ್ನು ನೋಡಿದಾಗ ಇಲ್ಲಿನ ಪಿಚ್ ಮೊದಲು ಬ್ಯಾಟಿಂಗ್ ಮಾಡಲು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಲು ಸಹಾಯ ಮಾಡುತ್ತದೆ ಎಂದು ತೋರುತ್ತದೆ. ಆದರೆ ಬಲಿಷ್ಠ ಬೌಲಿಂಗ್ ಇದ್ದರೆ ಎದುರಾಳಿಯನ್ನು ಮೊದಲ ಸ್ಥಾನದಲ್ಲಿಯೂ ಕಡಿಮೆ ಸ್ಕೋರ್​ಗೆ ಕಟ್ಟಿಹಾಕುವ ಸಾಧ್ಯತೆ ಇದೆ.

ಓದಿ:ವಿಶ್ವಕಪ್​ ಕ್ರಿಕೆಟ್: ಕಿವೀಸ್​ ವಿರುದ್ಧದ ಸೆಮೀಸ್​ ಫೈಟ್​ಗೆ ಮುಂಬೈ ತಲುಪಿದ ಟೀಮ್​ ಇಂಡಿಯಾ

ABOUT THE AUTHOR

...view details