ಕರ್ನಾಟಕ

karnataka

ETV Bharat / sports

ಆಟದ ವೇಳೆ ಸ್ನಾಯು ಸೆಳೆತ: ಕೊಹ್ಲಿಗೆ ನೆರವಾದ ಕಿವೀಸ್ ಕ್ರಿಕೆಟಿಗರ ವಿರುದ್ಧ ಆಸ್ಟ್ರೇಲಿಯಾ ಮಾಜಿ ವೇಗಿಯ ಆಕ್ರೋಶ - ಇಶಾನ್ ಕಿಶನ್

Ex-Aussie bowler Simon O'Donnell questions Kiwis: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದಾಖಲೆಯ 50ನೇ ಶತಕ ಸಿಡಿಸಿದರು. ಈ ವೇಳೆ ಕೆಲಕಾಲ ಸ್ನಾಯು ಸೆಳೆತದಿಂದ ಬಳಲುತ್ತಿದ್ದ ಕೊಹ್ಲಿಗೆ ಕೆಲವು ನ್ಯೂಜಿಲೆಂಡ್ ಆಟಗಾರರು ಸಹಾಯ ಮಾಡಿದ್ದರು. ಇದಕ್ಕೆ ಆಸೀಸ್‌ ತಂಡದ ಮಾಜಿ ಆಟಗಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Ex-Aussie bowler questions Kiwis
ವಿರಾಟ್ ಕೊಹ್ಲಿ ನೋವು ನೋಡಿ ಆನಂದಿಸುತ್ತಿದ್ದ ಆಸ್ಟ್ರೇಲಿಯನ್ ಮಾಜಿ ಆಟಗಾರ​: ನ್ಯೂಜಿಲೆಂಡ್ ತಂಡ ವಿರಾಟ್​ಗೆ ಸಹಾಯ ಮಾಡಿದಕ್ಕೆ ಸೈಮನ್ ಆಕ್ರೋಶ

By PTI

Published : Nov 17, 2023, 8:38 AM IST

Updated : Nov 17, 2023, 9:10 AM IST

ಮುಂಬೈ:ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್‌ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅದ್ಭುತ ಶತಕ ಬಾರಿಸಿದ್ದಾರೆ. ಈ ಪಂದ್ಯದಲ್ಲಿ 50ನೇ ಶತಕ ಪೂರ್ಣಗೊಳಿಸಿ, ಸಚಿನ್ ತೆಂಡೂಲ್ಕರ್ ದಾಖಲೆ ಮುರಿದರು. ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆಯನ್ನೂ ಕೊಹ್ಲಿ ಮಾಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಇನ್ನಿಂಗ್ಸ್ ಸಮಯದಲ್ಲಿ ಕೊಹ್ಲಿ ಸ್ನಾಯು ಸೆಳೆತದಿಂದ ಬಳಲುತ್ತಿದ್ದರು. ಈ ಸಂದರ್ಭದಲ್ಲಿ, ಕೆಲವು ನ್ಯೂಜಿಲೆಂಡ್ ಆಟಗಾರರು ಸಹಾಯಕ್ಕೆ ಧಾವಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಸೈಮನ್ ಒ'ಡೊನೆಲ್ ಅವರಿಗಿದು ಪಥ್ಯವಾಗಿಲ್ಲ. ಕೊಯ್ಲಿಗೆ ಸಹಾಯ ಮಾಡಿದ ನ್ಯೂಜಿಲೆಂಡ್ ವಿರುದ್ಧ ಅವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಈ ಪಂದ್ಯದಲ್ಲಿ ಕೊಹ್ಲಿ 117 ರನ್‌ ಗಳಿಸಿ ಯಶಸ್ವಿ ಆಟವಾಡಿದ್ದರು. ತಮ್ಮ ಇನ್ನಿಂಗ್ಸ್‌ನಲ್ಲಿ 113 ಎಸೆತಗಳನ್ನು ಎದುರಿಸಿ, ಒಂಬತ್ತು ಬೌಂಡರಿ, ಎರಡು ಸಿಕ್ಸರ್‌ ಬಾರಿಸಿದ್ದರು. ಇನ್ನೊಂದೆಡೆ, ಶ್ರೇಯಸ್ ಅಯ್ಯರ್ 70 ಎಸೆತಗಳಲ್ಲಿ 105 ರನ್ ಗಳಿಸಿದ್ದರು. ಅಯ್ಯರ್ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಮತ್ತು ಎಂಟು ಸಿಕ್ಸರ್‌ಗಳಿದ್ದವು.

ಸೈಮನ್ ಹೇಳಿದ್ದೇನು?: ''ಟೀಂ ಇಂಡಿಯಾ 400 ರನ್‌ಗಳತ್ತ ಸಾಗುತ್ತಿರುವಾಗ ವಿರಾಟ್ ಕೊಹ್ಲಿಗೆ ಸ್ನಾಯು ಸೆಳೆತವಾಯಿತು. ಅಂತಹ ಪರಿಸ್ಥಿತಿಯಲ್ಲಿ ಕೆಲವು ನ್ಯೂಜಿಲೆಂಡ್ ಆಟಗಾರರು ಅವರಿಗೆ ಸಹಾಯ ಮಾಡಲು ಹೋದರು. ನಿಮ್ಮ ದೇಶದ ಬೌಲರ್‌ಗಳನ್ನು ಕೊಲ್ಲುತ್ತಿದ್ದರೆ, ನೀವು ಅವರಿಗೆ ಸಹಾಯ ಮಾಡುತ್ತೀರಾ? ಏನೇ ನಡೆಯುತ್ತಿದ್ದರೂ ನ್ಯೂಜಿಲೆಂಡ್ ಆಟಗಾರರು ವಿರಾಟ್ ಕೊಹ್ಲಿಯ ಸಮೀಪ 20 ಮೀಟರ್‌ಒಳಗೆ ಹೋಗಬಾರದಿತ್ತು. ನ್ಯೂಜಿಲೆಂಡ್ ಆಟಗಾರರು ಕೊಹ್ಲಿಯ ಬ್ಯಾಟ್ ಎತ್ತಿ ಕೊಟ್ಟರು. ಇದು ಸರಿಯಲ್ಲ. ಸ್ವತಃ ಕೊಹ್ಲಿಯೇ ಬ್ಯಾಟ್ ಎತ್ತಿಕೊಳ್ಳುವಂತೆ ಮಾಡಬೇಕಿತ್ತು'' ಎಂದು ಸೈಮನ್​ ಕಿಡಿಕಾರಿದ್ದಾರೆ.

ಕ್ರೀಡಾ ಮನೋಭಾವಕ್ಕೆ ಸಾಕ್ಷಿ:ನ್ಯೂಜಿಲೆಂಡ್ ತಂಡವು ತನ್ನ ಕ್ರೀಡಾ ಮನೋಭಾವಕ್ಕೆ ಹೆಸರುವಾಸಿಯಾಗಿದೆ. ಕೊಹ್ಲಿಗೆ ಸಹಾಯ ಮಾಡುವ ಮೂಲಕ ಅವರು ಇದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕ್ರಿಕೆಟ್‌ನಲ್ಲಿ ಇಂತಹ ಘಟನೆಗಳು ನಡೆಯವುದು ಸಾಮಾನ್ಯ. ಇದೇ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಪರ ಶತಕ ಬಾರಿಸಿದ ಡ್ಯಾರಿಲ್ ಮಿಚೆಲ್ ಕೂಡ ಸ್ನಾಯು ಸೆಳೆತದಿಂದ ಬಳಲುತ್ತಿದ್ದರು. ಆಗ ಇಶಾನ್ ಕಿಶನ್ ಅವರಿಗೆ ನೆರವಾದರು. ಶುಭ್‌ಮನ್ ಗಿಲ್ ಕೂಡ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು.

ಇದನ್ನೂ ಓದಿ:ಪಿಚ್ ಬದಲಾವಣೆ ವಿವಾದ ತಳ್ಳಿಹಾಕಿದ ಕಿವೀಸ್​ ನಾಯಕ; ಭಾರತ ತಂಡಕ್ಕೆ ಅಭಿನಂದಿಸಿದ ಕೇನ್ ವಿಲಿಯಮ್ಸನ್

Last Updated : Nov 17, 2023, 9:10 AM IST

ABOUT THE AUTHOR

...view details