ಕರ್ನಾಟಕ

karnataka

ETV Bharat / sports

'ಈ ಸಾರಿ ವರ್ಲ್ಡ್​ ಕಪ್​ ನಮ್ದೇ': ಫೈನಲ್​ ಪಂದ್ಯದ ಮೇಲೆ ರಜಿನಿಕಾಂತ್​ ವಿಶ್ವಾಸ - ಮುಂಬೈನಿಂದ ಚೆನ್ನೈಗೆ ಮರಳಿದ

Rajinikanth confident that India will win the world cup: ಭಾರತ-ನ್ಯೂಜಿಲೆಂಡ್ ಪಂದ್ಯವನ್ನು ಹಿರಿಯ ನಟ ರಜಿನಿಕಾಂತ್ ವೀಕ್ಷಿಸಿದ್ದು ಗೊತ್ತೇ ಇದೆ. ಇತ್ತೀಚೆಗೆ ಅವರು ವಿಶ್ವಕಪ್ ಫೈನಲ್ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

Super star rajinikanth  world cup 2023  india will win the world cup  ಈ ಸಾರಿ ವರ್ಲ್ಡ್​ ಕಪ್​ ನಮ್ದೆ  ಫೈನಲ್​ ಪಂದ್ಯದ ಮೇಲೆ ರಜನಿಕಾಂತ್​ ಮನದಾಳದ ಮಾತು  ಭಾರತ ನ್ಯೂಜಿಲೆಂಡ್ ಪಂದ್ಯದಲ್ಲಿ ಸ್ಟಾರ್ ಹೀರೋ ರಜನಿಕಾಂತ್  ವಿಶ್ವಕಪ್ ಫೈನಲ್ ಬಗ್ಗೆ ಕೆಲವೊಂದು ವಿಷಯ  ಸೂಪರ್​ ಸ್ಟಾರ್ ರಜನಿಕಾಂತ್ ಕ್ರಿಕೆಟ್​ನ ಕಟ್ಟಾ ಅಭಿಮಾನಿ  ಸೆಮಿಫೈನಲ್ ಪಂದ್ಯಕ್ಕೆ ಕುಟುಂಬ ಸಮೇತರಾಗಿ ತೆರಳಿ  ಮುಂಬೈನಿಂದ ಚೆನ್ನೈಗೆ ಮರಳಿದ  ವಿಶ್ವಕಪ್ ಫೈನಲ್​ ಕುರಿತು ಆಸಕ್ತಿದಾಯಕ ವಿಷಯ
ಈ ಸಾರಿ ವರ್ಲ್ಡ್​ ಕಪ್​ ನಮ್ದೆ

By ETV Bharat Karnataka Team

Published : Nov 17, 2023, 1:20 PM IST

ಅಹಮದಾಬಾದ್(ಗುಜರಾತ್)​:ತಮಿಳುಸೂಪರ್ಸ್ಟಾರ್ ರಜಿನಿಕಾಂತ್ ಅವರು ಕ್ರಿಕೆಟ್​ನ ಕಟ್ಟಾ ಅಭಿಮಾನಿ. ತಮ್ಮ ನೆಚ್ಚಿನ ಕ್ರಿಕೆಟಿಗರ ಬಗ್ಗೆಯೂ ಆಗಾಗ ಅವರು ಮಾತನಾಡುತ್ತಾರೆ. ಇತ್ತೀಚೆಗೆ ನಡೆದ ಭಾರತ-ನ್ಯೂಜಿಲೆಂಡ್ ಸೆಮಿ ಫೈನಲ್ ಪಂದ್ಯಕ್ಕೆ ಕುಟುಂಬಸಮೇತರಾಗಿ ಆಗಮಿಸಿ ಸಂಭ್ರಮಿಸಿದ್ದರು. ಮುಂಬೈನಿಂದ ಚೆನ್ನೈಗೆ ಮರಳಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಶ್ವಕಪ್ ಫೈನಲ್​ ಕುರಿತು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡರು.

ರಜಿನಿಕಾಂತ್​ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಕುರಿತು ಮಾತನಾಡುತ್ತಾ, ನಾವು ಮೊದಲು ಸ್ವಲ್ಪ ಹೊತ್ತು ಟೆನ್ಷನ್ ಆಗಿದ್ದೆವು. ಪ್ರತಿ ವಿಕೆಟ್ ಬೀಳುತ್ತಿದ್ದಂತೆ ಪರಿಸ್ಥಿತಿ ನಮ್ಮ ಪರವಾಗಿ ಬದಲಾಯಿತು. ಆದರೆ, ಮೊದಲ ಒಂದೂವರೆ ಗಂಟೆಗಳ ಕಾಲ ನಾವು ತುಂಬಾ ಚಿಂತಿತರಾಗಿದ್ದೆವು. ಈ ಬಾರಿಯ ವಿಶ್ವಕಪ್ ನಮ್ದೇ. ಶೇ.100ರಷ್ಟು ವಿಶ್ವಕಪ್​ ಭಾರತಕ್ಕೆ ಬರಲಿದೆ ಎಂದರು. ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ ಉತ್ತಮ ಬೌಲಿಂಗ್ ಮಾಡಿದ್ದ ಮೊಹಮ್ಮದ್ ಶಮಿ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಸೆಮಿ ಫೈನಲ್‌ನಲ್ಲಿ ಭಾರತ ತಂಡದ ಗೆಲುವಿಗೆ ನೂರಕ್ಕೆ ನೂರು ಅವರೇ ಕಾರಣ ಎಂದು ಉತ್ತರಿಸಿದರು.

ಅಲ್ಲದೇ, ಸೆಮಿ ಫೈನಲ್​ನಲ್ಲಿ ದಾಖಲೆ ಸೃಷ್ಟಿಸಿದ ಕೊಹ್ಲಿ ಹಾಗೂ ಶಮಿಗೆ ರಜಿನಿ ಅಭಿನಂದನೆ ಸಲ್ಲಿಸಿದ್ದಾರೆ. ಸ್ಪಿನ್ನರ್ ಅಶ್ವಿನ್ ಜೊತೆಗಿನ ಅವರ ಇತ್ತೀಚಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಫೈನಲ್​ ಪಂದ್ಯ ಭಾನುವಾರ ಆಸ್ಟ್ರೇಲಿಯಾ ಮತ್ತು ಭಾರತ ಮಧ್ಯೆ ನಡೆಯಲಿದೆ. ಎರಡು ದಶಕಗಳ ನಂತರ ಮತ್ತೊಮ್ಮೆ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗುತ್ತಿದೆ. ಗುರುವಾರ ನಡೆದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಆಸೀಸ್ 3 ವಿಕೆಟ್​ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಟೀಂ ಇಂಡಿಯಾ ಜೊತೆ ಪ್ರಶಸ್ತಿ ಹೋರಾಟಕ್ಕೆ ಸಜ್ಜಾಗಿದೆ. ಬೌಂಡರಿ ಮತ್ತು ರನ್‌ಗಳ ಕೊರತೆಯಿಂದ ಕಡಿಮೆ ಸ್ಕೋರ್‌ ಮಧ್ಯೆಯೂ ಸೆಮಿಸ್ ಪಂದ್ಯ ರೋಚಕವಾಗಿ ಸಾಗಿತು. ಮೊದಲಿಗೆ ಸ್ಟಾರ್ಕ್, ಹೇಜಲ್‌ವುಡ್ ಹಾಗೂ ಹೆಡ್​ನಿಂದಾಗಿ ಕುಸಿಯುವ ಭೀತಿಯಲ್ಲಿದ್ದ ದಕ್ಷಿಣ ಆಫ್ರಿಕಾ, ಮಿಲ್ಲರ್ (101) ಅದ್ಭುತ ಹೋರಾಟದಿಂದ 212 ರನ್ ಗಳಿಸಲಷ್ಟೇ ಶಕ್ತವಾಯಿತು. ಅಲ್ಪ ವಿರಾಮದಲ್ಲಿ ಆಸೀಸ್ ಗೊಂದಲದಲ್ಲಿ ಸಿಲುಕಲಿಲ್ಲ. ಗುರಿ ಬೆನ್ನತ್ತಿದ ತಂಡ 47.2 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಹೆಡ್ (62) ನಿರ್ಣಾಯಕ ಇನಿಂಗ್ಸ್ ಆಡಿದರು. ಬೌಲಿಂಗ್​ನಲ್ಲಿ ದಕ್ಷಿಣ ಆಫ್ರಿಕಾ ತೀವ್ರ ಹೋರಾಟ ನಡೆಸಿದರೂ ಸ್ಕೋರ್ ಕಡಿಮೆ ಇದ್ದ ಕಾರಣ ಅದೃಷ್ಟ ಕೈಹಿಡಿಯಲಿಲ್ಲ.

ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ, 'ಜೈಲರ್' ಮೂಲಕ ಸೂಪರ್ ಹಿಟ್ ಪಡೆದಿರುವ ರಜಿನಿಕಾಂತ್ ಸದ್ಯ ಟಿಜೆ ಜ್ಞಾನವೇಲ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಶೂಟಿಂಗ್ ವೇಗವಾಗಿ ನಡೆಯುತ್ತಿದೆ. ದೊಡ್ಡ ತಾರಾಗಣದಲ್ಲಿ ಇದು ತಯಾರಾಗುತ್ತಿದೆ. ಅಲ್ಲದೇ ಮಗಳು ಐಶ್ವರ್ಯ ನಿರ್ದೇಶನದ ರಜಿನಿ ಅಭಿನಯದ 'ಲಾಲ್ ಸಲಾಂ' ಚಿತ್ರ ಸಂಕ್ರಾಂತಿ ಉಡುಗೊರೆಯಾಗಿ ಬಿಡುಗಡೆಯಾಗಲಿದೆ. ಸದ್ಯ ಲಾಲ್​ ಸಲಾಂ ಟೀಸರ್​ ಬಿಡುಗಡೆಯಾಗಿದೆ.

ಇದನ್ನೂ ಓದಿ:ವಿಶಾಖದಲ್ಲಿ ಭಾರತ-ಆಸೀಸ್ ಪಂದ್ಯ; ಟಿಕೆಟ್‌ಗಾಗಿ ಮುಗಿಬಿದ್ದ ಯುವಜನತೆ

ABOUT THE AUTHOR

...view details