ನವದೆಹಲಿ: ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ಫೈನಲ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಫೈನಲ್ ಪಂದ್ಯದಲ್ಲಿ ಸೆಣಸಾಡುತ್ತಿರುವ ಮಧ್ಯೆ ಗೂಗಲ್ ಇಂಡಿಯಾ ಭಾನುವಾರ 2003 ಮತ್ತು 2023 ರ ನಡುವಿನ ವಿಶ್ವಕಪ್ ಫೈನಲ್ಗಳ ನಡುವಿನ ಹೋಲಿಕೆಗಳನ್ನು ತೋರಿಸುವ ಕುತೂಹಲಕಾರಿ ಮಾಹಿತಿಗಳ ಪಟ್ಟಿಯನ್ನು ಹಂಚಿಕೊಂಡಿದೆ.
ಗೂಗಲ್ ಎಕ್ಸ್ ನಲ್ಲಿ ಒಂದು ಲಿಸ್ಟ್ ಶೇರ್ ಮಾಡಿದ್ದು, "ನಾವು ಮತ್ತೆ ಭೇಟಿಯಾಗುತ್ತಿದ್ದೇವೆ, 20 ವರ್ಷಗಳ ನಂತರ #INDvsAUS" ಎಂದು ಇದಕ್ಕೆ ಕ್ಯಾಪ್ಷನ್ ನೀಡಿದೆ. ಗೂಗಲ್ 2023 ಮತ್ತು 2003ರಲ್ಲಿ ವಿಶ್ವಕಪ್ ತಂಡವನ್ನು ಮುನ್ನಡೆಸಲು ರೋಹಿತ್ ಶರ್ಮಾ ಮತ್ತು ಸೌರವ್ ಗಂಗೂಲಿ ಅವರನ್ನು ಮೊದಲ ಬಾರಿಯ ನಾಯಕರು ಎಂದು ಪಟ್ಟಿ ಮಾಡಿದೆ.
2003 ಮತ್ತು 2023ರ ಫೈನಲ್ ಪಂದ್ಯಗಳನ್ನು ನೋಡಿದರೆ ಆಗ ಸಚಿನ್ ತೆಂಡೂಲ್ಕರ್ ಅತ್ಯಧಿಕ ರನ್ ಮಾಡಿದ್ದರೆ ಈ ಬಾರಿ ವಿರಾಟ್ ಕೊಹ್ಲಿ ಆ ಸ್ಥಾನದಲ್ಲಿದ್ದಾರೆ ಎಂದು ಹೇಳಿದೆ. ಹಾಗೆಯೇ ಆಗ ಸೌರವ್ ಗಂಗೂಲಿ ಮೊದಲ ಬಾರಿಗೆ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದ್ದರೆ, ಈ ಬಾರಿ ಆ ಸ್ಥಾನದಲ್ಲಿ ರೋಹಿತ್ ಶರ್ಮಾ ಇದ್ದಾರೆ ಎಂದು ಗೂಗಲ್ ಹೇಳಿದೆ.