ಅಹಮದಾಬಾದ್, ಗುಜರಾತ್:ಭಾರತ ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಪಂದ್ಯವನ್ನು ಆಡಲು ಸಜ್ಜಾಗಿದೆ. ಈ ಪಂದ್ಯಕ್ಕಾಗಿ ಒಂದೆರಡು ದಿನ ಮುನ್ನ ಅಹಮದಾಬಾದ್ ತಲುಪಿದ್ದ ಪಾಕಿಸ್ತಾನ ತಂಡ ಮೈದಾನದಲ್ಲಿ ಬೆವರು ಹರಿಸಿತ್ತು. ಬಳಿಕ ಕೆಲವು ಗುಜರಾತಿ ಖಾದ್ಯಗಳನ್ನು ಸೇವಿಸಿ ಎಂಜಾಯ್ ಮಾಡಿದರು.
ಗುಜರಾತಿ ಖಾದ್ಯಗಳನ್ನು ಸೇವಿಸಿದ ನಂತರ ಪಾಕಿಸ್ತಾನ ತಂಡವು ಸಾಕಷ್ಟು ಖುಷಿಪಟ್ಟಿತ್ತು. ಅಹಮದಾಬಾದ್‌ನಲ್ಲಿ ನಡೆಯುವ ಈ ಪಂದ್ಯಕ್ಕೆ ಪಾಕ್ ಪ್ರೇಕ್ಷಕರಿಗೆ ಯಾವುದೇ ವೀಸಾ ಅರ್ಜಿಯನ್ನು ಸ್ವೀಕರಿಸದ ಕಾರಣ ಬಾಬರ್ ಆಜಾಮ್ ಬಳಗ ತಮ್ಮ ತವರು ಅಭಿಮಾನಿಗಳ ಬೆಂಬಲವನ್ನು ಕಳೆದುಕೊಂಡಿದೆ. ಇದರಿಂದ ತಂಡವು ನಿರಾಶೆಗೊಂಡಿದೆ. ಈ ಪಂದ್ಯ ವೀಕ್ಷಿಸಲು ಪಾಕಿಸ್ತಾನದ ಅಭಿಮಾನಿಗಳು ಭಾರತಕ್ಕೆ ಬರುವಂತಿಲ್ಲ.
ಮಾಲ್, ಬಿರಿಯಾನಿ, ಖಕ್ರಾ ಮತ್ತು ಜಿಲೇಬಿ:ಪಾಕಿಸ್ತಾನ ತಂಡ ಭಾರತದಲ್ಲಿ ಹೆಚ್ಚಿನ ಸಮಯವನ್ನು ಹೈದರಾಬಾದ್‌ನಲ್ಲಿ ಕಳೆದಿದೆ. ಅಲ್ಲಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಆದರೆ, ಇತರ ತಂಡಗಳಿಗೆ ಹೋಲಿಸಿದರೆ ಅವರು ಭದ್ರತೆಯ ಅಡಿಯಲ್ಲಿದ್ದಾರೆ. ಹೈದರಾಬಾದ್‌ನಲ್ಲಿ ಸಹಜವಾಗಿಯೇ ಬಿಗಿ ಭದ್ರತೆಯ ನಡುವೆ ಜಿವಿಕೆ ಮಾಲ್‌ಗೆ ಭೇಟಿ ನೀಡಿದ ಅವರು ಅಲ್ಲಿ ಬಿರಿಯಾನಿ ಮಾತ್ರ ಸವಿಯಲು ಸಾಧ್ಯವಾಯಿತು. ಸದ್ಯ ಪಾಕಿಸ್ತಾನ ತಂಡ 2 ಪಂದ್ಯಗಳಲ್ಲಿ 2 ಗೆಲುವಿನೊಂದಿಗೆ ಅಗ್ರ ತಂಡಗಳ ಪಟ್ಟಿಯಲ್ಲಿದೆ.
ಹೈದರಾಬಾದ್ ನಂತರ ಇದೀಗ ಪಾಕಿಸ್ತಾನ ತಂಡವು ಅಹಮದಾಬಾದ್‌ನ ಹಯಾತ್ ರೀಜೆನ್ಸಿಯಲ್ಲಿ ಗುಜರಾತಿ ಖಾದ್ಯಗಳ ರುಚಿಯನ್ನು ಸವಿದಿದೆ. ಪಾಕಿಸ್ತಾನದ ಆಟಗಾರರು ಈ ಆಹಾರವನ್ನು ನಿಜವಾಗಿಯೂ ಇಷ್ಟಪಟ್ಟಿದ್ದಾರೆ. ಆಟಗಾರರು ಖಕ್ರಾ ಮತ್ತು ಜಿಲೇಬಿಯನ್ನು ಸೇವಿಸಿದರು. ತಂಡದ ಕೆಲ ಆಟಗಾರರು ಬಿರಿಯಾನಿ ರುಚಿಯನ್ನೂ ಸಹ ನೋಡಿದರು. ಶನಿವಾರ ಭಾರತ ವಿರುದ್ಧದ ಪಂದ್ಯದ ನಂತರ ಪಾಕಿಸ್ತಾನ ತಂಡ ಬೆಂಗಳೂರಿಗೆ ತೆರಳಲಿದೆ. ಪಂದ್ಯದ ಬಳಿಕ ಪಾಕ್ ತಂಡವು ಗುಜರಾತ್‌ನ ಕೆಲ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ.
ಪಾಕಿಸ್ತಾನ ತಂಡಕ್ಕೆ ಸಿಗದ ತವರು ಬೆಂಬಲ: ಈ ಬಾರಿಯ ವಿಶ್ವಕಪ್‌ನಲ್ಲಿ ಪಾಕ್ ತಂಡವು ಏಕಾಂಗಿಯಾಗಿದೆ. ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳಿಗೆ ಪಂದ್ಯ ವೀಕ್ಷಿಸಲು ಭಾರತಕ್ಕೆ ಬರಲು ವೀಸಾ ನೀಡಿಲ್ಲ. ಇದಲ್ಲದೇ 120 ಪಾಕಿಸ್ತಾನಿ ಪತ್ರಕರ್ತರ ಪೈಕಿ 65 ಮಂದಿಗೆ ವೀಸಾ ನೀಡಲು ಐಸಿಸಿ ಶಿಫಾರಸು ಮಾಡಿದೆ.
ಭಾರತ-ಪಾಕಿಸ್ತಾನ ಪಂದ್ಯದ ಮೊದಲು ಅಂದ್ರೆ, ಪಂದ್ಯದ ಮುನ್ನಾದಿನದಂದು ಒಬ್ಬ ಪಾಕಿಸ್ತಾನಿ ಪತ್ರಕರ್ತ ಮಾತ್ರ ಅಹಮದಾಬಾದ್‌ಗೆ ತೆರಳಬಹುದಾಗಿದೆ. ಇತರ ಕೆಲವು ಪತ್ರಕರ್ತರು ಪಂದ್ಯದ ದಿನ ಬೆಳಗ್ಗೆ ತಲುಪಲು ಅವಕಾಶ ನೀಡಲಾಗಿದೆ. ತಂಡವು ತನ್ನ ಬೆಂಬಲಿಗರಿಲ್ಲದೇ ಮತ್ತು ಮಾಧ್ಯಮಗಳ ಅನುಪಸ್ಥಿತಿಯಲ್ಲಿ ವಿಶ್ವಕಪ್ 2023 ಪಂದ್ಯವನ್ನು ಆಡುತ್ತಿದೆ. ಇದು ತಂಡಕ್ಕೆ ಏಕಾಂಗಿ ಆಗಿರುವ ಭಾವನೆ ನೀಡುತ್ತಿದೆ.
ಓದಿ:Cricket World Cup: ರೋಹಿತ್ ಬ್ಯಾಟಿಂಗ್ನಲ್ಲಿ ಸುಧಾರಣೆ.. ಬಾಲ್ಯದ ಕೋಚ್ ಹೇಳಿದ ಗುಟ್ಟೇನು?